ಮಂಗಳೂರು:ನನ್ನ ಭಾಷೆ ನನ್ನ ಊರಿನಲ್ಲಿ ಅಧಿಕೃತ ಭಾಷೆಯಾಗಬೇಕು ಎಂದು ಆಗ್ರಹಿಸಿ ಸ್ವಾತಂತ್ರ್ಯೊತ್ಸವ ಅಮೃತ ಮಹೋತ್ಸವ ದಿನ ಆಯೋಜಿಸಿದ ಟ್ವೀಟ್ ಅಭಿಯಾನದಲ್ಲಿ ದೇಶದ ವಿವಿಧೆಡೆಗಳ ಸುಮಾರು 66,356 ಜನರು ಭಾಗವಹಿಸಿದ್ದಾರೆ.
ದಕ್ಷಿಣ ಭಾರತದ ತುಳು, ಕೊಡವ, ಉತ್ತರ ಭಾರತದ ಭೋಜ್​ಪುರಿ, ರಾಜಸ್ಥಾನಿ, ಘರ್​ವಾಲಿ, ಕುಮುನಿ, ಛತ್ತೀಸ್​ಗಢ ಸಹಿತ 10 ಭಾಷೆಗಳನ್ನು ಮಾತನಾಡುವ ಜನರು ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಂಡರು. ಅಭಿಯಾನದ ಸಂಘಟಕರಲ್ಲಿ ಓರ್ವರಾದ ಭಾಷಾ ಹೋರಾಟಗಾರ ವಿಶಾಲ್ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.
ಸೋಮವಾರ ಬೆಳಗ್ಗೆ 9ರಿಂದ ರಾತ್ರಿ 9 ಗಂಟೆ ತನಕ ಟ್ವೀಟ್ ಅಭಿಯಾನ ನಡೆಸಲು ಕರೆ ನೀಡಲಾಗಿತ್ತು. ‘ನೋ ಯುವರ್ ರೂಟ್ಸ್’ ಎನ್ನುವ ಸಂಸ್ಕೃತಿಯ ಹಬ್ ಈ ಟ್ವೀಟ್ ಅಭಿಯಾನದ ಹಿಂದಿದೆ. ಮಾನ್ಯತೆ ದೊರೆಯವ ಸ್ಥಳೀಯ ಭಾಷೆಗಳು ಗಟ್ಟಿಯಾಗಲಿವೆ. ಅಳಿವಿನಂಚಿನಲ್ಲಿರುವ ಭಾಷೆಗಳು ಮತ್ತೆ ಸಜೀವವಗೊಳಿಸುವುದು ಕೂಡ ಟ್ವೀಟ್ ಅಭಿಯಾನದ ಮುಖ್ಯ ಉದ್ದೇಶ.
ನರೇಂದ್ರ ಮೋದಿ ಹುಟ್ಟಿದ್ದೆ ಈ ದೇಶವನ್ನ ಹಿಂದೂರಾಷ್ಟ್ರ ಮಾಡೋಕೆ: ಶಾಸಕ ಯತ್ನಾಳ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
