ಬೆಂಗಳೂರು:ವಿವಿಧ ಕೋರ್ಸ್ ಹಾಗೂ ಶಿಕ್ಷಣ ಸಂಸ್ಥೆಗಳ ನಡುವೆ ಕ್ರೆಡಿಟ್ ಸ್ಕೋರ್​ಗಳ ವರ್ಗಾವಣೆ, ಉನ್ನತ ಶಿಕ್ಷಣದಲ್ಲಿ ಪ್ರತಿ ಹಂತ ಪೂರೈಸಿದಾಗಲೂ ತಿಳಿದಿರಬೇಕಾದ ಕಲಿಕಾ ಅಂಶಗಳನ್ನು ವ್ಯಾಖ್ಯಾನಿಸುವ ನಿಯಮಾವಳಿ ರೂಪಿಸಲು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ತೀರ್ವನಿಸಿದೆ.
ನಿಯಮಗಳನ್ನು ತಿದ್ದು ಪಡಿ ಮಾಡಿ ಮುಂದಿನ ಜನವರಿಯಲ್ಲಿ ಸಾರ್ವತ್ರಿಕ ಗೊಳಿಸಲಾಗುವುದು. ಈ ಮೂಲಕ ತಾಂತ್ರಿಕ ಶಿಕ್ಷಣದಲ್ಲಿ ಕ್ಷೇತ್ರದ ಮಾರ್ಗದರ್ಶಿ ಸೂತ್ರಗಳೊಂದಿಗೆ ಸಮಾನತೆ ಸಾಧಿಸಲಾಗುವುದು ಎಂದು ಯುಜಿಸಿ ಅಧ್ಯಕ್ಷ ಡಾ.ಜಗದೀಶ್​ಕುಮಾರ್ ಹೇಳಿದ್ದಾರೆ.
ಹೀಗಾಗಿ, ಸದ್ಯ ತಾಂತ್ರಿಕ ಕೋರ್ಸ್​ಗಳಲ್ಲಿ ಅವಕಾಶವಿರುವ ಲ್ಯಾಟರಲ್ ಎಂಟ್ರಿ ಸೌಲಭ್ಯ ಕಲಾ ಹಾಗೂ ಇತರ ವಿಭಾಗದ ಕೋರ್ಸ್​ಗಳಿಗೂ ಅನ್ವಯವಾಗುತ್ತಾ ಎಂಬ ನಿರೀಕ್ಷೆ ಗರಿಗೆದರಿದೆ. ಸರಳವಾಗಿ ವಿವರಿಸುವುದಾದಲ್ಲಿ ನ್ಯಾಷನಲ್ ಹೈಯರ್ ಎಜುಕೇಷನ್ ಕ್ವಾಲಿಫಿಕೇಷನ್ ಫ್ರೇಮ್ರ್ಕ್ (ಎನ್​ಎಚ್​ಇಕ್ಯುಎಫ್) ತಿದ್ದುಪಡಿ ಮಾಡಲಾಗುತ್ತಿದ್ದು, ಇದರಿಂದಾಗಿ ಪ್ರತಿ ಕೋರ್ಸ್ ಪೂರ್ಣಗೊಳಿಸಿದ ನಂತದ ಕಲಿಕಾರ್ಥಿಯು ತಿಳಿದಿರಬೇಕಾದ ಅಂಶಗಳೇನು ಎಂಬುದನ್ನು ಸ್ಪಷ್ಟಪಡಿಸಲಿದೆ. ಸರ್ಟಿಫಿಕೇಟ್ ಕೋರ್ಸ್​ಗಳಿಂದ ಪಿಎಚ್​ಡಿವರೆಗಿನ ಎಲ್ಲ ಹಂತಗಳಿಗೂ ಇದು ಅನ್ವಯವಾಗಲಿದೆ.
