ಬೆಂಗಳೂರು:ಬಿಜೆಪಿಯಿಂದ ಟಿಕೆಟ್​ ಮಿಸ್​ ಆಗಿದ್ದಕ್ಕೆ ಕಾಂಗ್ರೆಸ್​ ಕಡೆ ಮುಖ ಮಾಡಿರುವ ಲಕ್ಷ್ಮಣ್​ ಸವದಿ ಕಾಂಗ್ರೆಸ್​ ನಾಯಕರ ಮುಂದೆ ಪ್ರಮುಖ ಮೂರು ಬೇಡಿಕೆಗಳನ್ನು ಇಟ್ಟಿರುವುದಾಗಿ ತಿಳಿದುಬಂದಿದೆ.
ಕಳೆದ ಮೂರು ದಿನಗಳಿಂದ ಸವದಿ ಆಪರೇಷನ್​​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಇಳಿದಿದ್ದರು. ಸವದಿ ಬಿಜೆಪಿ ಬಿಡುವ ಸೂಚನೆ ಸಿಗುತ್ತಿದ್ದಂತೆ ಡಿಕೆಶಿ ಕಾರ್ಯಪ್ರವೃತ್ತರಾದರು. ಬೆಳಗ್ಗೆ 7ಕ್ಕೆ ಖಾಸಗಿ ಕಾರಿನಲ್ಲಿ ಖಾಸಗಿ ಸ್ಥಳಕ್ಕೆ ತೆರಳಿದ್ದ ಡಿಕೆಶಿ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಸಹೋದರ ಚೆನ್ನರಾಜ್ ಹಟ್ಟಿಹೊಳಿಗೆ ಸೂಚನೆ ನೀಡಿದ್ದರು. ವಿಶೇಷ ವಿಮಾನದಲ್ಲಿ ಕರೆದುಕೊಂಡು ಬರಲು‌ ಸೂಚನೆ ನೀಡಿದ್ದರು.
ಇದನ್ನೂ ಓದಿ:ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!
ಸವದಿ ಬೆಂಗಳೂರಿಗೆ ಬರುತ್ತಿದ್ದದಂತೆ ಅವರನ್ನು ಬರಮಾಡಿಕೊಂಡ ಡಿಕೆಶಿ, ಖಾಸಗಿ ಸ್ಥಳದಲ್ಲಿ ಎರಡು ಗಂಟೆಗಳ ಕಾಲ ಸುಧೀರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ ರಣದೀಪ್​ ಸುರ್ಜೆವಾಲ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಉಪಸ್ಥಿತರಿದ್ದರು.
ಕಾಂಗ್ರೆಸ್​ ನಾಯಕರ ಜತೆ ನಡೆದ ಚರ್ಚೆಯಲ್ಲಿ ಲಕ್ಷ್ಮಣ್​ ಸವದಿ ಮೂರು ಡಿಮ್ಯಾಂಡ್ ಇಟ್ಟಿದ್ದಾರೆ. ಮೊದಲನೆಯದು ಅಥಣಿ ಟಿಕೆಟ್ ನೀಡಬೇಕು. ಎರಡನೇಯದು ಐದು ಕ್ಷೇತ್ರಗಳ ಉಸ್ತುವಾರಿ ನೀಡಬೇಕು ಎಂಬುದು ಮತ್ತು ಮೂರನೇ ಬೇಡಿಕೆ ಸರ್ಕಾರ ಬಂದರೆ ಸಚಿವ ಸ್ಥಾನ ನೀಡಬೇಕು ಎಂಬುದು. ಈ ಬೇಡಿಕೆಗಳನ್ನು ಮುಂದಿಟ್ಟು ಸವದಿ ಕಾಂಗ್ರೆಸ್ ಸೇರುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಬೆಳಗಾವಿ ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆ: ಕಾಂಗ್ರೆಸ್​ ನಾಯಕರ ಜತೆ ಸವದಿ ಚರ್ಚೆ, ಕೈನತ್ತ ಅನಿಲ್​ ಬೆನಕೆ

ಜಗದೀಶ್ ಶೆಟ್ಟರ್​ಗೆ ಟಿಕೆಟ್ ನೀಡಬೇಕೆಂದು ಹೇಳಿದ್ದೇವೆ: ಪ್ರಲ್ಹಾದ ಜೋಶಿ

ಫಾರ್ಮ್‌ನಲ್ಲಿ ಸ್ಫೋಟ ; 18 ಸಾವಿರ ಹಸುಗಳು ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − six =
Remember me
