ಬೆಂಗಳೂರುಯುವ ವಕೀಲರು ಸಾಮಾನ್ಯವಾಗಿ ದತ್ತಾಂಶಗಳನ್ನು ಗೂಗಲ್‌ನಿಂದ ಪಡೆಯುತ್ತಾರೆ. ಗೂಗಲ್‌ನಲ್ಲಿ ಸಿಗುವ ಮಾಹಿತಿಗಳಿಗಿಂತ ತಮ್ಮ ಅನುಭವ ಮತ್ತು ಹಿರಿಯ ತಜ್ಞ ವಕೀಲರ ಅನುಭವಗಳನ್ನು ಬಳಸಿಕೊಳ್ಳುವುದು ಸೂಕ್ತ ಎಂದು ಸುಪ್ರೀಕೋರ್ಟ್ ನ್ಯಾಯಮೂರ್ತಿ ಎಸ್.ವಿ. ಭಟ್ಟಿ ತಿಳಿಸಿದರು.
ನಗರದ ಆನಂದರಾವ್‌ವೃತ್ತದಲ್ಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಹಳೆಯ ವಿದ್ಯಾರ್ಥಿಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರಿಗೆ ನನ್ನ ಲಹೆ ಏನೆಂದರೆ, ಗೂಗಲ್ ನಿಮ್ಮ ಸಂಶೋಧನಾ ಪ್ರಬಂಧವನ್ನು ವೇಗವಾಗಿ ನೀಡಬಹುದು. ಚಾಟ್ ಜಿಪಿಟ್ ಸುಪ್ರೀಂಕೋರ್ಟ್‌ನಲ್ಲಿ ವಾದ ಮಾಡಲು ಅನುಸರಿಸಬೇಕಾದ ತತ್ವಗಳನ್ನು ತಿಳಿಸಲು ಸಹಾಯ ಮಾಡಬಹುದು. ಆದರೆ, ಗೂಗಲ್ ಎಂದಿಗೂ ವೃತ್ತಿಯಲ್ಲಿಯ ಹಿರಿಯ ತಜ್ಞರ ಅನುಭವಗಳನ್ನು ಮತ್ತು ಪರಿಸ್ಥಿತಿಗೆ ಅನುಗುಣವಾಗಿ ಯಾವ ರೀತಿಯಲ್ಲಿ ವರ್ತಿಸಬೇಕು ಎಂಬ ಮನಸ್ಥಿತಿಯನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪ್ರಾಯೋಗಿಕವಾಗಿ ತಿಳಿದುಕೊಂಡಾಗ ಉತ್ತಮ ವಕೀಲರಾಗಲು ಸಹಾಯವಾಗಲಿದೆ ಎಂದು ಕಿವಿಮಾತು ಹೇಳಿದರು.
ನಮ್ಮ ವೃತ್ತಿಯಲ್ಲಿ ಎಂದಿಗೂ ಒಳ್ಳೆಯ ಮತ್ತು ಕೆಟ್ಟ ಅನುಭವಗಳಿರುತ್ತವೆ. ಆದ್ದರಿಂದ ಪ್ರಕರಣಗಳನ್ನು ಸೋತಾಗ ಹತಾಶೆಗೊಳ್ಳದೆ, ಗೆದ್ದಾಗ ಬೀಗಬಾರದು. ಹೊಸದಾಗಿ ಬಂದವರಿಗೂ ಮತ್ತು ಹಿರಿಯ ವಕೀಲರಿಗೂ ವ್ಯತ್ಯಾಸ ತಿಳಿದು ಪ್ರಾಕ್ಟೀಸ್ ಮುಂದುವರಿಸಬೇಕು ಎಂದರು,
ವಕೀಲರು ತಮ್ಮ ಕಕ್ಷಿದಾರನ ಪ್ರಕರಣವೇನೆಂದು ಮೊದಲು ಸ್ಪಷ್ಟತೆ ಹೊಂದದಿದ್ದರೆ ಸಮರ್ಥವಾಗಿ ವಾದ ಮಂಡಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವಕೀಲರಾಗಲು ಬಯಸುವವರು ನ್ಯಾಯಾಲಯದ ನಿಯಮಗಳು ಮತ್ತು ಪ್ರಕರಣಕ್ಕೆ ನ್ಯಾಯ ಒದಗಿಸುವ ಸರಳ ಸೂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ಬಾಂಬೆ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾ. ಮಂಜುಳಾ ಚೆಲ್ಲೂರು, ನ್ಯಾ.ಎಸ್.ಜಿ. ಪಂಡಿತ್, ನ್ಯಾ. ಮೊಹಮ್ಮದ್ ನವಾಜ್, ಹಿರಿಯ ವಕೀಲ ರವಿ ಬಿ,. ನಾಯಕ್, ಸಂಘದ ಅಧ್ಯಕ್ಷ ಎಂ.ಟಿ. ನಾಣಯ್ಯ, ಕಾರ್ಯದರ್ಶಿ ಟಿ.ಎ. ರಾಜಶೇಖರ್ ಸೇರಿ ಹಲವರು ಉಪಸ್ಥಿತರಿದ್ದರು.
ಜೀವನದಲ್ಲಿ ಪ್ರಾಮಾಣಿಕತೆ, ಸಮಗ್ರತೆ ಮತ್ತು ಬದ್ಧತೆಯಿಂದ ನಿರಂತರವಾಗಿ ಕಾರ್ಯನಿರ್ವಹಿಸಿದಾಗ ಯಶಸ್ವಿಯಾಗಲು ಸಾಧ್ಯವಾಗಲಿದೆ.– ನ್ಯಾ. ಮಂಜುಳಾ ಚೆಲ್ಲೂರು, ಬಾಂಬೆ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 11 =
Remember me