ಕೋರ್ಸ್​ವೊಂದನ್ನು ಪೂರ್ಣಗೊಳಿಸಲು ಹಾಗೂ ಮುಂದಿನ ಹಂತಕ್ಕೆ ತೆರಳಲು ವಿದ್ಯಾರ್ಥಿಯೊಬ್ಬ ಗಳಿಸಬೇಕಾದ ಕನಿಷ್ಠ ಕ್ರೆಡಿಟ್ ಸ್ಕೋರ್ ನಿಗದಿಪಡಿಸಲಿದೆ. ಈ ಮೊದಲು ಎನ್​ಎಚ್​ಇಕ್ಯುಎಫ್ ನಿಯಮಗಳಲ್ಲಿ 5ರಿಂದ 10ರವರೆಗೆ ಸ್ಕೇಲ್ ನಿಗದಿ ಮಾಡಲಾಗಿತ್ತು. ಆದರೆ, ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಮ್ರ್ಕ್​ನಲ್ಲಿ (ಎನ್​ಎಸ್​ಕ್ಯುಎಫ್) ಈ ಪ್ರಮಾಣವನ್ನು 4.5ರಿಂದ 8ರವರೆಗೆ ನಿಗದಿ ಮಾಡಲಾಗಿದೆ. ಈ ಕಾರಣಕ್ಕಾಗಿ ಎರಡೂ ನಿಯಮಗಳಲ್ಲಿ ವ್ಯತ್ಯಾಸವಿದೆ. ಪ್ರತಿ ಶೈಕ್ಷಣಿಕ ಹಂತದ ಪ್ರವೇಶಕ್ಕೆ ನಿಗದಿತ ಅರ್ಹತೆ, ಲ್ಯಾಟರಲ್ ಎಂಟ್ರಿಗೆ ಪೂರ್ವ ನಿರ್ಧರಿತ ಅಂಶಗಳು ಹಾಗೂ ಹಿಂದಿನ ಕಲಿಕಾ ಫಲಗಳ ಸಾಧನೆಗೆ ದೃಢೀಕರಣ ಮೊದಲಾವುಗಳನ್ನು ಸೂಚಿಸುತ್ತದೆ. ಈ ಕಾರಣಕ್ಕಾಗಿ ಕಲಿಕೆಯ ಸಮತಲ ಹಾಗೂ ಉರ್ಧ್ವ ಚಲನೆಗೆ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎನ್​ಎಚ್​ಇಕ್ಯುಎಫ್​ನಲ್ಲೂ 4.5-8ರವರೆಗಿನ ಪ್ರಮಾಣವನ್ನೇ ಅನುಸರಿಸಲಾಗುವುದು ಎಂದು ಜಗದೀಶ್ ಹೇಳಿದ್ದಾರೆ.
ಎನ್​ಇಪಿ ಅನ್ವಯ ತಿದ್ದುಪಡಿ:ರಾಷ್ಟ್ರೀಯ ಶಿಕ್ಷಣ ನೀತಿ (ಎನ್​ಇಪಿ) ಅನ್ವಯ 4 ವರ್ಷಗಳ ಪದವಿ ಶಿಕ್ಷಣ ಆರಂಭಿಸಲಾಗಿದೆ. ಇದರಲ್ಲಿ ಬಹುಹಂತದ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶವಿದೆ. ಮೊದಲ ವರ್ಷಕ್ಕೆ ಸರ್ಟಿಫಿಕೇಟ್ 2ನೇ ವರ್ಷಕ್ಕೆ ಡಿಪ್ಲೊಮಾ, 3ನೇ ವರ್ಷ ಪದವಿ, ಅಂತಿಮ ವರ್ಷ ಆನರ್ಸ್ ನೀಡಲಾಗುತ್ತದೆ. ಇದಕ್ಕೆ ಅನುಗುಣವಾಗಿ ಎನ್​ಎಚ್​ಇಕ್ಯುಎಫ್ ನಿಯಮಗಳಿಗೆ ತಿದ್ದುಪಡಿ ಮಾಡಲಾಗುವುದು ಎಂದಿದ್ದಾರೆ.
ನಾಳೆಯಿಂದ ಕುಲಪತಿಗಳ ಚರ್ಚೆ:ಎನ್​ಎಚ್​ಇಕ್ಯುಎಫ್ ತಿದ್ದುಪಡಿಗೆ ಸಂಬಂಧಿಸಿದಂತೆ ಜಗದೀಶಕುಮಾರ್ ಮೇ 25ರಿಂದ ದೇಶದ ವಿವಿಧ ವಿವಿಗಳ ಕುಲಪತಿಗಳು ಹಾಗೂ ವಿವಿಗಳ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಲಿದ್ದಾರೆ. ಪರಿಷ್ಕರಣೆ ಯೋಜನೆಯ ವಿವರಗಳನ್ನು ನೀಡಲಿದ್ದಾರೆ.
ಮಲಗಿಕೊಂಡೇ ಓದಿ 580 ಅಂಕ ಪಡೆದ ಶ್ರಾವ್ಯಾ!; ಕರುಳು ಕಾಯಿಲೆ ನಡುವೆಯೂ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 9 =
Remember me
