ಬೆಳಗಾವಿ:ತಾಲೂಕಿನ ಮಾವಿನಕಟ್ಟಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗುದ್ದಲಿ ಪೂಜೆ ನೆರವೇರಿಸಿದರು. ಇದೇ ವೇಳೆ ಅವರು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರನ್ನು ರಾಕ್ಷಸರಿಗೆ ಹೋಲಿಸುವ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದರು.
ಗುದ್ದಲಿ ಪೂಜೆ ಬಳಿಕ ಮಾತನಾಡಿದ ಅವರು, ನಾಲ್ಕೂವರೆ ಕೋಟಿ ರೂಪಾಯಿಯ ಪ್ಯಾಕೇಜ್ ಇದು. ಎರಡು ವರ್ಷಗಳ ಹಿಂದೆಯೇ ನಾಲ್ಕೂವರೆ ಕೋಟಿ ರೂಪಾಯಿ ಟೆಂಡರ್ ಆಗಿ ವರ್ಕ್ ಆರ್ಡರ್ ಆಗಿತ್ತು. ಆದರೆ ದುರ್ದೈವದಿಂದ ನಮ್ಮ ಸರ್ಕಾರ ಪತನವಾಯಿತು. ಬಳಿಕ ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾದರು. ರಮೇಶ್ ಜಾರಕಿಹೊಳಿ ನೀರಾವರಿ ಸಚಿವರಾದ ಆದ ತಕ್ಷಣವೇ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಮಂಜೂರಾದ ಎಲ್ಲ ಅನುದಾನವನ್ನು ತಡೆಹಿಡಿದರು.
ಇದಕ್ಕೆ ಇಂಜಿನಿಯರ್ ಸಾಕ್ಷಿ, ಆದರೆ ಅವರು ಸರ್ಕಾರದ ಪ್ರತಿನಿಧಿ ಆಗಿರುವುದರಿಂದ ನೇರವಾಗಿ ಹೇಳಲು ಸಾಧ್ಯವಿಲ್ಲ. 15 ದಿನಗಳ ಹಿಂದೆಯೇ ಸಿಎಂ ಬಸವರಾಜ ಬೊಮ್ಮಾಯಿ ಸಾಹೇಬ್ರಿಗೆ ಮನವಿ ಮಾಡಿಕೊಂಡ ಮೇಲೆ ನಮಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅದಕ್ಕಾಗಿ ಈ ರಸ್ತೆ ಮಾಡುತ್ತಿದ್ದೇವೆ. ಮಾವಿನಕಟ್ಟಿ ಗ್ರಾಮದ ಮಗಳಾಗಿ ನಾನು ಹೇಳಿದ ಕೆಲಸ ಮಾಡಿದ್ದೇನೆ ಎಂದರು.
ರಾಕ್ಷಸರು ಬರ್ತಾರೆ, ಹೋಗ್ತಾರೆ:
ಒಮ್ಮೊಮ್ಮೆ ಸೂರ್ಯನಿಗೂ ಗ್ರಹಣ ಹಿಡಿಯುತ್ತೆ, ಚಂದ್ರನಿಗೂ ಗ್ರಹಣ ಹಿಡಿಯುತ್ತೆ. ಇನ್ನು ಲಕ್ಷ್ಮೀ ಹೆಬ್ಬಾಳ್ಕರ್ ಯಾವ ಗಿಡದ ತಪ್ಪಲ?. ಜೀವನದಲ್ಲಿ ರಾಕ್ಷಸರು ಬರ್ತಿರ್ತಾರೆ, ಬಂದು ಹೋಗಿರ್ತಾರೆ. ಆದರೆ ಸೂರ್ಯ ಸೂರ್ಯನೇ, ಚಂದ್ರ ಚಂದ್ರನೇ. ನಿಮ್ಮ ಆಶೀರ್ವಾದ ಇರುವ ತನಕ ನಾನು ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೆಜಿಎಫ್​ನಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಕಾಮುಕನಿಗೆ 30 ವರ್ಷ ಜೈಲು ಶಿಕ್ಷೆ!

ದೂರು ನೀಡಲು ಬಂದಾಕೆಯನ್ನೇ ಮಂಚಕ್ಕೆ ಕರೆದ ಪೊಲೀಸ್​ ಇನ್​ಸ್ಪೆಕ್ಟರ್​! ಸಂತ್ರಸ್ತೆ ಬಿಚ್ಚಿಟ್ಟ ನೋವು ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
