ಬೆಂಗಳೂರು: ಭೂಸುಧಾರಣೆ ತಿದ್ದುಪಡಿ ಕಾಯ್ದೆ ಅನುಷ್ಠಾನಕ್ಕೆ ಮುಂದಡಿ ಇಟ್ಟಿರುವ ರಾಜ್ಯ ಸರ್ಕಾರ, ಹಿಂದಿನ ಎಲ್ಲ ಅಕ್ರಮ ಸಾಗುವಳಿಗೆ ಸಂಬಂಧಿಸಿದಂತೆ (ಭೂಸುಧಾರಣಾ ಕಾಯ್ದೆ 1961ರ ಕಲಂ 79ಎ, 79 ಬಿ ಉಲ್ಲಂಘನೆ ಸೇರಿ) ಉಪವಿಭಾಗಾಧಿಕಾರಿ ಅಥವಾ ತಹಸೀಲ್ದಾರರ ಹಂತದಲ್ಲಿ ಬಾಕಿ ಇರುವ 13814 ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ.
ಈ ಸಂಬಂಧ ಅಧಿಸೂಚನೆ ಹೊರಟ ದಿನಾಂಕಕ್ಕಿಂತ ಮುಂಚಿತವಾಗಿ ಉಪವಿಭಾಗಾಧಿಕಾರಿ ಪ್ರಕರಣ ಇತ್ಯರ್ಥಗೊಳಿಸಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಆದೇಶ ಹೊರಡಿಸಿದ್ದರೂ, ಭೂಮಿ ತಂತ್ರಾಂಶದಲ್ಲಿ ಇಂಡೀಕರಣಗೊಳಿಸದಿರುವ ಪ್ರಕರಣಗಳಿಗೆ ಈ ಆದೇಶ ಅನ್ವಯವಾಗಲ್ಲ. ಅರ್ಥಾತ್, ಸರ್ಕಾರದ ಹೆಸರಿಗೆ ಪಹಣಿ ದಾಖಲಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.
2012 ನ.28ಕ್ಕಿಂತ ಮೊದಲು ಭೂ ಸುಧಾರಣೆ ಕಾಯ್ದೆ 79ಎ ಮತ್ತು 79ಬಿ ಉಲ್ಲಂಘನೆ ಸಂಶಯದಡಿ ದಾಖಲಾಗಿರುವ ಪ್ರಕರಣಗಳಲ್ಲಿ ಇನ್ನೂ ಮಾರಾಟಗಾರನ ಹೆಸರಿನಲ್ಲಿಯೇ ಪಹಣಿ ಮುಂದುವರಿಯುತ್ತಿದ್ದರೆ, ಇಂತಹ ಎಲ್ಲ ಪ್ರಕರಣಗಳಲ್ಲಿ ಖರೀದಿದಾರರ ಹೆಸರನ್ನು ಪಹಣಿಯಲ್ಲಿ ಕಾಲೋಚಿತಗೊಳಿಸುವಂತೆ ತಿಳಿಸಲಾಗಿದೆ. 2012 ನ.28ರ ನಂತರ ದಾಖಲಾಗಿರುವ ಪ್ರಕರಣಗಳಲ್ಲಿ ಈಗಾಗಲೇ ಖರೀದಿದಾರರ ಹೆಸರಿಗೆ ಪಹಣಿ ದಾಖಲಾಗಿದ್ದರೂ ಪಹಣಿ ಕಲಂನಲ್ಲಿ ದಾಖಲಾಗಿರುವ ’ಭೂಸುಧಾರಣಾ ಶಾಸನದ ಉಲ್ಲಂಘನೆಯ ಸಂಶಯ ಇದೆ’ ಎಂಬ ನಮೂದನ್ನು ತೆಗೆದು ಹಾಕಬೇಕೆಂದು ಸೂಚಿಸಲಾಗಿದೆ. ಇನ್ನುಮುಂದೆ ಮ್ಯುಟೇಶನ್ ಸಂದರ್ಭದಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ರದ್ದುಪಡಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ಸುಬ್ಬಕ್ಕನ ಕೋಳಿಯ ಕಥೆಯಲ್ಲ ಇದು ಇಟಲಿ ಅಜ್ಜನ ಕೋಳಿಯ ಕಥೆ-ವ್ಯಥೆ!
