| ಎನ್.ಎಲ್.ಶಿವಮಾದು ಬೆಂಗಳೂರು
ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ನಡೆಸಿದ ಮೂರು ವಾರ್ಷಿಕ ಪರೀಕ್ಷೆಗಳು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಮತ್ತೆ ಹಿಂದುಳಿಯುವಂತೆ ಮಾಡಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯೋಜನೆ ಪೂರಕವಾಗಿದೆಯಾದರೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾರಕವೆನಿಸಿದೆ.
2024-25ನೇ ಶೈಕ್ಷಣಿಕ ಸಾಲಿನ ಪಿಯುಸಿ ತರಗತಿಗಳು ಜೂ.1ರಿಂದಲೇ ಆರಂಭವಾಗಿವೆ. ಆದರೆ, ಎಸ್ಸೆಸ್ಸೆಲ್ಸಿ ಪರೀಕ್ಷೆ-3 ಅನ್ನು ಆ.2ರಿಂದ8ರವರೆಗೆ ನಡೆಸಲು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವೇಳಾಪಟ್ಟಿ ಪ್ರಕಟಿಸಿದೆ. ಆ ಪ್ರಕಾರ ಫಲಿತಾಂಶ ಬಂದ ನಂತರ ವಿದ್ಯಾರ್ಥಿಗಳು ಕಾಲೇಜು ಪ್ರವೇಶ ಪಡೆಯುವುದು ಆಗಸ್ಟ್ 15ರ ಬಳಿಕವೇ. ಅಂದರೆ, ವಿದ್ಯಾರ್ಥಿಗಳಿಗೆ ಜೂ.1ರಿಂದ ಆಗಸ್ಟ್ 15ರ ವೇಳೆಗೆ ಕನಿಷ್ಠ ಎರಡೂವರೆ ತಿಂಗಳು ಪಾಠ ಮುಗಿದಿರುತ್ತದೆ. ಈಗಾಗಲೇ ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳು ಎರಡೂವರೆ ತಿಂಗಳ ಪಾಠವನ್ನು ಒಮ್ಮೆಲೇ ಗ್ರಹಿಸಲು ಸಾಧ್ಯವೇ ಎನ್ನುತ್ತಾರೆ ಪಾಲಕರಾದ ಮರಿಸ್ವಾಮಿ.
ಹಿಂದುಳಿದ ವಿದ್ಯಾರ್ಥಿಗಳಿಗೆ ಕಲಿಕಾ ನಷ್ಟ: ಅ.3ರಿಂದ ದಸರಾ ರಜೆಗಳು ಆರಂಭವಾಗಲಿವೆ. ವಿದ್ಯಾರ್ಥಿಯು ಕಾಲೇಜು ಸೇರಿದ ಒಂದೂವರೆ ತಿಂಗಳಲ್ಲಿ ಮಧ್ಯವಾರ್ಷಿಕ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ. ಆಗಸ್ಟ್ ವೇಳೆಗೆ ಜೂನ್ ಮತ್ತು ಜುಲೈ ತಿಂಗಳ ಮಾಸಿಕ ಪರೀಕ್ಷೆಗಳು ಮುಗಿದಿರುತ್ತವೆ. ಕಾಲೇಜು ಸೇರಿದ ತಕ್ಷಣವೇ ಮಧ್ಯವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸಬೇಕಾಗುತ್ತದೆ. ಇದು ಹೇಗೆ ಸಾಧ್ಯವೆಂದು ಪ್ರಶ್ನಿಸಿದ್ದಾರೆ.
ಇದರ ಪರಿಣಾಮ, ಮುಂದಿನ ತರಗತಿಯಲ್ಲಿಯೂ ವಿದ್ಯಾರ್ಥಿಯು ಕಲಿಕೆಯಲ್ಲಿ ಮತ್ತೆ ಹಿಂದುಳಿಯುತ್ತಾನೆ. ಈ ಕಲಿಕಾ ನಷ್ಟವನ್ನು ಯಾರು ತುಂಬಿಕೊಡಲಿದ್ದಾರೆ? ಸರ್ಕಾರದ ಮೂರು ವಾರ್ಷಿಕ ಪರೀಕ್ಷೆಯು ವಿದ್ಯಾರ್ಥಿಗೆ ಮಾರಕವಾಗಿದೆಯೇ ವಿನಾ ಪೂರಕವಾಗಿಲ್ಲ ಎನ್ನುತ್ತಾರೆ.
ಪರೀಕ್ಷೆಯ ಮೌಲ್ಯ ಕಳೆದುಕೊಳ್ಳುತ್ತಿದೆ:ಪರೀಕ್ಷಾ ಖರ್ಚು ವೆಚ್ಚವು ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ)ನಡಿ ಬರುವುದಿಲ್ಲ. ಆದ್ದರಿಂದ ಇಲಾಖೆಯು ಮೂರು ಪರೀಕ್ಷೆಗಳನ್ನು ನಡೆಸುವ ಮೂಲಕ ತಮಗೆ ಇಚ್ಛೆ ಬಂದಂತೆ ವರ್ತಿಸುತ್ತಿದೆ. ಪರೀಕ್ಷೆಯ ಮೌಲ್ಯ ಹಾಗೂ ಗಂಭೀರತೆಯನ್ನು ಕಳೆದುಕೊಳ್ಳುತ್ತಿದೆ. ಶೇ.98 ಅಂಕ ಪಡೆದವರು ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕೊಡುತ್ತಾರೆ ಎಂದರೆ ಏನು ಅರ್ಥ? ಇದಕ್ಕೊಂದು ಮಾನದಂಡ ಬೇಡವೇ ಎನ್ನುತ್ತಾರೆ ಪೋಷಕ ಸಂಘಟನೆಗಳ ಅಧ್ಯಕ್ಷ ಬಿ.ಎನ್. ಯೋಗಾನಂದ.
