ರಮೇಶ ದೊಡ್ಡಪುರ/ಗೋವಿಂದರಾಜು ಚಿನ್ನಕುರ್ಚಿಬೆಂಗಳೂರು
ಉದ್ಯೋಗ, ವ್ಯಾಪಾರ, ಶಿಕ್ಷಣ, ಆರ್ಥಿಕತೆ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೆ ಬರೆ ಎಳೆದಿರುವ ಕರೊನಾ ಮಹಾಮಾರಿ ದಿನಕಳೆದಂತೆ ಜನರ ಆತ್ಮವಿಶ್ವಾಸ, ಜೀವನಪ್ರೀತಿ, ಧೈರ್ಯ, ಸಂಬಂಧಗಳಿಗೂ ಕೊಳ್ಳಿ ಇಡುತ್ತಿರುವುದು ಅನೇಕ ಜೀವಗಳಿಗೂ ಮುಳುವಾಗುತ್ತಿದೆ. ಕರೊನಾ ಬಂತೆಂದು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಹಾದಿ ಹಿಡಿಯುವವರು ಒಂದೆಡೆಯಾದರೆ ಸೋಂಕಿತರನ್ನು ದೂರ ಅಟ್ಟಿ, ಮೌನವೀಯ ಮೌಲ್ಯಗಳನ್ನು ಕಿತ್ತೆಸೆಯುತ್ತಿರುವ ಪ್ರಕರಣಗಳು ಸ್ವಸ್ಥ ಸಮಾಜ ಅಸ್ವಸ್ಥಗೊಳ್ಳುತ್ತಿರುವ ಅಪಾಯದ ಸಂದೇಶವನ್ನು ಸಾರಿದೆ.

ಗುರುವಾರ ಪುಣೆಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ 43 ವರ್ಷದ ಪ್ರೇಮನಾಥ ಕೃಷ್ಣ ಶೆಟ್ಟಿ ಹಾಗೂ ಶುಕ್ರವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶೌಚಗೃಹದಲ್ಲಿ 60 ವರ್ಷದ ವೃದ್ಧರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಒಬ್ಬ ಪೊಲೀಸ್ ಸೇರಿ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಬ್ಬ ಪೊಲೀಸ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇತರ ರಾಜ್ಯಗಳಲ್ಲೂ ಕರೊನಾ ಸೋಂಕಿತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಂಕಿತರಷ್ಟೇ ಅಲ್ಲದೇ ಕರೊನಾದಿಂದಾಗಿ ಸೃಷ್ಟಿಯಾದ ಆರ್ಥಿಕ ಮುಗ್ಗಟ್ಟಿನಿಂದ ಅನೇಕರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.
ಕನಿಕರ ಅಲ್ಲ ಮನುಷ್ಯತ್ವ ಬೇಕು:ಕರೊನಾ ಸೋಂಕಿತರನ್ನು ಕಡೆಗಣಿಸುವ ಅಥವಾ ದೂರದಿಂದ ಕನಿಕರ ತೋರುವ ಬದಲು ಮನುಷ್ಯತ್ವದಿಂದ ನೋಡುವಂತಾಗಬೇಕೆಂಬುದು ಹಲವರ ಆಶಯ. ಸೋಂಕಿತರನ್ನು ದೂರ ತಳ್ಳಿದಾಗ ನಮ್ಮೊಂದಿಗೆ ಯಾರೂ ಇಲ್ಲ ಎಂಬ ಭಾವನೆಯಲ್ಲಿ ಖಿನ್ನತೆಗೆ ಒಳಗಾಗುತ್ತಾರೆ. ಅಂಥವರಲ್ಲಿ ಅನೇಕರು ಆತ್ಮಹತ್ಯೆಗೆ ಶರಣಾಗುತ್ತಾರೆ. ಹೀಗಾಗಿ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಾದಾಗ ಬದುಕುವ ಆಸೆ ಮನಸ್ಸಿನಲ್ಲಿ ಗಟ್ಟಿಗೊಳ್ಳುತ್ತದೆ ಎಂಬುದು ಮನೋವೈದ್ಯರ ಅಭಿಪ್ರಾಯ.
