ಬೆಂಗಳೂರು:ಕರೊನಾ ಸೋಂಕು ಹರಡುವುದನ್ನು ತಪ್ಪಿಸುವ ಸಲುವಾಗಿ ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಿಗೆ ಮಾ.24ರಿಂದ ಏ.6ರವರೆಗೆ ರಜೆ ಘೊಷಿಸಲಾಗಿದೆ. ಈ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿದ್ದು, ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಹೈಕೋರ್ಟ್ ಪೂರ್ಣಪೀಠದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರು, ಧಾರವಾಡ, ಕಲಬುರಗಿ ಹೈಕೋರ್ಟ್ ಪೀಠಗಳ ದಿನನಿತ್ಯದ ಕಾರ್ಯ ಕಲಾಪ ಏ.6ರವರೆಗೆ ಸ್ಥಗಿತಗೊಳ್ಳಲಿದೆ. ತುರ್ತು ಪ್ರಕರಣಗಳ ವಿಚಾರಣೆಗೆ ಬೆಂಗಳೂರಿನಲ್ಲಿ 3 ವಿಶೇಷ ಪೀಠಗಳನ್ನು ರಚಿಸಲಾಗಿದೆ. ಈ ಪೀಠಗಳು ಮಾ.24, 26ರಂದು ಕಾರ್ಯ ನಿರ್ವಹಿಸಿದರೆ ಧಾರವಾಡ, ಕಲಬುರಗಿಯಲ್ಲಿ 2 ವಿಶೇಷ ಪೀಠಗಳಲ್ಲಿ ಮಾ.24ರಂದು ಕಲಾಪ ನಡೆಯಲಿದೆ.
ಎಲ್ಲ ಜಿಲ್ಲಾ ಹಾಗೂ ತಾಲೂಕಿನ ವಿಚಾರಣಾ ನ್ಯಾಯಾಲಯಗಳು, ಕಾರ್ವಿುಕ, ಕೈಗಾರಿಕಾ ಹಾಗೂ ಕೌಟುಂಬಿಕ ನ್ಯಾಯಾಲಯಗಳಿಗೂ ಏ.6ವರೆಗೆ ರಜೆ ಘೊಷಿಸಲಾಗಿದೆ. ತುರ್ತು ಪ್ರಕರಣಗಳ ವಿಚಾರಣೆಯನ್ನು ಮಾ. 24, 27, 31 ಹಾಗೂ ಏ.2ರಂದು ಉಸ್ತುವಾರಿ ಕೋರ್ಟ್​ಗಳು ನಡೆಸಲಿವೆ. ಇತರ ಕೋರ್ಟ್​ಗಳು ಕಾರ್ಯ ನಿರ್ವಹಿಸುವುದಿಲ್ಲ.
‘ಕರೊನಾ’ ಹಮ್ ಕ್ಯಾ ಕರೊನಾ: ಪವನ್ ಒಡೆಯರ್ ಧ್ವನಿ, ಪ್ರಥಮ್ ಪಂಚಿಂಗ್ ಡೈಲಾಗ್…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + four =
Remember me
