ಬೆಂಗಳೂರು: ರಾಜ್ಯ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರ ಆಯ್ಕೆಯಲ್ಲಿ ನಾವು ಎಡವಿದ್ದೇವೆ. ವಿಳಂಬದಿಂದ ರಾಜ್ಯದಲ್ಲಿ ಪಕ್ಷಕ್ಕೆ ಹಿನ್ನಡೆಯಾಗುವುದು ನಿಜ. ಪಂಚರಾಜ್ಯಗಳ ಚುನಾವಣೆ ನಂತರ ಪಕ್ಷದ ವರಿಷ್ಢರು ಈ ವಿಚಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿಯೊಂದು ರಾಜಕೀಯ ಪಕ್ಷಕ್ಕೆ ಹೈಮಾಂಡ್ ಇರುತ್ತದೆ. ಪಕ್ಷದ ಒಳಿತು, ಜನಹಿತ ಸಾಧನೆಗೆ ಯೋಗ್ಯವಾದ ತೀರ್ಮಾನ ಕಾಲಕಾಲಕ್ಕೆ ತೆಗೆದುಕೊಳ್ಳುತ್ತಾರೆ. ಜೆಡಿಎಸ್ ಪಕ್ಷವನ್ನು ಎನ್ ಡಿಎಗೆ ಸೇರಿಸಿಕೊಂಡದ್ದು, ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳುವ ತೀರ್ಮಾನವೆಲ್ಲ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಂತದಲ್ಲೇ ಆಗಿದೆ ಎಂದು ಎ.ನಾರಾಯಣಸ್ವಾಮಿ ಸ್ಪಷ್ಟಪಡಿಸಿದರು.
ಜಾತಿ ರಾಜಕಾರಣ ಇಷ್ಟಪಡುವುದಿಲ್ಲ, ಆ ಬಗ್ಗೆ ಹೆಚ್ಚು ಮಾತನಾಡಲು ಬಯಸುವುದಿಲ್ಲ. 3-4 ರಾಜ್ಯಗಳು ಬಿಟ್ಟರೆ ಬೇರೆಲ್ಲೂ ದಲಿತರು ಮುಖ್ಯಮಂತ್ರಿಯಾದದ್ದಿಲ್ಲ. ಈಗಲೂ ದಲಿತರು ಹಾಗೂ ಹಿಂದುಳಿದವರು ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷಗಳ ನಾಯಕರ ಮನೆ ಬಾಗಿಲು ಕಾಯುವುದು ತಪ್ಪಿಲ್ಲ. ದಲಿತ ಸಿಎಂ ಚರ್ಚೆಗಿಂತ ಸಮುದಾಯಗಳ ಏಳಿಗೆಗೆ ಏನೆಲ್ಲ ಮಾಡಿದ್ದೇವೆ ಎಂದು ಆಯಾ ಇಲಾಖೆ ಸಚಿವರು ಆತ್ಮವಿಮರ್ಶೆ ಮಾಡಿಕೊಂಡರೆ ಸಾಕು, ದಲಿತರ ಸಬಲೀಕರಣ ಸಾಧ್ಯವಾಗಲಿದೆ ಎಂದು ಕಾಂಗ್ರೆಸ್ ನಾಯಕರಿಗೆ ಪರೋಕ್ಷವಾಗಿ ತಿವಿದರು.
