ಬೆಂಗಳೂರು:ಬುಡಕಟ್ಟು ಜನಾಂಗದ ಹೊರತಾಗಿ ಅರಣ್ಯದಲ್ಲಿ ಬಹುಕಾಲದಿಂದ ವಾಸವಾಗಿರುವವರಿಗೆ ರಕ್ಷಣೆ ನೀಡಲು, ಸಾಗುವಳಿ ಚೀಟಿ ನೀಡಲು ಕಾನೂನು ತಿದ್ದುಪಡಿ ತರುವುದು ಮತ್ತು ಶರಾವತಿ ಸಂತ್ರಸ್ತರ ರಕ್ಷಣೆಗೆ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ಅಗತ್ಯವಿದೆ. ಈ ಸಂಬಂಧ ಶೀಘ್ರ ಮುಖ್ಯಮಂತ್ರಿ ಸಮ್ಮುಖ ಸಭೆ ನಡೆಯಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವ ಭರವಸೆಯನ್ನು ಚುನಾವಣೆ ವೇಳೆ ನೀಡಿದ್ದೆವು. ಮಲೆನಾಡಲ್ಲಿ ಜನಾಕ್ರೋಶ ರ‌್ಯಾಲಿ ನಡೆಸಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸಮ್ಮುಖವೇ ಜನರಿಗೆ ವಾಗ್ದಾನ ಮಾಡಿದ್ದೆವು. ಈಗ ಸಮಸ್ಯೆ ಬಗೆಹರಿಸಲು ಪ್ರಯತ್ನ ನಡೆಸಲಾಗಿದೆ. ತಮ್ಮ ಹಂತದಲ್ಲಿ ಈಗಾಗಲೇ ಕಂದಾಯ, ಅರಣ್ಯ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದರು.ಬುಡಕಟ್ಟು ಜನಾಂಕ್ಕೆ ಸೇರದ ಜನರೂ ಅರಣದಲ್ಲಿದ್ದಾರೆ. ಅವರಿಗೆ ಎಪ್ಪತ್ತೈದು ವರ್ಷದ ದಾಖಲೆ ಕೊಡುವ ಕಾನೂನು ಮಾಡಿಡಲಾಗಿತ್ತು. ಅಲ್ಲದೇ 75 ವರ್ಷದವರ ಹೇಳಿಕೆ ತೆಗೆದುಕೊಳ್ಳಬೇಕು ಎಂದು ಇತ್ತು. ಅರಣ್ಯ ಸಮಿತಿ ಮಾಡಿ, ಅವರಿಗೆ ಅರ್ಜಿ ಸಲ್ಲಿಸಿ, ಎಸಿ ಡಿಸಿಗೆ ಅರ್ಜಿ ರವಾನೆ ವ್ಯವಸ್ಥೆ ಮಾಡಲಾಗಿತ್ತು. ಅರಣ್ಯ ಸಮಿತಿ ಸಕ್ರಿಯವಾಗಿ ಇಲ್ಲದ ಸಂದರ್ಭದಲ್ಲಿ ಅಧಿಕಾರಿಗಳು ಅರ್ಜಿ ತಿರಸ್ಕರಿಸಿದರು. ಎಲ್ಲರಿಗೂ ನೋಟಿಸ್ ಕೊಡಲಅಗಿದೆ. ಬೆಂಗಳೂರು ವ್ಯಾಪ್ತಿಯ ಭೂಗಳ್ಳರನ್ನು ಹಿಡಿಯಲು ಮಾಡಿದ ಕಾನೂನುನ್ನು ಅರಣ್ಯದಲ್ಲಿ ವಾಸವಾಗಿರುವವರಿಗೂ ಲಾಗೂ ಮಾಡಿ ಅವರನ್ನು ಕೋರ್ಟ್‌ಗೆ ಅಲೆಯುವಂತೆ ಮಾಡಲಾಗಿದೆ. ಇದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹಾರಕ್ಕೆ ಮಧ್ಯಂತರ ಅರ್ಜಿ ಹಾಕಬೇಕಿದ್ದು, ಕೇಂದ್ರದ ಮೇಲೆ ಒತ್ತಡ ತರುತ್ತೇವೆ. ಅವರನ್ನು ಕಾಡಿನಿಂದ ಆಚೆ ಹಾಕಲು ಆಗಲ್ಲ ಎಂದರು. ಜತೆಗೆ ಕಸ್ತೂರಿ ರಂಗನ್ ವರದಿ ಒಪ್ಪಲ್ಲ ಎಂದು ನಮ್ಮ ನಿಲವು ಕಳಿಸಲಾಗುತ್ತದೆ ಎಂದು ವಿವರಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × three =
Remember me
