ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.
ನಿರಾಳವಾಗಿ ಸಾಗಿದೆ ಕಲಿಕೆ
ಪ್ರತಿ ವರ್ಷ ಜೂನ್ ತಿಂಗಳೆಂದರೆ ಶಿಕ್ಷಕರಿಗೆ ಬಿಡುವಿರದ ಚಟುವಟಿಕೆ. ಆದರೆ, ಈ ವರ್ಷ ಕರೊನಾ ಕಾರಣಕ್ಕೆ ಶಾಲೆಗಳು ಆರಂಭವಾಗದಿದ್ದರಿಂದ ಸರ್ಕಾರದ ಆದೇಶದಂತೆ ಮನೆಯಲ್ಲೇ ಕುಳಿತು ಕೆಲಸ ಮಾಡಲು ಪ್ರಾರಂಭಿಸಿದೆವು. ಆದರೆ ಮಕ್ಕಳನ್ನು ತಲುಪಲಾರದ ಸ್ಥಿತಿ ಬೇಸರ ಎನಿಸಿ ಇದಕ್ಕೆ ಪರ್ಯåಯವಾಗಿ ಏನಾದರೂ ಮಾಡಲೇಬೇಕೆಂದು ತೀಮಾನಿಸಿದೆವು. ಸಹೋದ್ಯೋಗಿಗಳು ಹಾಗೂ ಹಳೇ ವಿದ್ಯಾರ್ಥಿಗಳ ಜತೆಗೂಡಿ ವಠಾರಾ ಶಾಲೆ ತೆರೆಯಲು ಆಲೋಚಿಸಿದೆವು. ಅಂತೆಯೇ ಶಾಲೆಯಿಂದ ಹೊರಗೆ ಅಂದರೆ ಗ್ರಾಮದ ಮಸೀದಿ ವಠಾರದಲ್ಲಿ ದಿನಕ್ಕೆ ಒಂದು ಗಂಟೆ ಶಾಲೆ ಆರಂಭಿಸಿದೆವು, ಅಲ್ಲಿ ಸದಾ ಕೂತು ಹರಟೆ ಹೊಡೆಯುತ್ತಿದ್ದ ಕೆಲ ಹಿರಿಯರು ‘ಏನ್ ಸಾರ್ ಇಲ್ಲಿ ಯಾಕೆ ಶಾಲೆ ಮಾಡಕತ್ತೀರಿ? ಎಲ್ಲಾರ ಬೇರೆ ಕಡೆ ಮಾಡಿ’ ಎಂದು ತಾಕೀತು ಮಾಡಿದರು. ಅವರ ಮನವೊಲಿಸಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ವಠಾರಾ ಶಾಲೆ ಮಾಡುತ್ತಿದ್ದೇವೆ ಎಂದಾಗ ಮರುದಿನ ಆ ಹಿರಿಯರೇ ಮಸೀದಿಯ ಹಜಾರವನ್ನು ಸ್ವಚ್ಛ ಮಾಡಿ ಮಕ್ಕಳಿಗೆ ಕೂರಲು ಅನುವು ಮಾಡಿಕೊಟ್ಟರು. ಅಂದಿನಿಂದ ಇಂದಿನವರೆಗೂ ನಿರಾಳವಾಗಿ ವಠಾರ ಶಾಲೆ ಸಾಗಿದೆ.
| ಕೊಟ್ರೇಶ ಬಿ. ಶಿಕ್ಷಕ, ಬೆಳಗುರ್ಕಿ, ಸಿಂಧನೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