ಈ ಸಂಗತಿಗಳನ್ನು ತಮ್ಮ ಅಧೀನದಲ್ಲಿ ಬರುವ ಎಲ್ಲ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಕರಣಗಳನ್ನು ಇತ್ಯರ್ಥಪಡಿಸಲು ಭೂಮಿ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡು ಮಾಡಲು ‘ಭೂಮಿ’ ನಿರ್ದೇಶಕರಿಗೆ ಕಂದಾಯ ಇಲಾಖೆ ಆದೇಶಿಸಿದೆ.
79ಎ ಮತ್ತು 79ಬಿ?:ಕೃಷಿಯೇತರ ಆದಾಯ ಮೂಲದವರು ಕೃಷಿ ಭೂಮಿ ಖರೀದಿಸಲು ಈವರೆಗೂ ಅವಕಾಶ ಇರಲಿಲ್ಲ. ಕೆಲ ವರ್ಷಗಳ ಹಿಂದೆ ನಿಯಮ ಸಡಿಲಿಸಿ 25 ಲಕ್ಷ ರೂ.ವರೆಗೆ ಕೃಷಿಯೇತರ ಆದಾಯ ಹೊಂದಿದವರು ಮಾತ್ರ ಕೃಷಿ ಭೂಮಿ ಕೊಂಡುಕೊಳ್ಳಲು ಅವಕಾಶ ನೀಡಲಾಗಿತ್ತು. ಇದೀಗ ತಿದ್ದುಪಡಿಯಿಂದ ಈ ನಿರ್ಬಂಧ ತೆರವುಗೊಳ್ಳಲಿದೆ. ಇನ್ನು ಮುಂದೆ ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಬಹುದು. ಆದಾಯದ ಮಿತಿ ಷರತ್ತು ಅನ್ವಯಿಸಲ್ಲ. ಆದರೆ, ಮಳೆ ಆಶ್ರಯದ ಭೂಮಿಯಲ್ಲಿ ಗರಿಷ್ಠ 108 ಎಕರೆ ಖರೀದಿಸಬಹುದು, ನೀರಾವರಿ ಅಥವಾ ತೋಟಗಾರಿಕೆ ಭೂಮಿಯಾಗಿದ್ದರೆ ಗರಿಷ್ಠ 54 ಎಕರೆ ಖರೀದಿಸಬಹುದು ಎಂಬ ಷರತ್ತು ವಿಧಿಸಲಾಗಿದೆ. ಐವರು ಸದಸ್ಯರನ್ನು ಒಂದು ಕುಟುಂಬವೆಂದು ಪರಿಗಣಿಸಲಾಗುತ್ತಿದೆ. ಒಂದು ಕುಟುಂಬ ಗರಿಷ್ಠ 216 ಎಕರೆ ಖರೀದಿಸಬಹುದಾಗಿದೆ.
ಕನ್ನಡ ಅವತರಣಿಕೆ ಪ್ರಕಟ:ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಅಧ್ಯಾದೇಶ ರಾಜ್ಯಪಾಲರಿಂದ ಪ್ರಖ್ಯಾಪಿತವಾಗಿ ಜು.13ರಂದು ರಾಜ್ಯಪತ್ರವಾಗಿ ಪ್ರಕಟವಾಗಿತ್ತು. ಇದೀಗ ಆ.14ರಂದು ಪುನಃ ಕನ್ನಡ ಅವತರಣಿಕೆಯ ರಾಜ್ಯಪತ್ರ ಪ್ರಕಟವಾಗಿದೆ. ವಿಧಾನಸಭೆ ಮತ್ತು ವಿಧಾನಪರಿಷತ್ತು ಅಧಿವೇಶನ ಇಲ್ಲದಿರುವುದರಿಂದ ಮತ್ತು ತಕ್ಷಣಕ್ಕೆ ಅಗತ್ಯತೆ ಇರುವುದರಿಂದ ಸುಗ್ರೀವಾಜ್ಞೆ ಹೊರಡಿಸಿರುವುದಾಗಿ ಸರ್ಕಾರ ಹೇಳಿಕೊಂಡಿದೆ. ಅನುಸೂಚಿತ ಜಾತಿ ಅಥವಾ ಪಂಗಡಗಳಿಗೆ ಮಂಜೂರಾದ ಭೂಮಿ ಮೇಲೆ ಷರತ್ತು ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
VIDEO|ಥಾರ್ ಹೊಸ ಅವತಾರ:​ ಅಕ್ಟೋಬರ್ 2ರಂದು ಮಾರುಕಟ್ಟೆಗೆ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:sixteen − one =
Remember me
