ನವದೆಹಲಿ:ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ವಿುಕರಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್) ಅಳವಡಿಕೆಗೆ ನೀಡಿದ್ದ ಗಡು ವನ್ನು ಮೂರು ಬಾರಿ ವಿಸ್ತರಣೆ ಮಾಡಲಾಗಿದ್ದು, ಆ. 31 ಕಡೆಯ ದಿನವಾಗಿದೆ. ಇದೇ ಕಡೆಯ ಅವಕಾಶ, ಮತ್ತೆ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಜನವರಿ 2024ರಲ್ಲಿ ನರೇಗಾ ಯೋಜನೆಯಡಿ ದಾಖಲಾದವರಿಗೆ ಕೂಲಿ ಪಾವತಿಸಲು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ (ಎಬಿಪಿಎಸ್) ಕಡ್ಡಾಯಗೊಳಿಸಲಾಗಿದ್ದು, ಈ ವ್ಯವಸ್ಥೆ ಅಳವಡಿಕೆಗೆ ಫೆ.1ರವರೆಗೆ ಗಡುವು ನೀಡಲಾಗಿತ್ತು. ಬಳಿಕ ಮಾ.31, ತದನಂತರ ಜೂ.30ರವರೆಗೆ ಹಾಗೂ ಅಂತಿಮವಾಗಿ ಆಗಸ್ಟ್ 31ರವರೆಗೆ ವಿಸ್ತರಿಸಿತ್ತು. ಮತ್ತೆ ಯಾವ ಕಾರಣಕ್ಕೆ ಗಡುವು ವಿಸ್ತರಣೆ ಮಾಡುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಲಾಗಿದೆ. ಇದುವರೆಗೆ ಶೇ.90ರಷ್ಟು ಸಕ್ರಿಯ ಕಾರ್ವಿುಕರ ಖಾತೆ ಈಗಾಗಲೇ ಆಧಾರ್​ನೊಂದಿಗೆ ಜೋಡಣೆಯಾಗಿರುವುದರಿಂದ ಕಾಲಮಿತಿಯನ್ನು ವಿಸ್ತರಿಸಲಾಗá-ವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವಾಲಯದ ಪ್ರಕಾರ ಒಟ್ಟು 12.17 ಕೋಟಿ ಆಧಾರ್ ಸಂಖ್ಯೆ ದೃಢೀಕರಿಸಲಾಗಿದೆ. 77.81 ಪ್ರತಿಶತದಷ್ಟು ಜನರು ಎಬಿಪಿಎಸ್​ಗೆ ಅರ್ಹರಾಗಿದ್ದು, ಮೇ 2023ರಲ್ಲಿ ಎಬಿಪಿಎಸ್ ಮೂಲಕ ಸುಮಾರು 88 ಪ್ರತಿಶತದಷ್ಟು ವೇತನ ನೀಡಲಾಗಿದೆ.
ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಮುಂಗಾರು ಅಧಿವೇಶನದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ನೀಡಿರುವ ಲಿಖಿತ ಉತ್ತರ ಪ್ರಕಾರ ಸುಮಾರು 1.13ಕೋಟಿ ನರೇಗಾ ಕಾರ್ವಿುಕರ ಬ್ಯಾಂಕ್ ಖಾತೆಗಳು ಅಥವಾ ಯೋಜನೆಯಡಿ ಸಕ್ರಿಯರಾಗಿರುವ ಕಾರ್ವಿುಕರಲ್ಲಿ ಸುಮಾರು 8 ಪ್ರತಿಶತದಷ್ಟು ಬ್ಯಾಂಕ್ ಖಾತೆಗಳು ಆಧಾರ್​ನೊಂದಿಗೆ ಜೋಡಣೆಯಾಗಿಲ್ಲ. ಅದರಲ್ಲೂ ಈಶಾನ್ಯ ರಾಜ್ಯಗಳಾದ ಅಸ್ಸಾಂನಲ್ಲಿ 42 ಪ್ರತಿಶತಕ್ಕಿಂತ ಹೆಚ್ಚು, ಅರುಣಾಚಲ ಪ್ರದೇಶದಲ್ಲಿ ಸುಮಾರು ಪ್ರತಿಶತ 23, ಮೇಘಾಲಯದಲ್ಲಿ ಪ್ರತಿಶತ 70, ನಾಗಾಲ್ಯಾಂಡ್​ನಲ್ಲಿ ಪ್ರತಿಶತ 37ರಷ್ಟು ಕಾರ್ವಿುಕರ ಖಾತೆ ಆಧಾರ್​ನೊಂದಿಗೆ ಲಿಂಕ್ ಆಗಿಲ್ಲ ಎಂದು ತಿಳಿಸಲಾಗಿದೆ.
