ಬೆಂಗಳೂರು:ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಆಯ್ದ ಸೇವೆಗಳನ್ನು ‘ಸೇವಾ ಸಿಂಧು’ ಯೋಜನೆಯಲ್ಲಿ ತರಲಾಗಿದ್ದು, ಆನ್​ಲೈನ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಅಗತ್ಯ ದಾಖಲೆ ಪಡೆಯಬಹುದಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅಧಿಕೃತವಾಗಿ ಪ್ರಕಟಿಸಿದರು.
ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿ, ಕಾನೂನು ಇಲಾಖೆ ವ್ಯಾಪ್ತಿಗೆ ಬರುವ ವಿ.ವಿ.ಯಡಿ 106 ಕಾನೂನು ಕಾಲೇಜುಗಳಿವೆ. ಅನಗತ್ಯ ವಿಳಂಬ, ವಿದ್ಯಾರ್ಥಿಗಳ ಅಲೆದಾಟ ತಪ್ಪಿಸುವುದರ ಜತೆಗೆ ದಾಖಲೆಗಳನ್ನು ಪಡೆಯುವ ಪ್ರಕ್ರಿಯೆ ಸರಳಗೊಳಿಸಲೆಂದು ಆಯ್ದ 10 ಸೇವೆಗಳನ್ನು ‘ಸೇವಾ ಸಿಂಧು’ನಲ್ಲಿ ಸೇರಿಸಲಾಗಿದೆ. ಬೆರಳ ತುದಿಯಲ್ಲೇ ವಿದ್ಯಾರ್ಥಿಗಳಿಗೆ ಬೇಕಾದ ದಾಖಲೆ ಲಭಿಸಲಿದೆ. ಇದರಿಂದ ಹಣ, ಸಮಯ ಉಳಿತಾಯವಾಗುತ್ತದೆ ಎಂದರು.
ಅಲ್ಲದೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ನಿರ್ದೇಶನಾಲಯದ ಮೂರು ಸೇವೆಗಳು ‘ಸೇವಾ ಸಿಂಧು’ ವ್ಯಾಪ್ತಿಗೆ ಸೇರಿಸಲಾಗಿದೆ. ಈ ಸೇವೆ ಪಡೆಯಲು ಕೊಳವೆಬಾವಿ ಅಥವಾ ಬಾವಿಗೆ ಸ್ಥಳ ಆಯ್ಕೆಗಾಗಿ ಭೂಭೌತಿಕ ವಿಧಾನಕ್ಕೆ 1,000 ರೂ., ಭೂವೈಜ್ಞಾನಿಕ ವಿಧಾನಕ್ಕೆ 2,000 ರೂ. ಶುಲ್ಕ ನಿಗದಿಯಾಗಿದೆ. ಈ ಶುಲ್ಕ ಪಾವತಿಸಿದ ನಂತರ ನಿಗದಿತ ದಿನಾಂಕದ ಮಾಹಿತಿ ನೀಡಿ ಸಮೀಕ್ಷೆ ನಡೆಸಿ ಸಲಹೆ ನೀಡಲಾಗುತ್ತದೆ ಎಂದು ತಿಳಿಸಿದರು.
‘ಸಕಾಲ’ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಮಾತನಾಡಿ, ಡಿಜಿ ಲಾಕರ್​ಗೆ ಜೋಡಣೆಯಾದ ಸೇವಾ ಸಿಂಧು ಯೋಜನೆಯಲ್ಲಿ 354 ಸೇವೆ ಲಭ್ಯವಿವೆ. ಅರ್ಜಿ ಸಲ್ಲಿಸಿದಾಗ ಸ್ವಯಂಪ್ರೇರಿತವಾಗಿ ಡಿಜಿ ಲಾಕರ್ ತೆರೆದುಕೊಳ್ಳಲಿದ್ದು, ನಂತರ ಅರ್ಜಿ ಸಲ್ಲಿಸಿದರೆ ನಿರ್ದಿಷ್ಟ ಸೇವೆ ಅರ್ಜಿದಾರರಿಗೆ ಸಿಗುತ್ತದೆ ಎಂದರು.
ಲಭ್ಯ ಆನ್​ಲೈನ್ ಸೇವೆಗಳು
ಎಸ್ಸೆಸ್ಸೆಲ್ಸಿ-ಪಿಯುಸಿ ಅಂಕಪಟ್ಟಿ ಆಧರಿಸಿ ಜಾತಿ ಪ್ರಮಾಣಪತ್ರ, ಜನ್ಮ ದಿನಾಂಕ ತಿದ್ದುಪಡಿ, ಉತ್ತೀರ್ಣ ಪ್ರಮಾಣಪತ್ರ ಹಾಗೂ ನಕಲು ಪ್ರತಿ, ತಾತ್ಕಾಲಿಕ ಪದವಿ ಪ್ರಮಾಣಪತ್ರ (ಪಿಡಿಸಿ) ಹಾಗೂ ನಕಲು ಪ್ರತಿ, ಅಂಕಪಟ್ಟಿಗಳ ನಕಲು ಪ್ರತಿ, ಪ್ರಮಾಣಪತ್ರದ ನೈಜತೆ ಪರಿಶೀಲನೆಗಾಗಿ ಅರ್ಜಿ, ಅರ್ಹತಾ ಪ್ರಮಾಣಪತ್ರ, ವಲಸೆ ಪ್ರಮಾಣಪತ್ರ, ಕಾಲೇಜು ಬದಲಾವಣೆ, ಪದವಿ ಪ್ರಮಾಣಪತ್ರ, ಎಸ್ಸೆಸ್ಸೆಲ್ಸಿ/ ಪಿಯುಸಿ ಅನ್ವಯ ಅಂಕಪಟ್ಟಿ ತಿದ್ದುಪಡಿ, ದಾಖಲೆಗಳ ಅಧಿಕೃತ ಪ್ರತಿಲೇಖನಕ್ಕಾಗಿ ಅರ್ಜಿ ಸೇವೆಗಳನ್ನು ‘ಸೇವಾ ಸಿಂಧು’ಗೆ ಜೋಡಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
