ಚಿಕ್ಕೋಡಿ:3 ಸಾವಿರ ಹಣ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸಿಕೊಳ್ಳದಂತಹ ದುರ್ಗತಿ ಬಂದಿಲ್ಲ… ಎನ್ನುತ್ತಲೇ ಸಿಡಿಮಿಡಿಗೊಂಡ ಸವದಿ3 ಸಾವಿರ ರೂಪಾಯಿ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸಿಕೊಳ್ಳದಂತಹ ದುರ್ಗತಿ ನನಗೆ ಬಂದಿಲ್ಲ. ಭಗವಂತ ನಮ್ಮ ಮನೆತನವನ್ನ ಉತ್ತಮ ಸ್ಥಿತಿಯಲ್ಲಿಟ್ಟಿದ್ದಾನೆ. ನಾನು 3 ಸಾವಿರ ರೂ.ಗಾಗಿ ಜುಗ್ಗತನ ಹಾಗೂ ಕೀಳುತನ ಮಾಡಿಲ್ಲ. ಯಾರೋ ಆಗಲಾದವರು ನನ್ನ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ. ಯಾವ ಮರದಲ್ಲಿ ಹಣ್ಣು ಇರುತ್ತವೆಯೋ ಅಂಥ ಮರಗಳಿಗೆ ಕಲ್ಲು ಬೀಳುವುದು ಸಹಜ… ಎಂದು ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿ ನಗರದ 3ನೇ ಬಸ್​ ಡಿಪೋದಲ್ಲಿ ಸಾರಿಗೆ ಇಲಾಖೆಯಿಂದ ನಿರ್ಮಿಸಿದ್ದ ವಿಶ್ರಾಂತಿ ಗೃಹ ಉದ್ಘಾಟನೆಗೆಂದು ಶುಕ್ರವಾರ ಖಾಸಗಿ ಕಾರಿನಲ್ಲಿ ಲಕ್ಷ್ಮಣ ಸವದಿ ಬಂದಿದ್ದರು. ಆ ವೇಳೆ ಸವದಿ ಅವರ ಖಾಸಗಿ ಕಾರಿಗೆ ಬಸ್​ ಡಿಪೋದಲ್ಲಿನ ಬಂಕ್​ನಿಂದಲೇ ಅವರ ಚಾಲಕ 44 ಲೀಟರ್​ ಡೀಸೆಲ್​ ಹಾಕಿಸಿಕೊಂಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಶನಿವಾರ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವರು, ಅದು ನನ್ನ ಖಾಸಗಿ ವಾಹನ, ಚಾಲಕನೂ ಖಾಸಗಿಯವನೇ. ನನ್ನ ಕಾರಿಗೆ ಆತ ಸಾರಿಗೆ ಬಸ್​ ಡಿಪೋದಲ್ಲಿ ಡೀಸೆಲ್​ ಹಾಕಿಸಿಕೊಂಡದ್ದು ನಿಜ ಎಂದರು.ಇದನ್ನೂ ಓದಿರಿಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲು
ನಮ್ಮ ಚಾಲಕ ಕಾರಿಗೆ ಡೀಸೆಲ್ ಹಾಕಲು ಖಾಸಗಿ ಬಂಕ್ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಅಲ್ಲಿನ ಸಿಬ್ಬಂದಿ ಹೊರಗೆ ಬೇಡ, ಇಲ್ಲಿಯೇ ಡೀಸೆಲ್ ಹಾಕಿಸಿಕೊಳ್ಳಿ ಎಂದಿದ್ದಾರೆ. ನಮ್ಮ ಚಾಲಕನಿಗೂ ಅರಿವಿಲ್ಲದೆ ಅಲ್ಲಿಯೇ ಡೀಸೆಲ್ ಹಾಕಿಸಿಕೊಂಡಿದ್ದಾನೆ. ನಾನು ಕಾರ್ಯಕ್ರಮ ಮುಗಿಸಿ ಹೊರ ಬಂದ ಬಳಿಕ ವಿಚಾರ ಗೊತ್ತಾಯಿತು. ನಮ್ಮ ಇಲಾಖೆಯ ಡಿಸಿ ಅವರಿಗೂ ಲೋಪದೋಷ ಆಗಿರುವ ಬಗ್ಗೆ ತಿಳಿಸಿದ್ದೇನೆ. ಖಾಸಗಿ ವಾಹನಗಳಿಗೆ ಡೀಸೆಲ್ ಹಾಕಲು‌ ಬರುವದಿಲ್ಲ ಎಂದು ಬಸ್​ ಡಿಪೋದ ಬಂಕ್​ ಮ್ಯಾನೇಜರ್​ ಕೂಡ ಹೇಳಬಹುದಿತ್ತು. ಆದರೆ ಈ ಬಗ್ಗೆ ಹೇಳುವ ಅರಿವು ಆ ಮ್ಯಾನೇಜರ್​ಗೂ ಇಲ್ಲ ಎಂದ ಸಾರಿಗೆ ಸಚಿವರು, 3 ಸಾವಿರ ರೂಪಾಯಿ ಕೊಟ್ಟು ನನ್ನ ಕಾರಿಗೆ ಡೀಸೆಲ್ ಹಾಕಿಸಿಕೊಳ್ಳದಂತಹ ದುರ್ಗತಿ ನನಗೆ ಬಂದಿಲ್ಲ. ಭಗವಂತ ನಮ್ಮ ಮನೆತನವನ್ನ ಉತ್ತಮ ಸ್ಥಿತಿಯಲ್ಲಿಟ್ಟಿದ್ದಾನೆ ಎಂದರು.
ನಿಯಮ ಉಲ್ಲಂಘಿಸಿ ಸಚಿವರ ಕಾರಿಗೆ ಡೀಸೆಲ್ ಹಾಕಿದ್ದನ್ನು ಪ್ರಶ್ನಿಸಿ ವಾ.ಕ.ರ.ಸಾ.ಸಂಸ್ಥೆ ಬೆಳಗಾವಿ 3ನೇ ಘಟಕದ ವ್ಯವಸ್ಥಾಪಕರು ಕಿರಿಯ ಸಹಾಯಕ ಬಿ.ಎಸ್. ಕಿಶೋರ್​ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಲೈವ್​ನಲ್ಲೇ ವಿಷ ಕುಡಿದ ಅರ್ಚಕ! 3 ದಿನದ ಬಳಿಕ ಸೆಲ್ಫಿವಿಡಿಯೋ ವೈರಲ್​, ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

ತಾಯಿ-ತಂಗಿ ಮೇಲೆ ಟ್ರ್ಯಾಕ್ಟರ್​ ಹರಿಸಿ ಕೊಂದುಬಿಟ್ಟ! ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

ಬಸ್​ ಡಿಪೋದಲ್ಲಿ ಸಾರಿಗೆ ಸಚಿವರ ಖಾಸಗಿ ಕಾರಿಗೆ ಡೀಸೆಲ್ ತುಂಬಿದ ಸಿಬ್ಬಂದಿಗೆ ಎದುರಾಯ್ತು ಸಂಕಷ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