ಬೆಂಗ್ಳೂರಲ್ಲೇ 3 ಆತ್ಮಹತ್ಯೆ:ಶುಕ್ರವಾರ ಬೆಳಗ್ಗೆ ಕೋವಿಡ್ ಆಸ್ಪತ್ರೆಯಲ್ಲಿ 60 ವರ್ಷದ ಕುಣಿಗಲ್ ಮೂಲದ ರಾಜಗೋಪಾಲನಗರ ನಿವಾಸಿ ವೃದ್ಧೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಕುಟುಂಬದಲ್ಲಿ ಸೊಸೆ ಮತ್ತು ಮೊಮ್ಮಗ ಸೇರಿ ನಾಲ್ವರಿಗೆ ಸೋಂಕು ಕಾಣಿಸಿಕೊಂಡಿತ್ತು. ಆರೋಗ್ಯ ಸಾಕಷ್ಟು ಸುಧಾರಿಸಿತ್ತಾದರೂ ಸಾಕಷ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ನಾಲ್ಕು ಬಾರಿ ಮಾನಸಿಕ ತಜ್ಞರಿಂದ ಕೌನ್ಸೆಲಿಂಗ್ ಮಾಡಿಸಲಾಗಿತ್ತಾದರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪೊಲೀಸ್ ಬಸ್​ನಲ್ಲೇ ಕೆಎಸ್​ಆರ್​ಪಿಯ 50 ವರ್ಷದ ಕಾನ್ ಟೇಬಲ್ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದಕ್ಕೂ ಮೊದಲು ಕೋವಿಡ್ ನಿಗದಿತ ಆಸ್ಪತ್ರೆಯ 7ನೇ ಮಹಡಿಯಿಂದ ಜಿಗಿದಿದ್ದ 50 ವರ್ಷದ ಕರೊನಾ ಸೋಂಕಿತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮುಂಜಾಗ್ರತೆ…:
ಆತ್ಮಸ್ಥೈರ್ಯ ಬಲಪಡಿಸಿ:
ಮನಕಲಕುವ ಪ್ರಕರಣಗಳು:
ಬದುಕುವ ಛಲ ಬೇಕು:ಎಲ್ಲರೂ ನಮ್ಮನ್ನು ಕಡೆಗಣಿಸುತ್ತಾರೆಂಬ ಭಾವನೆ ಬದಿಗಿಟ್ಟು ಕರೊನಾ ವಿರುದ್ಧ ಗೆದ್ದು ತೋರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಬೇಕೆಂಬ ಆತ್ಮಸ್ಥೈರ್ಯ ಮೂಡಿಸಿಕೊಳ್ಳುವ ಅನಿವಾರ್ಯತೆ ಸೋಂಕಿತರ ಮುಂದಿದೆ. ಬೇರೆಯವರ ಜತೆ ಬೆರೆತರೆ ಅವರಿಗೂ ಸೋಂಕು ಹರಡುವ ಸಾಧ್ಯತೆ ಇರುವುದರಿಂದ ಸೋಂಕಿನ ಲಕ್ಷಣ ಕಂಡುಬಂದ ತಕ್ಷಣವೇ ವೈದ್ಯರ ಮೊರೆ ಹೋಗಿ ಮುಂದಿನ ಅಪಾಯದಿಂದ ಪಾರಾಗಬೇಕು. ಹಾಗೆಯೇ ಜನರು ಕಡೆ ಗಣಿಸುತ್ತಾರೆಂಬ ಕಾರಣಕ್ಕೆ ಸೋಂಕನ್ನು ಮುಚ್ಚಿಟ್ಟು ಬಳಿಕ ಸಾವನ್ನು ಹತ್ತಿರಕ್ಕೆ ಕರೆದುಕೊಳ್ಳುವ ಬದಲು ಮೊದಲೇ ಚಿಕಿತ್ಸೆ ಪಡೆದು ಕರೊನಾ ಮಣಿಸಬೇಕು.
