ಬಳ್ಳಾರಿ:ಪುನಿತ್ ರಾಜಕುಮಾರ್​ ಅಂದರೆ ಬಳ್ಳಾರಿ ಜನರಿಗೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿ ಅಭಿಮಾನಕ್ಕೆ ಸಾಕ್ಷಿಯಾಗಿ ರಾಜ್ಯದಲ್ಲೇ ಅತಿ ದೊಡ್ಡ ಪುನೀತ್ ಪುತ್ಥಳಿ ಗಣಿ ನಾಡಲ್ಲಿ ತಲೆಯೆತ್ತುತ್ತಿದೆ. ಕೆಜಿಫ್ ೨ ಚಿತ್ರದಲ್ಲಿ ರಾಕಿ ಬಾಯ್ ಪುತ್ಥಳಿ ನಿರ್ಮಿಸಿದ್ದ ಶಿವಮೊಗ್ಗದ ಕಲಾವಿದ ಜೀವನ್, ದಾಖಲೆಯ ಅಪ್ಪು ಪುತ್ಥಳಿಯನ್ನು ತಯಾರಿಸಿದ್ದಾರೆ.
ಈ ಪ್ರತಿಮೆ 23 ಅಡಿ ಎತ್ತರವಿದ್ದು ಅತೀ ದೊಡ್ಡ ಪುತ್ಥಳಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಬಳ್ಳಾರಿಯ ನಲ್ಲಚರಾವು ಪ್ರದೇಶದ ಜಿಲ್ಲಾ ಕ್ರೀಡಾಂಗಣದ ಮುಂದೆ ಈ ಪ್ರತಿಮೆ ತಲೆಯತ್ತಲು ಸಿದ್ದವಾಗಿದೆ. ಈ ಪ್ರತಿಮೆಯನ್ನು ಕಬ್ಬಿಣ ಹಾಗೂ ಫೈಬರ್ ಮಿಶ್ರಣದಲ್ಲಿ ತಯಾರು ಮಾಡಲಾಗಿದ್ದು ಬರೋಬ್ಬರಿ 23 ಅಡಿ ಎತ್ತರವಿದೆ.
ಇದೇ ತಿಂಗಳು 21 ರಂದು ನಡೆಯುವ ಬಳ್ಳಾರಿ ಉತ್ಸವದಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅಪ್ಪು ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಈ ಪ್ರತಿಮೆಯನ್ನು ಸತತ ಐದು ತಿಂಗಳ ಕಾಲದಿಂದ 15 ಜನರು ತಯಾರು ಮಾಡುತ್ತಿದ್ದರು.
ಈ ಪ್ರತಿಮೆ ತಯಾರಿಸಲು ಖರ್ಚೂ ಭಾರಿ ಪ್ರಮಾಣದಲ್ಲಿ ನಡೆದಿದ್ದು ಬರೋಬ್ಬರಿ 20 ಲಕ್ಷ ವೆಚ್ಚದಲ್ಲಿ ಅಪ್ಪು ಪ್ರತಿಮೆ ನಿರ್ಮಾಣವಾಗಿದೆ. ದಾಖಲೆಯ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಲು ಬಳ್ಳಾರಿ ಜಿಲ್ಲಾಡಳಿತವೂ ಸಿದ್ಧತೆ ನಡೆಸುತ್ತಿದ್ದು ಪುತ್ತಳಿ ಅನಾವರಣಕ್ಕೆ ತಯಾರಿ ನಡೆಸಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − six =
Remember me
