ಚಿಕ್ಕಬಳ್ಳಾಪುರ: ಜಮೀನು ವಿವಾದದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಆವುಲನಾಗೇನಹಳ್ಳಿಯಲ್ಲಿ ಬೆಂಗಳೂರು ಉತ್ತರ ತಾಲೂಕಿನ ಬಂಡಿಕೋಡಿಗೇನಹಳ್ಳಿಯ ಗ್ರಾ.ಪಂ. ಕಾರ್ಯದರ್ಶಿರವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ.
ಕಾರ್ಯದರ್ಶಿ ಎ.ಸಿ.ರಾಮಾಂಜನೇಯ (52) ಮೃತ. ಇವರ ಪತ್ನಿ ಮಂಜುಳಾ (45) ದುಷ್ಕರ್ಮಿಗಳ ದಾಳಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಐದಾರು ವರ್ಷಗಳ ಹಿಂದೆ ಆವುಲನಾಗೇನಹಳ್ಳಿಯಲ್ಲಿ ರಾಮಾಂಜನೇಯಗೆ ಸರ್ಕಾರಿ ಗೋಮಾಳ ಜಮೀನು ಸರ್ವೆ ನಂಬರ್ 280 ರಲ್ಲಿ 2 ಎಕರೆ 20 ಗುಂಟೆ ಮಂಜೂರಾಗಿದ್ದು ಇದರ ಪಕ್ಕದಲ್ಲಿ ಸ್ಮಶಾನಕ್ಕೆ ಮೀಸಲಿಟ್ಟಿದ್ದ ಸರ್ಕಾರಿ ಗೋಮಾಳದಲ್ಲಿನ 3 ಎಕರೆ ಜಮೀನನ್ನು ಅರೂರು ಅರವಿಂದ ಎಂಬುವರು ಅಕ್ರಮ ಒತ್ತುವರಿ ಮಾಡಿಕೊಂಡು ಬೇಲಿ ಹಾಕಿದ್ದರು. ಇದರ ವಿರುದ್ಧ ರಾಮಾಂಜನೇಯ ಪೊಲೀಸರಿಗೆ ದೂರು ಸಲ್ಲಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವಿಚಾರವಾಗಿ ಒತ್ತುವರಿದಾರರು ಹಲವು ಬಾರಿ ಗಲಾಟೆ ಮಾಡಿದ್ದಾರೆ. ಇದರ ನಡುವೆ ನ್ಯಾಯಾಲಯದ ಕೇಸ್ ವಿಚಾರಣೆಯಲ್ಲಿ ಭಾಗಿಯಾದ ಬಳಿಕ ಜಮೀನಿನಲ್ಲಿ ನಿಂತಿದ್ದ ರಾಮಾಂಜನೇಯ ಮತ್ತು ಮಂಜುಳಮ್ಮ ಮೇಲೆ ಅರೂರಿನ ಚಿಕ್ಕಮಂಜುನಾಥ್, ದೊಡ್ಡ ಮಂಜುನಾಥ್, ಅರವಿಂದ ಸೇರಿ ಮತ್ತಿತರರು ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಮಾಂಜನೇಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆವುಲನಾಗೇನಹಳ್ಳಿ ಗ್ರಾಮಕ್ಕೆ ಸಚಿವ ಡಾ ಕೆ.ಸುಧಾಕರ್ ಮಂಗಳವಾರ ಭೇಟಿ ನೀಡಿ, ಮೃತ ರಾಮಾಂಜಿನೇಯರ ಅಂತಿಮ ದರ್ಶನ ಪಡೆದರು. ಪ್ರಕರಣದ ಬಗ್ಗೆ ತನಿಖೆ ನಡೆಸಿ, ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
