ಬೆಂಗಳೂರು:ನಗರದಲ್ಲಿ ತಡರಾತ್ರಿ 2.9 ಕೋಟಿ ರೂಪಾಯಿ ಮೌಲ್ಯದ ಫೋರ್ಶ್​ ಕಾರಿನಲ್ಲಿ ಜಾಲಿರೈಡ್​ ಮಾಡಿದ ಚಾಲಕನನ್ನು ಬಂಧಿಸಿ, ಕಾರನ್ನು ಜಪ್ತಿ ಮಾಡಲಾಗಿದೆ.
ಶನಿವಾರ (ಜು. 25) ತಡರಾತ್ರಿ 2.20ರಲ್ಲಿ ಟಿ. ಚೌಡಯ್ಯ ರಸ್ತೆಯಲ್ಲಿ ಬಿಡಿಎ ಸೇತುವೆ ಕಡೆಯಿಂದ ಹೈಗ್ರೌಂಡ್ಸ್​ ಜಂಕ್ಷನ್​ ಕಡೆಗೆ ಪಿವೈ-05, ಜೆ-8028 ನೋಂದಣಿ ಫಲಕ ಹೊಂದಿದ್ದ ಕಾರು ಅತಿವೇಗವಾಗಿ ಕರ್ಕಶ ಶಬ್ದ ಮಾಡುತ್ತ ಸಂಚರಿಸಿತ್ತು. ಇದರಿಂದಾಗಿ ಇತರ ವಾಹನ ಸವಾರರು ಹಾಗೂ ಚಾಲಕರಿಗೆ ಭಯ ಉಂಟಾಗಿತ್ತು. ಸ್ಥಳದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ಮಂಜುನಾಥ್​, ಕಾರಿನ ನೋಂದಣಿ ಸಂಖ್ಯೆ ಬರೆದುಕೊಂಡು ದೂರು ದಾಖಲಿಸಿದ್ದರು.
ಇದನ್ನೂ ಓದಿರಿಗ್ರಾಹಕರ ಖಾತೆಗೆ ಬ್ಯಾಂಕ್​ ನೌಕರನಿಂದಲೇ ಕನ್ನ!
ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಸೋಮವಾರ (ಜು.27) ಹೈಗ್ರೌಂಡ್ಸ್​ ಸಂಚಾರ ಪೊಲೀಸರು 2.9 ಕೋಟಿ ರೂ. ಮೌಲ್ಯದ ಫೋರ್ಶ್​ ಕಾರನ್ನು ಜಪ್ತಿ ಮಾಡಿದ್ದಾರೆ. ಕಾರು ಚಾಲಕ ಹರಿ ಎಂಬಾತನನ್ನು ಬಂಧಿಸಲಾಗಿದೆ.
ವೆಂಕಟಮ್ಮ ಎಂಟರ್​ ಪ್ರೈಸಸ್​ ಹೆಸರಿನಲ್ಲಿ ಕಾರು ಖರೀದಿ ಮಾಡಲಾಗಿದೆ. ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿಯಿಡೀ ಪರದಾಡಿದ ನಟಿ ಸುಧಾರಾಣಿ, ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ; ಡಾ.ಕೆ. ಸುಧಾಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 8 =
Remember me
