| ಗಂಗಾಧರ್ ಬೈರಾಪಟ್ಟಣ ರಾಮನಗರಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನು ಕೆಲವೇ ತಿಂಗಳುಗಳಲ್ಲಿ ನಕ್ಷೆ ಒಳಗೊಂಡ ಪಹಣಿ/ಆರ್​ಟಿಸಿಗಳು ಭೂ ಮಾಲೀಕರ ಕೈಸೇರಲಿವೆ. ಹೌದು, ಕಂದಾಯ ಇಲಾಖೆಯಲ್ಲಿ ಹೊಸತನ ತರಲು ಮುಂದಾಗಿರುವ ಸರ್ಕಾರ, ಮರು ಭೂಮಾಪನ ಮಾಡುವ ಮೂಲಕ ಭೂಮಾಲೀಕರಿಗೆ ಹಲವು ಅನುಕೂಲಗಳನ್ನು ಕಲ್ಪಿಸಲಿದೆ. ಜಿಲ್ಲೆಯ ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯಲ್ಲಿ ಇದಕ್ಕೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ.
ಜಮೀನಿನ ನಕ್ಷೆ ಒಳಗೊಂಡ ಪಹಣಿ/ಆರ್​ಟಿಸಿಯನ್ನು ರೈತರಿಗೆ ನೀಡುವುದು, ಅಂದಾಜು 150 ವರ್ಷಗಳ ಹಳೇ ದಾಖಲೆಗಳನ್ನು ಗಣಕೀಕರಣಗೊಳಿಸುವುದೂ ಸೇರಿ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ಮುಂದಾಗಿರುವ ಸರ್ಕಾರ, ಇದಕ್ಕಾಗಿ ಮರು ಭೂಮಾಪನ ಕಾರ್ಯ ಕೈಗೊಂಡಿದೆ.
ಕಾರ್ಯವಿಧಾನ ಹೇಗೆ?:ಸರ್ವೆ ಆಫ್ ಇಂಡಿಯಾ ರಾಜ್ಯದಲ್ಲಿ ಒಟ್ಟು 49 ಕಡೆಗಳಲ್ಲಿ ಸಿಒಆರ್​ಎಸ್ (ಕಂಟಿನ್ಯೂಯಸ್ ಆಪರೇಟಿಂಗ್ ರೆಫರೆನ್ಸ್ ಸಿಸ್ಟಂ) ಬಿಂದುಗಳನ್ನು ಸ್ಥಾಪಿಸಿದ್ದು, ಕನಕಪುರದಲ್ಲಿಯೂ ಇದರ ಕೇಂದ್ರವಿದೆ. ಈ ಕೇಂದ್ರದ ಆಧಾರದಲ್ಲಿ ಅಂದಾಜು 100 ಮೀಟರ್ ಎತ್ತರದಲ್ಲಿ ಡ್ರೋನ್ ಬಳಸಿ ಚಿತ್ರ ತೆಗೆದು, ನಂತರ ಆಥೋ ರೆಕ್ಟಿಫೈಡ್ ಇಮೇಜ್ ಆಗಿ ಪರಿವರ್ತಿಸಲಾಗುವುದು. ನಂತರ ರೋವರ್ ಉಪಕರಣಗಳನ್ನು ಬಳಕೆ ಮಾಡಿಕೊಂಡು ಜಮೀನಿನ ಬಿಂದುಗಳನ್ನು ಅಳತೆ ಮಾಡಿ, ಕ್ಯೂ-ಜಿಐಎಸ್ ತಂತ್ರಾಂಶ ಬಳಸಿ ನಕ್ಷೆಯನ್ನು ಒಳಗೊಂಡ ಆರ್​ಟಿಸಿಯನ್ನು ಭೂ ಮಾಲೀಕರಿಗೆ ನೀಡಲಾಗುತ್ತದೆ.
ಎಲ್ಲಿ ಭೂ ಮರುಮಾಪನ?:ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ 35 ಕಂದಾಯ ಗ್ರಾಮಗಳನ್ನು ಪ್ರಾಯೋಗಿಕ ಭೂ ಮರá-ಮಾಪನಕ್ಕೆ ಆಯ್ಕೆ ಮಾಡಲಾಗಿದೆ.
ಇಷ್ಟೂ ಗ್ರಾಮಗಳಲ್ಲಿ ಒಟ್ಟು 5,706 ಸರ್ವೆ ನಂಬರ್​ಗಳು, 23,366 ಆರ್​ಟಿಸಿಗಳು, 31,071 ಹಿಡುವಳಿದಾರರು ಹಾಗೂ ಮಂಜೂರಾದರೂ ಇನ್ನೂ ಪೋಡಿ ಆಗದ 741 ಫಲಾನುಭವಿಗಳು ಇದ್ದಾರೆ. ಇಲ್ಲಿ ಮರು ಭೂಮಾಪನ ನಡೆಸಲಾಗುತ್ತಿದೆ.
85 ಸಿಬ್ಬಂದಿ ಬಳಕೆ:ಈ ಯೋಜನೆಗೆ ಹಿರಿಯ ಐಎಎಸ್ ಅಧಿಕಾರಿ ಮನೀಷ್ ಮೌದ್ಗಿಲ್ ನೋಡಲ್ ಅಧಿಕಾರಿಯಾಗಿದ್ದರೆ, ರಾಮನಗರದ ಜಿಲ್ಲಾ ಭೂದಾಖಲೆಗಳ ಉಪನಿರ್ದೇಶಕ ಬಿ.ಆರ್. ಹನುಮೇಗೌಡ ಯೋಜನಾ ನಿರ್ದೇಶಕರಾಗಿದ್ದಾರೆ. ಹಾಸನದ ಸರ್ವೆ ಇಲಾಖೆ ಉಪನಿರ್ದೇಶಕ ಸುಜಯ್ ಕುಮಾರ್ ವಿಶೇಷ ಅಧಿಕಾರಿಯಾಗಿದ್ದಾರೆ. ಇವರ ಜತೆಗೆ ಇಬ್ಬರು ಅಧೀಕ್ಷಕರು, 4 ಪರ್ಯವೇಕ್ಷಕರು , 60 ಭೂಮಾಪಕರು, 16 ಬಾಂದು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉಯ್ಯಂಬಳ್ಳಿ ಹೋಬಳಿಯ 35 ಗ್ರಾಮಗಳನ್ನು ಪ್ರಾಯೋಗಿಕವಾಗಿ ಮರು ಭೂಮಾಪನಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಸರ್ವೆ ಕಾರ್ಯ ನಡೆದಿದೆ. ಇದರಿಂದ ನಕ್ಷೆಸಹಿತ ಆರ್​ಟಿಸಿ ದೊರೆಯುವುದು ಸೇರಿ ಭೂಮಾಲೀಕರಿಗೆ ಇತರ ಅನುಕೂಲಗಳು ಸಿಗಲಿದೆ.
| ಬಿ.ಆರ್. ಹನುಮೇಗೌಡ, ಜಿಲ್ಲಾ ಭೂದಾಖಲೆಗಳ ಇಲಾಖೆ ಉಪನಿರ್ದೇಶಕ
ನಿಧನದ ವಿಚಾರದಲ್ಲಿರಲಿ ನಿಧಾನ: ಸುಳ್ಳೇ ಏಕೆ ಸಾಯಿಸುವರೋ!; ಇನ್ನಿಲ್ಲ ಎಂಬ ಸುದ್ದಿ ಬಂದಾಗ ಇನ್ನೇನು ಮಾಡಬೇಕು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eight =
Remember me