ಗುಣಮುಖರಾದವರೇ ಅಧಿಕ:ಆರೋಗ್ಯ ಇಲಾಖೆ ಶನಿವಾರ ಬಿಡುಗಡೆ ಮಾಡಿದ ಬುಲೆಟಿನ್ ಪ್ರಕಾರ 11,923 ಸೋಂಕಿತ ಪ್ರಕರಣಗಳಲ್ಲಿ 7,287 ಸೋಂಕಿತರು ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. ದೇಶಾದ್ಯಂತ 3 ಲಕ್ಷ ಜನರು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇ.58ಕ್ಕಿಂತ ಅಧಿಕವಿದೆ. ಹೀಗಾಗಿ ಕರೊನಾ ಸೋಂಕಿಗೆ ತುತ್ತಾಗುವ, ಸಾವಿನ ಭಯಪಡಬೇಕಿಲ್ಲ.
ಆರೋಗ್ಯ ಕೌನ್ಸೆಲಿಂಗ್:ಆರೋಗ್ಯ ಇಲಾಖೆ ಮಾಹಿತಿಯಂತೆ ನಿತ್ಯ 1,500 ಜನರಿಗೆ ಕೌನ್ಸೆಲಿಂಗ್ ಮಾಡಲಾಗುತ್ತಿದೆ. ಇಲ್ಲಿವರೆಗೆ 1.7 ಲಕ್ಷ ಕೌನ್ಸೆಲಿಂಗ್ ಸೆಷನ್ ನಡೆಸಲಾಗಿದೆ. ಜತೆಗೆ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಸೋಂಕಿ ತರನ್ನು ಕೌನ್ಸೆಲಿಂಗ್ ಒಳಪಡಿಸಲಾಗುತ್ತಿದೆ.
ಕರೊನಾ ಸೋಂಕು ದೃಢಪಟ್ಟಾಗ ಭಯ ಆತಂಕ ಸಹಜ. ಅದರೆ ಸೋಂಕಿತರು ಹೆದರುವ ಅಗತ್ಯವಿಲ್ಲ. ಬದಲಿಗೆ ಧೈರ್ಯ ತಂದುಕೊಳ್ಳಬೇಕು. ದುಡುಕಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಸಮಸ್ಯೆ ಇದ್ದರೆ ಮಾನಸಿಕ ವೈದ್ಯರ ಸಲಹೆ ಪಡೆದು ಸಂದರ್ಭವನ್ನು ಎದುರಿಸಬೇಕು.
| ಡಾ. ನಾಗರಾಜ್ ನಿರ್ದೇಶಕ,ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ
ಕರೊನಾ ಗೆ ಹೆದರಿ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ಸರ್ಕಾರ ನಿಮ್ಮೊಂದಿಗೆ ಇದೆ. ಕರೊನಾವನ್ನು ಒಂದು ಕಾಯಿಲೆಯಾಗಿ ನೋಡಿ.
| ಭಾಸ್ಕರ್ ರಾವ್
ಬೆಂಗಳೂರು ನಗರ ಪೊಲೀಸ್ ಆಯುಕ್ತ
ಆತ್ಮಹತ್ಯೆಗೆ ಕರೊನಾ ಸೋಂಕು ಮಾತ್ರವಲ್ಲ. ಬೇರೆಯೇ ಕಾರಣ ಇರುತ್ತದೆ. ವೃದ್ಧರಲ್ಲಿ ಮತ್ತು ಮಹಿಳೆಯರಲ್ಲಿ ಮಾನಸಿಕ ಖಿನ್ನತೆ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭ ಗಳಲ್ಲಿ ಸಾವಿನ ನಿರ್ಧಾರಕ್ಕೆ ಬರಬಹುದು. ರೋಗಿಗಳ ಜತೆ ನರ್ಸ್​ಗಳು, ವೈದ್ಯರು ಉತ್ತಮ ಒಡನಾಟ ಬೆಳೆಸಿ ಕೊಳ್ಳಬೇಕು. ಧೈರ್ಯ ತುಂಬಬೇಕು.
| ಡಾ. ಬಿ.ಎನ್. ಗಂಗಾಧರ
ನಿಮ್ಹಾನ್ಸ್ ಆಸ್ಪತ್ರೆ
https://www.vijayavani.net/coronavirus-is-weakening-and-may-die-out-without-a-vaccine-italy-expert-claims/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 6 =
Remember me
