ಬೆಳ್ತಂಗಡಿ:ಮನೆ ಹೊರಗಡೆ ನಾಯಿ ಬೊಗಳಿತೆಂದು ಗುರುವಾರ ತಡರಾತ್ರಿ ಮನೆಯ ಮಾಲೀಕ ಬಾಗಿಲು ತೆರೆದರಷ್ಟೇ… ನೋಡನೋಡುತ್ತಿದ್ದಂತೆ ಒಳ ನುಗ್ಗಿದ ನಾಲ್ವರು ಮುಸುಕುಧಾರಿಗಳ ತಂಡ ಮನೆಯವರನ್ನು ಕಟ್ಟಿಹಾಕಿ ನಗದು, ಚಿನ್ನ, ಬೆಳ್ಳಿ ದೋಚಿದ್ದಾರೆ.
ಧರ್ಮಸ್ಥಳ ಗ್ರಾಮ ವ್ಯಾಪ್ತಿಯ ನೀರಚಿಲುಮೆಯ ಅಚ್ಚುತ ಭಟ್​ ಎಂಬುವರ ಮನೆಯಲ್ಲಿ ದರೋಡೆಕೋರರು 40 ಪವನ್​ ಚಿನ್ನ, 1 ಕೆಜಿ ಬೆಳ್ಳಿ, 25 ಸಾವಿರ ರೂ. ಲೂಟಿ ಹೊಡೆದಿದ್ದಾರೆ.ಇದನ್ನೂ ಓದಿರಿvideo/ ತರಕಾರಿ-ಹಣ್ಣು ತುಂಬುವ ಕ್ರೇಟ್​ನಲ್ಲಿದೆ 85 ಕೆ.ಜಿ. ಗಾಂಜಾ!
ಗುರುವಾರ ರಾತ್ರಿ ಎಂದಿನಂತೆ ಅಚ್ಚುತ ಭಟ್​ ಕುಟುಂಬ ಮಲಗಿತ್ತು. ತಡರಾತ್ರಿ ಮನೆ ಹೊರಗಡೆ ನಾಯಿ ಬೊಗಳುತಿತ್ತು. ಏನಿರಬಹುದೆಂದು ಅಚ್ಚುತ ಭಟ್​ ಬಾಗಿಲು ತೆರೆದು ಅಂಗಳಕ್ಕೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಮರಳಿ ಮನೆಯೊಳಗೆ ಹೋಗಿ ಬಾಗಿಲು ಹಾಕುವ ವೇಳೆ ಹಿಂಬದಿಯಿಂದ ಮುಸುಕುಧಾರಿ ವ್ಯಕ್ತಿಯೋರ್ವ ಒಳಗೆ ನುಗ್ಗಿ ಅವರನ್ನು ಹಗ್ಗದಲ್ಲಿ ಕಟ್ಟಿ ಹಾಕಿದ್ದಾನೆ. ಬಳಿಕ 80 ವರ್ಷದ ತಾಯಿ ಹಾಗೂ ಸಹೋದರಿಯನ್ನೂ ಮುಸುಕುಧಾರಿಗಳ ತಂಡ ಕಟ್ಟಿಹಾಕಿದೆ. ಮನೆಯೊಳಗಿನ ಕಪಾಟುಗಳನ್ನು ಒಡೆದು ಹಾಕಿ ಚಿನ್ನ, ಬೆಳ್ಳಿ, ನಗದು ದೋಚಿ ಪರಾರಿಯಾಗಿದೆ.
ಇದನ್ನೂ ಓದಿರಿಕಪ್ಪು-ಬಿಳುಪು ಟಿವಿ ಮಾರಾಟ ಮಾಡಿದ್ರೆ ಕೋಟಿ ಹಣ ಸಿಗುತ್ತೆ!
ಹಗ್ಗದಲ್ಲಿ ಬಂಧಿಯಾಗಿದ್ದ ಸಂದರ್ಭ ಉರುಳಾಡಿದ್ದರಿಂದ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆ ಸಂದರ್ಭ ಮನೆಯಲ್ಲಿ ಮೂವರು ಮಕ್ಕಳು ಇದ್ದರು. ಅದೃಷ್ಟವಶಾತ್​ ಅವರಿಗೆ ಯಾವುದೇ ತೊಂದರೆ ಮಾಡಿಲ್ಲ.
ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ಬೆಳ್ತಂಗಡಿ ಸರ್ಕಲ್​ ಇನ್ಸ್​ಪೆಸ್ಪೆಕ್ಟರ್​ ಸಂದೇಶ ಪಿ.ಜಿ. ಸ್ಥಳ ಪರಿಶೀಲನೆ ನಡೆಸಿದರು. ಸಿಐ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಆರೋಪಿಗಳನ್ನು ಶ್ರೀಘ್ರ ಪತ್ತೆ ಹಚ್ಚಲಾಗುವುದು. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಹಾಗೂ ಕಾರ್ಕಳದ ಮಾಡ ಎಂಬಲ್ಲಿ ಈ ಹಿಂದೆ ನಡೆದಿದ್ದ ದರೋಡೆ ಪ್ರಕರಣಕ್ಕೂ ಇದಕ್ಕೂ ಸಂಬಂಧವಿದೆಯೇ ಎಂದು ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಥೂ, ಇವರೆಂಥ ಜನ! ಕರೊನಾ ಇಲ್ಲದಿದ್ರೂ ಪುಟ್ಟಕಂದನಿಗೆ ಹೀಗಾ ಮಾಡೋದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
