ಮಂಡ್ಯ:ತಾಲೂಕಿನ ನವಿಲೆ ಗ್ರಾಮದ ಶಿಂಷಾ ನದಿ ದಡದಲ್ಲಿದ್ದ ಬೈಕ್ ಮತ್ತು ರಕ್ತದ ಕಲೆಯನ್ನ ಬೆನ್ನಟ್ಟಿದ್ದ ಪೊಲೀಸರು ಕೈಗೆ ಭೀಕರವಾಗಿ ಕೊಲೆಯಾಗಿದ್ದ ವಕೀಲನ ಶವ ಸಿಕ್ಕಿದೆ!
ಶಿಂಷಾ ನದಿಯಲ್ಲಿ ಶನಿವಾರ ಪತ್ತೆಯಾದ ಶವ ವಕೀಲ ರವೀಂದ್ರ (50) ಅವರದ್ದೆಂದು ತಿಳಿದು ಬಂದಿದೆ. ಶನಿವಾರ ಮಧ್ಯಾಹ್ನ ಕುರಿಗಳಿಗೆ ಸೊಪ್ಪು ತರಲೆಂದು ಹೋಗಿದ್ದ ರವೀಂದ್ರ ಅವರನ್ನು ಬೈಕ್​ನಿಂದ ಕೆಳಗಿಳಿಸಿ, ಸುಮಾರು 50 ಮೀಟರ್​ನಷ್ಟು ದೂರಕ್ಕೆ ಎಳೆದೊಯ್ದ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಗುರುತು ಪತ್ತೆ ಆಗದಿರಲೆಂದು ಮುಖವನ್ನು ಕಲ್ಲಿನಿಂದ ಜಜ್ಜಿದ್ದಾರೆ. ನೀರಿನಲ್ಲಿ ತೇಲದಿರಲೆಂದು ಮೃತದೇಹಕ್ಕೆ ಭಾರಿ ಗಾತ್ರದ ಕಲ್ಲನ್ನು ಕಟ್ಟಿ ಶಿಂಷಾ ನದಿಗೆ ಎಸೆದು ಪರಾರಿಯಾಗಿದ್ದಾರೆ.ಇದನ್ನೂ ಓದಿರಿವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ
ರವೀಂದ್ರ ಅವರು ಮಧ್ಯಾಹ್ನವಾದರೂ ಊಟಕ್ಕೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಕರೆ ಮಾಡಿದಾಗ ಅವರ ಮೊಬೈಲ್​ ಸ್ವಿಚ್ಡ್​ ಆಫ್​ ಆಗಿತ್ತು. ಇದರಿಂದ ಆತಂಕಗೊಂಡು ತೋಟದ ಬಳಿ ಹೋಗಿ ಪರಿಶೀಲಿಸಿದಾಗ ಶಿಂಷಾ ನದಿ ದಡದಲ್ಲಿ ಬೈಕ್​ ಮತ್ತು ರಕ್ತದ ಕಲೆ ಪತ್ತೆಯಾಗಿತ್ತು. ಅನುಮಾನಗೊಂಡ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದು, ಶನಿವಾರ ತಡರಾತ್ರಿ ಮೃತದೇಹ ಪತ್ತೆಯಾಗಿದೆ.
ಎಸ್ಪಿ ಪರಶುರಾಮ, ಸಿಪಿಐ ಕೆ.ಆರ್​.ಪ್ರಸಾದ್​ ಸ್ಥಳಕ್ಕೆ ಭೇಟಿ ನೀಡಿದ್ದರು. ಶವವನ್ನು ನಂದಿಯಿಂದ ಮೇಲೆತ್ತಿ ಪರಿಶೀಲಿಸಿದಾಗ ಮೃತರ ಗುರುತು ಪತ್ತೆಯಾಯಿತು. ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ವೈದ್ಯಕಿಯ ಪರೀಕ್ಷೆ ನಡೆಸಲಾಯಿತು. ಕೊಲೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಆದರೆ, ಮರಳು ದಂಧೆ ವಿರುದ್ಧ ರವೀಂದ್ರ ದ್ವನಿಯತ್ತಿದ್ದರು. ಯಾರೋ ಹಳೇ ದ್ವೇಷದಿಂದ ಕೊಲೆಗೈದಿರಬೇಕು ಎಂಬ ಶಂಕೆ ವ್ಯಕ್ತವಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೆಸ್ತೂರು ಠಾಣೆ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕನ್ನಡ ಚಿತ್ರರಂಗದ ಪೋಷಕ ನಟ ಶನಿಮಹಾದೇವಪ್ಪ ವಿಧಿವಶ

ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಯುವಕರು ಕಣಕ್ಕಿಳಿಸಿದ್ದ ನಿರ್ಗತಿಕನಿಗೆ ಗೆಲುವೇ? ಸೋಲೇ?

54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
