ಯಾದಗಿರಿ:ಗುರುಮಠಕಲ್‌ ಕ್ಷೇತ್ರದ‌ ಕಾಂಗ್ರೆಸ್​ ಅಭ್ಯರ್ಥಿ ಹಾಗೂ ಮಾಜಿ ಸಚಿವ ಬಾಬುರಾವ್​ ಚಿಂಚನಸೂರ್​ ಅವರಿದ್ದ ವಾಹನ ತಡರಾತ್ರಿ ಅಪಘಾತಕ್ಕೀಡಾಗಿದೆ.
ಯಾದಗಿರಿಯಿಂದ ಬರುವಾಗ ಕಲಬುರಗಿಯ ಆಕಾಶವಾಣಿ ಕೇಂದ್ರದ ಬಳಿ ನಿನ್ನೆ ರಾತ್ರಿ 12.30ರ ಸುಮಾರಿಗೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ಚಿಂಚನಸೂರ್ ಅವರ ಕಾಲು ಮತ್ತು ಮುಖಕ್ಕೆ ಗಾಯಗಳಾಗಿವೆ.
ಇದನ್ನೂ ಓದಿ:ನಿಜವಾದ ಸ್ನೇಹ ಅಂದ್ರೆ ಇದು! ಭೇಟಿಯೇ ಆಗದ ಫೇಸ್​ಬುಕ್​ ಫ್ರೆಂಡ್​ ಕಷ್ಟಕ್ಕೆ ಮಿಡಿದ ಶಿಕ್ಷಕ, 16 ಲಕ್ಷ ರೂ. ಸಂಗ್ರಹ
ರಸ್ತೆಯ ಮಧ್ಯೆ ಇರುವ ಗುಂಡಿಗೆ ಕಾರಿನ ಟೈರ್ ಬಿಳುತ್ತಿದ್ದ ಹಾಗೆ ಸ್ಕೀಡ್ ಆಗಿ ವಾಹನವೂ ಉರುಳಿದೆ. ನಿದ್ದೆಯ ಮಂಪರಿನಲ್ಲಿ ವಾಹನ ಚಲಾಯಸಿದ್ದೇ ಘಟನೆ ಕಾರಣ ಎನ್ನಲಾಗಿದೆ. ಸ್ಥಳೀಯರ ಸಹಕಾರದಿಂದ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಚಿಂಚನಸೂರ್​ ಅವರನ್ನು ದಾಖಲಿಸಲಾಗಿದೆ.
ಚಾಲಕ ಮತ್ತು ಗನ್ ಮ್ಯಾನ್​ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಚಿಂಚನಸೂರ ನಾಮಪತ್ರ ಸಲ್ಲಿಕೆ ಮೂಂದೂಡಿಕೆಬಾಬುರಾವ್ ಚಿಂಚನಸೂರ್ ಅವರು ಇಂದು ನಾಮಪತ್ರ ಸಲ್ಲಿಸಬೇಕಿತ್ತು. ಅದಕ್ಕಾಗಿ ಸಕಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದ್ದರು. ಸರಳವಾಗಿ ನಾಮಪತ್ರ ಸಲ್ಲಿಸಲು ಮುಂದಾಗಿದ್ದರು. ರಸ್ತೆ ಅಪಘಾತದಲ್ಲಿ ಗಾಯವಾದ ಹಿನ್ನಲೆ ನಾಮಪತ್ರ ಸಲ್ಲಿಕೆ ಸದ್ಯಕ್ಕೆ ಮೂಂದುಡಿಕೆ. ಕಾಲು ಮೂಳೆ ಮುರಿತ ಹಿನ್ನಲೆಯಲ್ಲಿ ಕೆಲವೇ ಕ್ಷಣಗಳಲ್ಲಿ ಬಾಬುರಾವ್​ ಚಿಂಚನಸೂರ್​ ಶಸ್ತ್ರಚಿಕಿತ್ಸಗೆ ಒಳಗಾಗಲಿದ್ದಾರೆ.(ದಿಗ್ವಿಜಯ ನ್ಯೂಸ್​)
ರಾಜ್ಯಕ್ಕೆ ಡಬಲ್ ಎಂಜಿನ್ ಸರ್ಕಾರದ ಅವಶ್ಯಕತೆ

ಕಪಟ ನಾಟಕ ಸೂತ್ರಧಾರಿ: ಮನೋಲ್ಲಾಸ

ರಿಷಿಕಾ ಈಗ ‘ಓಕೆ ಮಗಾ’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + six =
Remember me