ಖಂಡಿತವಾಗಿ ಜಾತಿ ಗಣತಿ ಆಗಬೇಕು. ರಾಜ್ಯವಾರು ಮಾತ್ರವಲ್ಲ, ಇಡೀ ದೇಶದಲ್ಲಿ ಈ ಗಣತಿ ನಡೆಯುವ ಅಗತ್ಯವಿದೆ. ಜಾತಿವಾರು ಜನಸಂಖ್ಯೆ ಗಣಿಸಿದರೆ ಸಾಲದು. ಕಳೆದ 75 ವರ್ಷಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಏನೆಲ್ಲ ಪ್ರಗತಿಯಾಗಿದೆ. ಯಾವೆಲ್ಲ ಯೋಜನೆಗಳ ಫಲ ಅರ್ಹರಿಗೆ ತಲುಪಿದೆ. ಜಿಲ್ಲಾವಾರು ಬಳಕೆ ಪ್ರಯೋಜನ, ಉತ್ತಮ ಬದುಕು ಕಟ್ಟಿಕೊಡಲು ಪ್ರಯತ್ನಿಸಿದ ಪರಿ ಬಗ್ಗೆ ಅಧ್ಯಯನ ಮಾಡಿ ಸ್ಥೂಲ ವರದಿ ಸಿದ್ಧಪಡಿಸಿದರೆ, ಮುಂದಿನ ದಿನಗಳಲ್ಲಿ ಯಾವ ಯೋಜನೆಗಳು ಯಾವ ಜಿಲ್ಲೆ, ಸಮುದಾಯಗಳಿಗೆ ಆದ್ಯತೆ ನೀಡಬೇಕೆಂದು ಗೊತ್ತಾಗುತ್ತದೆ ಎಂದು ಎ.ನಾರಾಯಣಸ್ವಾಮಿ ಸುದೀರ್ಘವಾಗಿ ಸಮರ್ಥಿಸಿಕೊಂಡರು.
ಉಚಿತ ಯೋಜನೆಗಳನ್ನು ವಿರೋಧಿಸುವುದಿಲ್ಲ. ಅಗತ್ಯ ಉಳ್ಖವರಿಗೆ ಈ ಸೌಲಭ್ಯ ಒದಗಿಸಿದರೆ ಸಬಲೀಕರಣ ಸಾಧ್ಯವಾಗಲಿದೆ. ಆದರೆ ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ತಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಕೊಡುವುದು ಅಷ್ಟೇ ಮುಖ್ಯ. ಇಲ್ಲದಿದ್ದರೆ ಸಮಗ್ರ ಅಭಿವೃದ್ಧಿಗೆ ಹೊಡೆತ ಬೀಳುತ್ತದೆ. ಮುಂದಿನ ಐದು ವರ್ಷಗಳ ಕಾಲ ಬಡವರಿಗೆ ಉಚಿತ ಆಹಾರ ಧಾನ್ಯ ವಿತರಣೆ ಮುಂದುವರಿಯಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಆ ವೆಚ್ಚ ಭರಿಸುವ ಶಕ್ತಿಯಿದೆ ಎಂದು ಕೊಡುತ್ತಿದ್ದಾರೆ, ಬಡ ಜನರಿಗೆ ಅದರ ಅಗತ್ಯವೂ ಇದೆ ಎಂದು ಸಮಜಾಯಿಷಿ ನೀಡಿದರು.
ರಾಜ್ಯ ಸರ್ಕಾರ ಐದು ಗ್ಯಾರಂಟಿಗಳಲ್ಲಿ ಜಾರಿಗೆ ತಂದಿದ್ದು, ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಆರ್ಥಿಕ ಸಮಸ್ಯೆ ಕಾರಣಕ್ಕೆ ಅಭಿವೃದ್ಧಿ ಕುಂಠಿತವಾಗಿದೆ. ಇದೇ ಪರಿಸ್ಥಿತಿ ಉಚಿತ ಸೌಲಭ್ಯ ಘೋಷಿಸಿದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೆಲವು ರಾಜ್ಯಗಳಲ್ಲಿ ಇರುವುದು ಗಮನಿಸಿದ್ದೇನೆ. ಇಲಾಖೆ ಸಚಿವನಾಗಿ ರಾಜ್ಯವಾರು ಪ್ರವಾಸ ಕೈಗೊಂಡು ಪ್ರಗತಿ ಪರಿಶೀಲಿಸಿದಾಗ ಅಭಿವೃದ್ಧಿಗೆ ಹೊಡೆತ ಬಿದ್ದಿರುವುದು ನಿಚ್ಚಳವಾಗಿ ಗೋಚರಿಸಿದೆ ಎಂದು ಎ.ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
