ಬೆಂಗಳೂರು:ಕೈ-ಕಾಲುಗಳಿಗೆ ಬ್ಯಾಂಡೇಜ್ ಸುತ್ತಿಕೊಳ್ತಾರೆ.. ರೋಗಿಗಳಂತೆ ನಟಿಸುತ್ತಾರೆ.. ಅಯ್ಯೋ ಪಾಪ ಅಂತ ಅವರ ಸಹಾಯಕ್ಕೆ ಹೋದ್ರೆ ಕಿಡ್ನ್ಯಾಪ್​ ಆಗ್ತೀರಿ ಜೋಕೆ!
ಹೌದು, ಹೀಗಂತ ಹೇಳೋಕು ಕಾರಣ ಇದೆ. ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ವಕೀಲರೊಬ್ಬರು ಕಾರಿನಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಒಂದು ಗ್ಯಾಂಗ್ ಕಾಲಿಗೆ ಬ್ಯಾಂಡೇಜ್ ಕಟ್ಟಿಕೊಂಡು ಎದುರಿಗೆ ಬಂದಿತ್ತು. ‘ಪ್ಲೀಸ್​ ಸರ್.. ಹೆಲ್ಪ್ ಮಾಡಿ..’ ಎಂದು ಬೇಡುತ್ತಾ ಕಾರನ್ನು ಅಡ್ಡಗಟ್ಟಿದ್ದರು. ವಕೀಲರು ಪಾಪ ಎನ್ನುತ್ತಾ ಸಹಾಯ ಮಾಡಲೆಂದು ಹೋಗುತ್ತಿದ್ದಂತೆ ಐನಾತಿ ಗ್ಯಾಂಗ್​, ಗನ್ ತೋರಿಸಿ ವಕೀಲರನ್ನ ಕಿಡ್ನ್ಯಾಪ್​ ಮಾಡಿತ್ತು.ಇದನ್ನೂ ಓದಿರಿಹಾಡಹಗಲೇ ಕೋರ್ಟ್​ ಆವರಣದಲ್ಲಿ ವಕೀಲನ ಬರ್ಬರ ಕೊಲೆ! ಬೆಚ್ಚಿಬಿದ್ದ ಜನತೆ
ಬೆಂಗಳೂರಿಲ್ಲಿ ವಕೀಲರನ್ನ ಕಿಡ್ನ್ಯಾಪ್​ ಮಾಡಿದ ಗ್ಯಾಂಗ್​, ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಕರೆದುಕೊಂಡು ಹೋಗಿ ಟಾರ್ಚರ್ ಕೊಟ್ಟಿದೆ. ಲಾಯರ್ ಮೂಲಕ ಕುಟುಂಬಸ್ಥರಿಗೆ ಕರೆ ಮಾಡಿಸಿ ‘ಆಕ್ಸಿಡೆಂಟ್ ಆಗಿದೆ, ಅರ್ಜೆಂಟ್​ ಹಣ ಕಳುಹಿಸಿ’ ಎಂದು ಹೇಳಿಸಿದ್ದಾರೆ. ಒಟ್ಟು 15,000 ಸಾವಿರ ಹಣ ಹಾಕಿಸಿಕೊಂಡಿದ್ದ ಆರೋಪಿಗಳು, ಮೊಬೈಲ್ ಕಿತ್ತುಕೊಂಡು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಘಟನೆ ಬಳಿಕ ಬನಶಂಕರಿ ಪೊಲೀಸ್​ ಠಾಣೆಯಲ್ಲಿ ವಕೀಲರು ದೂರು ನೀಡಿದ್ದರು. ತನಿಖೆ ಕೈಗೊಂಡ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಟಿಪ್ಪು ಸುಲ್ತಾನ್, ಜಾಫರ್, ವಿಶಾಲ್, ದೀಪಕ್ ಮತ್ತು ನವೀನ್ ಬಂಧಿತರು.
ಪ್ರೊ.ಭಗವಾನ್​ ಮುಖಕ್ಕೆ ಮಸಿ ಬಳಿದಿದ್ದ ವಕೀಲೆ ಮೀರಾಗೆ ಸಂಕಷ್ಟ!

ಹಾಡಹಗಲೇ ಕೋರ್ಟ್​ ಆವರಣದಲ್ಲಿ ವಕೀಲನ ಬರ್ಬರ ಕೊಲೆ! ಬೆಚ್ಚಿಬಿದ್ದ ಜನತೆ

ನೀವು ಶಾಸಕರಾದ್ರೆ ನಮಗೇನ್ರಿ? ಸುಮ್ಮನೆ ಹಣ ಕಟ್ಟಿ… ಶಾಸಕನಿಗೆ ಟೋಲ್​ ಸಿಬ್ಬಂದಿ ಧಮ್ಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 7 =
Remember me