ದ್ವಿತೀಯ ಪಿಯುಗೆ ಪೂರಕ:ಮೂರು ಪರೀಕ್ಷೆಗಳಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ಮಾರ್ಚ್​ನಲ್ಲಿ ವಾರ್ಷಿಕ ಪರೀಕ್ಷೆ-1 ನಡೆದಿದ್ದು ನಂತರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸಿಇಟಿಯಲ್ಲಿ ರ್ಯಾಂಕ್ ಹೆಚ್ಚಳ ಮಾಡಿಕೊಳ್ಳಲು ಪರೀಕ್ಷೆ-2 ನಡೆಸಲಾಯಿತು. ಇದರಲ್ಲಿ 32 ಸಾವಿರ ವಿದ್ಯಾರ್ಥಿಗಳು ಫಲಿತಾಂಶ ಸುಧಾರಣೆ ಬಯಸಿ ಪರೀಕ್ಷೆ ಬರೆದಿದ್ದರು.
ಒಂದಿಷ್ಟು ವಿದ್ಯಾರ್ಥಿಗಳು ರ್ಯಾಂಕ್ ಹೆಚ್ಚಿಸಿಕೊಂಡರೆ, ಮತ್ತೆ ಕೆಲವರು ಅನುತ್ತೀರ್ಣಗೊಂಡಿರುವವರು ಪಾಸ್ ಆದರು. ಕಲಾ ವಿಭಾಗದಲ್ಲಿ ಅನುತ್ತೀರ್ಣಗೊಂಡಿರುವ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ. ಆಗಸ್ಟ್ 1ರಿಂದ ಪದವಿ ಕಾಲೇಜು ತರಗತಿಗಳು ಆರಂಭವಾಗುತ್ತಿವೆ. ಈ ಸಮಯದಲ್ಲಿ ಮೂರೂ ಪರೀಕ್ಷೆಗಳು ಮುಗಿದಿವೆ.
ಪಾಲಕರ ಆಗ್ರಹವೇನು?:ಯಾವುದೇ ಕಾರಣಕ್ಕೂ ಮೂರು ಪರೀಕ್ಷೆ ನಡೆಸುವುದು ಸರಿಯಲ್ಲ. ಪರ್ಯಾಯ ಪರೀಕ್ಷೆಯನ್ನು ಅನುತ್ತೀರ್ಣವಾದ ವಿದ್ಯಾರ್ಥಿಗೆ ಮಾಡಿದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ, ಎಲ್ಲ ವಿದ್ಯಾರ್ಥಿಗಳಿಗೂ ಮೂರು ಪರೀಕ್ಷೆ ನಡೆಸುತ್ತಿರುವುದು ಸರಿಯಲ್ಲ ಎನ್ನುತ್ತಾರೆ ಪಾಲಕರು. ಮೂರು ಪರೀಕ್ಷೆ ನಡೆಸಲು ವೈಜ್ಞಾನಿಕ ಕ್ರಮ ಅನುಸರಿಸಬೇಕು. ಆದರೆ, ಯಾವುದೇ ಮಾನದಂಡ, ನಿಯಮ ಅನುಸರಿಸದೆ ಮೂರು ಪರೀಕ್ಷೆಗಳನ್ನು ನಡೆಸಿ ಮಕ್ಕಳೊಂದಿಗೆ ತಮಾಷೆ ನೋಡುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡವಾಗಲಿದೆ ಎಂಬುದನ್ನು ಸರ್ಕಾರವು ಅರ್ಥಮಾಡಿಕೊಳ್ಳಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮೂರನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪಿಯುಸಿಗೆ ದಾಖಲಾಗುವುದರಿಂದ ಕನಿಷ್ಠ ಎರಡೂವರೆ ತಿಂಗಳ ಬೋಧನೆ ನಷ್ಟವಾಗಲಿದೆ. ವಿದ್ಯಾರ್ಥಿಗೆ ಆಗುವ ಕಲಿಕಾ ನಷ್ಟವನ್ನು ಯಾರು ತುಂಬಿಕೊಡಲಿ ದ್ದಾರೆ. ಇದು ಮೂರು ಪರೀಕ್ಷೆ ಮಾಡುವ ದುಷ್ಟರಿಣಾಮವಾಗಿದೆ. ಆದ್ದರಿಂದ ಮೂರು ಪರೀಕ್ಷೆ ನಡೆಸುವುದನ್ನು ಸರ್ಕಾರವು ನಿಲ್ಲಿಸಬೇಕು.
| ಬಿ.ಎನ್. ಯೋಗಾನಂದ್ ಪೋಷಕ ಸಂಘಟನೆಗಳ ಅಧ್ಯಕ್ಷ
“ನಮ್ಮ ಕೈಲಾದಷ್ಟು ಪ್ರಯತ್ನಿಸಿದೆವು, ಆದ್ರೆ….” ವಿಚ್ಛೇದನ ಖಚಿತಪಡಿಸಿದ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 2 =
Remember me
