ಬೆಂಗಳೂರು: ಸ್ಪರ್ಧಾತ್ಮಕ ಯುಗದಲ್ಲಿ ಮಾರುಕಟ್ಟೆ ಜಾಲ ವಿಸ್ತಾರಗೊಂಡಂತೆ ಗ್ರಾಹಕರ ಸಂಖ್ಯೆಯೂ ವಿಸ್ತಾರಗೊಳ್ಳುತ್ತಿದೆ. ಈ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಉತ್ಪಾದಕರು ಹಾಗೂ ಮಾರಾಟಗಾರರು ಹೊಸ ಮಾದರಿ, ನವೀನ ವಿನ್ಯಾಸಗಳಲ್ಲಿ ಉತ್ಪನ್ನಗಳನ್ನು ಜನರ ಮುಂದಿಡುತ್ತಿದ್ದಾರೆ. ಧಾವಂತದಲ್ಲಿ ದೋಷಪೂರಿತ ಅಥವಾ ಕಳಪೆ ವಸ್ತುಗಳನ್ನು ಖರೀದಿಸಿ ನಂತರ ಗೊಣಗಿ ಸುಮ್ಮನಾಗುವ ಜನರೇ ಹೆಚ್ಚು. ಗ್ರಾಹಕ ಹಕ್ಕುಗಳ ವಿಚಾರದಲ್ಲಿ ಅರಿವು ಇಲ್ಲದಿರುವುದೇ ಈ ಸ್ಥಿತಿಗೆ ಕಾರಣ. ಖರೀದಿಸಿದ ವಸ್ತುಗಳಿಗೆ ರಸೀದಿಯನ್ನೂ ಪಡೆಯುವ ಗೋಜಿಗೂ ಕೆಲವರು ಹೋಗುವುದಿಲ್ಲ. ಮನೆಗೆ ಮರಳಿ ಪೊಟ್ಟಣ ಬಿಚ್ಚಿದ ನಂತರ ಕಳಪೆ ವಸ್ತು ಕಂಡು ಹೌಹಾರುತ್ತಾರೆ. ಇವುಗಳನ್ನು ವಾಪಸ್ ಮಾಡಲು ರಸೀದಿ ಅತ್ಯಗತ್ಯ. ಆದರೆ, ಖರೀದಿ ವೇಳೆ ರಸೀದಿ ಪಡೆಯದ ತಪ್ಪಿಗೆ ವಾಪಸ್ ಮಾಡಲು ತಾಂತ್ರಿಕ ಸಮಸ್ಯೆ ಎದುರಾಗುತ್ತದೆ.
ಗ್ರಾಹಕ ಹಕ್ಕುಗಳಿಗಿದೆ ಕಾನೂನು ಬಲ:
ಸಾರ್ವಜನಿಕರು ಉತ್ಪನ್ನಗಳನ್ನು ಖರೀದಿಸುವ ವೇಳೆ ಗುಣಮಟ್ಟವಿಲ್ಲದ ಅಥವಾ ಸಮರ್ಪಕ ಸೇವೆ ಸಿಗದಿದ್ದಲ್ಲಿ ನೇರವಾಗಿ ಗ್ರಾಹಕ ಆಯೋಗದ ಮೊರೆ ಹೋಗಬಹುದಾಗಿದೆ. ಖರೀದಿಸಲಾದ ವಸ್ತುಗಳ ವಿವರಗಳನ್ನು ಒಳಗೊಂಡ ದೂರು ದಾಖಲಿಸಿದ್ದಲ್ಲಿ ಕಾಲಮಿತಿಯಲ್ಲಿ ಪರಿಹಾರ ಸಿಗುತ್ತದೆ. ಇದಕ್ಕೆ ಕಾನೂನು ಬಲ ಇರುವ ಕಾರಣ ಹಕ್ಕು ಚಲಾವಣೆಗೆ ಹಿಂದೇಟು ಹಾಕುವ ಅಗತ್ಯ ಇಲ್ಲ. ಯಾವುದೇ ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ಗ್ರಾಹಕ ಆಯೋಗದ ಕದ ತಟ್ಟಬಹುದು. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಗ್ರಾಹಕ ವೇದಿಕೆಗಳು ಸಕ್ರಿಯವಾಗಿ ಕಾರ್ಯಾಚರಿಸುತ್ತಿದ್ದು, ಆನ್‌ಲೈನ್ ಮೂಲಕವೂ ದೂರು ನೀಡಬಹುದು.
