ಅಥಣಿ:ರಾಜ್ಯ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಹಾಗೂ ಮುಖಂಡರು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ಧಾರೆ.
ಇನ್ನು ಅಥಣಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಮಾಜಿ ಡಿಸಿಎಂ ಲಕ್ಷ್ಮಣ್​ ಸವದಿ ಬಿಜೆಪಿಯಲ್ಲಿ ಟಿಕೆಟ್​ ಸಿಗದ ಹಿನ್ನಲೆಯಲ್ಲಿ ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದು ಇನ್ನು ಇವರಿಗೆ ಸ್ಥಳೀಯ ಕಾಂಗ್ರೆಸ್​ ಮುಖಂಡ ಷರತ್ತುಗಳ ಸುರಿಮಳೆಗೈದಿದ್ಧಾರೆ.
ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸ್ಥಳೀಯ ಕಾಂಗ್ರೆಸ್​ ಮುಖಂಡ ಹಾಗೂ ಅಥಣಿ ವಿಧಾನಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿ ಸತ್ಯಪ್ಪ ಬಾಗೆಣ್ಣವರ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಪಾಲಿಗೆ ಬಿಸಿ ತುಪ್ಪವಾಗಿ ಪರಿಣಮಿಸುವ ಷರತ್ತುಗಳ ಸುರಿಮಳೆಗೈದಿದ್ಧಾರೆ.
ಅಥಣಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಣ್​ ಸವದಿಗೆ ಆಯ್ಕೆ ಮಾಡಿದ್ದು ಹೈಕಮಾಂಡನ್ ತಪ್ಪು ನಿರ್ಧಾರ. ಯಾಕಂದ್ರೆ ಕಳೆದ ಇಪ್ಪತ್ತು ವರ್ಷಗಳಿಂದ ನಮ್ಮ ವಿರುದ್ಧ ರಾಜಕಾರಣ ಮಾಡಿದ್ದೀರಿ. ನಿಮ್ಮ ಬೆಂಬಲಿಗರಿಂದ ನಮ್ಮ ಕಾರ್ಯಕರ್ತರಿಗೆ, ಸಮುದಾಯದವರ ಮೇಲೆ 56 ಪ್ರಕರಣ ದಾಖಲಿಸಿದ್ದೀರಿ. ಎಲ್ಲ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು.
ಇದನ್ನೂ ಓದಿ:ನಿಮಗೆ ಧಮ್ಮು, ತಾಕತ್ತು ಇದ್ದರೆ…; ಪ್ರಧಾನಿ ಮೋದಿಗೆ ಸವಾಲೆಸೆದ ಕಾಂಗ್ರೆಸ್​
ಹಾಲುಮತ ಸಮುದಾಯದ ಹತ್ತು ಕೃಷಿ ಪತ್ತಿನ ಸಹಕಾರಿ ಸಂಘದ ಪತ್ತನ್ನು ತಡೆ ಹಿಡಿದಿದ್ದೀರಿ. ಈ ಕೂಡಲೇ ಅದೆಲ್ಲವನ್ನು ಮಂಜೂರು ಮಾಡಬೇಕು. ಈ ಹಿಂದೆ ನಿಮ್ಮ ವಿರುದ್ಧ ಸ್ಫರ್ಧಿಸಿ ಸೋತಿದ್ದ ಅಭ್ಯರ್ಥಿಗಳನ್ನು ಕರೆಸಿ ಅವರಿಗೆ ಅವರು ಚುಮಾವಣೆಯಲ್ಲಿ ಖರ್ಚು ಮಾಡಿದ್ದ ಹಣವನ್ನು ನೀಡಬೇಕು.
ನಾವು 11 ಜನ ಟಿಕೆಟ್ ಆಕಾಂಕ್ಷಿಗಳು ನಿಮ್ಮ ಸಲುವಾಗಿ ತ್ಯಾಗ ಮಾಡಿದ್ದೇವೆ. ಅದೇ ರೀತಿ ನಿಮ್ಮ ಸಹೋದರ ಕೃಷ್ಣ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಿದ್ದಾರೆ. ರಾಜೀನಾಮೆ ನೀಡಿ ನಮ್ಮವರಿಗೆ ಅವಕಾಶ ಮಾಡಿಕೊಡಬೇಕು.
ಸವದಿ ಡಿಸಿಸಿ ಬ್ಯಾಂಕ್ ಡೈರೆಕ್ಟರ್ ಸ್ಥಾನಕ್ಕೆ ರಾಜೀನಾಮೆ ನೀಡಿ ನನಗೆ ಅವಕಾಶ ಮಾಡಿಕೊಡಬೇಕು. ಇಷ್ಟೆಲ್ಲ ಬೇಡಿಕೆಗಳಿಗೆ ಒಪ್ಪಿಕೊಂಡ್ರೆ ಮಾತ್ರ ನಿಮ್ಮ ಪರವಾಗಿ ಕೆಲಸ ಮಾಡ್ತೀವಿ. ಇಲ್ಲವಾದ್ರೆ ನಿಮ್ಮ ವಿರುದ್ಧ ಚುನಾವಣೆ ಮಾಡ್ತೇವೆ ಎಂದು ಸತ್ಯಪ್ಪ ಬಾಗೆಣ್ಣವರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 8 =
Remember me