ನವದೆಹಲಿ:ತೆರಿಗೆ ಮರುಪಾವತಿ ಪ್ರಕ್ರಿಯೆಯ ಸರಾಸರಿ ಅವಧಿ ಕಡಿಮೆ ಮಾಡಲು ಆದಾಯ ತೆರಿಗೆ ಇಲಾಖೆ ಚಿಂತನೆ ನಡೆಸಿದೆ. ಪ್ರಸ್ತುತ ಪ್ರಕ್ರಿಯೆ ಸಂಸ್ಕರಣೆ ಅವಧಿ 16 ದಿನವಾಗಿದ್ದು ಈ ಅವಧಿಯನ್ನು 10 ದಿನಕ್ಕೆ ಇಳಿಸುವುದು ಇಲಾಖೆಯ ಉದ್ದೇಶ ಎಂದು ಹೇಳಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲೇ ಈ ಸಮಯದ ಗಡುವನ್ನು ಅನುಷ್ಠಾನಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮರುಪಾವತಿ ಸ್ಥಿತಿಗತಿ ಬಗ್ಗೆ ಬಹಳಷ್ಟು ಜನ ವಿಚಾರಿಸುತ್ತಿರುತ್ತಾರೆ. ಆದ್ದರಿಂದ ಮರುಪಾವತಿ ಪಡೆಯಲಿರುವ ತೆರಿಗೆದಾರರು ಇ-ಫೈಲಿಂಗ್ ನಂತರ ತಮ್ಮ ಹಣವನ್ನು ಪಡೆಯುವ ಅವಧಿಯನ್ನು ಕಡಿಮೆ ಮಾಡುವುದು ಉತ್ತಮ ಕ್ರಮ ಎಂದು ಇಲಾಖೆಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ. ಬಹಳಷ್ಟು ತೆರಿಗೆದಾರರು ಸಕಾಲ ದಲ್ಲಿ ರಿಟರ್ನ್ಸ್
ಸಲ್ಲಿಸಿದ್ದಾರೆ. ಬೇಗನೆ ಮರುಪಾವತಿ ಹಣವನ್ನು ನಿರೀಕ್ಷಿಸುವುದು ಸಹಜವೇ ಆಗಿದೆ ಎಂದು ಕ್ಲಿಯರ್ ಹೌ ಸಂಸ್ಥೆಯ ಸಿಇಒ ಅರ್ಚಿತ್ ಗುಪ್ತಾ ಹೇಳಿದ್ದಾರೆ. ಈ ವರ್ಷ ಜುಲೈ 31ರ ವರೆಗೆ 6.77 ಕೋಟಿಗೂ ಅಧಿಕ ಐಟಿಆರ್ ಸಲ್ಲಿಕೆಯಾಗಿದ್ದು ಇದೊಂದು ಹೊಸ ದಾಖಲೆಯಾಗಿದೆ. ಇದು ಕಳೆದ ವರ್ಷದ್ದಕ್ಕಿಂತ ಶೇಕಡ 16.1ರಷ್ಟು ಹೆಚ್ಚಿದೆ.
ಚಂದ್ರಯಾನ-3: ಲ್ಯಾಂಡಿಂಗ್​ ಮುಗಿದರೂ ನಿಂತಿಲ್ಲ ಪ್ರಕಾಶ್ ರಾಜ್ ಟ್ರೋಲೂ.. ಪೋಸ್ಟೂ..!

ಇಸ್ರೋ ಪ್ರಧಾನ ಕಚೇರಿ ಬೆಂಗಳೂರಿನಲ್ಲೇ ಆಗಿದ್ದು ಹೇಗೆ? ಇದಕ್ಕೆ ಕಾರಣ ಯಾರು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × two =
Remember me