ಗ್ರಾಹಕ ಕಾಯ್ದೆಗಿದೆ 37 ವರ್ಷಗಳ ಇತಿಹಾಸ:
ಸಾರ್ವಜನಿಕರಲ್ಲಿ ಹಕ್ಕುಗಳು ಹಾಗೂ ಜವಾಬ್ದಾರಿಗಳ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಸರ್ಕಾರ ರೂಪಿಸಿದ ಗ್ರಾಹಕರ ಸಂರಕ್ಷಣಾ ಕಾಯ್ದೆಗೆ 1986ರ ಡಿ.24ರಂದು ರಾಷ್ಟ್ರಪತಿ ಅಂಕಿತ ಹಾಕಿದರು. ಈ ದಿನವನ್ನೇ ರಾಷ್ಟ್ರೀಯ ಗ್ರಾಹಕರ ಹಕ್ಕುಗಳ ದಿನವನ್ನಾಗಿ ಆಚರಿಸುತ್ತಾ ಬರಲಾಗಿದೆ. (ಮಾ.15ರಂದು ವಿಶ್ವ ಗ್ರಾಹಕ ಹಕ್ಕುಗಳ ದಿನವಾಗಿ ಆಚರಿಸಲಾಗುತ್ತಿದೆ) ಪ್ರತೀ ರಾಜ್ಯದಲ್ಲೂ ಆ ದಿನವೂ ಸೇರಿ ವಾರ ಅಥವಾ ಪಾಕ್ಷಿಕ ಅವಧಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಗ್ರಾಹಕರಿಗಿದೆ 6 ಮೂಲಭೂತ ಹಕ್ಕು:
ನಾಗರಿಕರಿಗೆ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ 6 ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಸುರಕ್ಷತೆಯ ಹಕ್ಕು, ಆಯ್ಕೆ ಹಕ್ಕು, ಮಾಹಿತಿ ತಿಳಿಸುವ ಹಕ್ಕು, ಆಲಿಸುವ ಹಕ್ಕು, ಕುಂದುಕೊರತೆ ನಿವಾರಿಸುವ ಹಕ್ಕು ಹಾಗೂ ಗ್ರಾಹಕ ಜಾಗೃತಿ ಹಕ್ಕು.
ಗ್ರಾಹಕ ಕೋರ್ಟ್ ವ್ಯಾಪ್ತಿಗೆ ಇ-ಕಾಮರ್ಸ್:
ಇತ್ತೀಚಿಗೆ ಆನ್‌ಲೈನ್ ಶಾಪಿಂಗ್ ಜನಪ್ರಿಯವಾಗುತ್ತಿದೆ. ಕೆಲವೊಮ್ಮೆ ಪಾರ್ಸೆಲ್‌ನಲ್ಲಿ ಬರುವ ವಸ್ತುಗಳು ಕಳಪೆಯಾಗಿರುತ್ತವೆ. ಇವುಗಳನ್ನು ವಾಪಸ್ ಪಡೆಯಲು ಕಂಪನಿಗಳ ಪ್ರತಿನಿಧಿಗಳು ತಗಾದೆ ಎತ್ತುತ್ತಾರೆ. ಇಂತಹ ಪ್ರಕರಣಗಳನ್ನು ಗ್ರಾಹಕ ವೇದಿಕೆಗಳ ಮೂಲಕ ಪರಿಹರಿಸಿಕೊಳ್ಳಬಹುದು. ಇದಕ್ಕಾಗಿಯೇ 2019ರಲ್ಲಿ ರೂಪಿಸಿರುವ ಹೊಸ ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಇ-ಕಾಮರ್ಸ್ ಸೇರ್ಪಡೆ ಮಾಡಲಾಗಿದೆ.
ಜಾಗೃತ ಗ್ರಾಹಕರಾಗಲು ಗಮನಿಸಬೇಕಾದ ಅಂಶಗಳಿವು:* ಉತ್ಪನ್ನದ ಗುಣಮಟ್ಟ ನಿರ್ಧರಿಸುವ ಬಿಐಎಸ್, ಆಗ್ ಮಾರ್ಕ್, ಹಾಲ್ ಮಾರ್ಕ್ ಬಗ್ಗೆ ಮಾಹಿತಿ ಹೊಂದುವುದು.* ಖರೀದಿಸಿದ ಸರಕು ಹಾಗೂ ಪಡೆದ ಸೇವೆಗೆ ನಗದು ರಶೀದಿಯನ್ನು ಕೇಳಿ ಪಡೆಯುವುದು.* ಭಾರೀ ರಿಯಾಯಿತಿ, ನಕಲಿ ಜಾಹೀರಾತು, ಸುಳ್ಳು ಉಡುಗೊರೆಗಳ ಕೊಡುಗೆಗೆ ಬಲಿಯಾಗದಿರುವುದು.* ಕಲಬೆರಿಕೆ, ಕಾಳಸಂತೆ, ಕಳ್ಳಸಾಗಣೆ ವಸ್ತುಗಳ ಖರೀದಿ ಬದಲು ಕಾನೂನು ಬದ್ಧ ಸರಕು ಖರೀದಿಗೆ ಆದ್ಯತೆ.* ಕಡಿಮೆ ಬೆಲೆಗೆ ಆಸೆಪಟ್ಟು ಅವಧಿ ಮುಗಿದ, ದಿನಾಂಕ ನಮೂದಿಸದ, ಪರಿಶುದ್ಧತೆ ಇಲ್ಲದ ಉತ್ಪನ್ನಗಳನ್ನು ನಿರಾಕರಿಸುವುದು.* ಸರಕುಗಳಲ್ಲಿ ನ್ಯೂನತೆ ಕಂಡಬಂದಲ್ಲಿ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡಲು ಸಿದ್ಧರಿರಬೇಕು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 15 =
Remember me
