ಶ್ರೀವಸಿಷ್ಠರು ಶ್ರೀರಾಮನಿಗೆ ಲೀಲಾಮಹಾರಾಣಿ ಎಂಬ ಕಥಾ ನಾಯಕಿಯನ್ನು ಮುಂದಿಟ್ಟುಕೊಂಡು, ಮಂಡಪೋಪಾಖ್ಯಾನವೆಂಬ ಕಥೆಯನ್ನು ಹೇಳುತ್ತಿದ್ದಾರೆ. ಲೀಲಾಮಹಾರಾಣಿಯ ಪತಿಯಾದ ಪದ್ಮಮಹಾರಾಜನು ಮರಣ ಹೊಂದಿದ್ದು, ಅವನ ಹಿಂದಿನ ಜನ್ಮದ ವೃತ್ತಾಂತಗಳು ನಡೆದ ಸ್ಥಳಕ್ಕೆ ಈಗ ಅವಳು ಸೂಕ್ಷ್ಮರೂಪದಲ್ಲಿ ಹೋಗಿ ಬಂದಿದ್ದಾಳೆ. ತಿರುಗಿ ಬಂದ ನಂತರ ಪದ್ಮಮಹಾರಾಜನ ಮುಂದಿನ ಜನ್ಮವಾದ ಸ್ಥಳಕ್ಕೆ ಈಗ ಬಂದಿದ್ದಾಳೆ. ಹೀಗೆ ಸೂಕ್ಷ್ಮರೂಪದಿಂದ ಬೇರೆ ಲೋಕಗಳಿಗೆ ಹೋಗಲು ಜ್ಞಾನದೇವಿಯ ಅನುಗ್ರಹದಿಂದ ಸಾಧ್ಯವಾಯಿತು. ಶ್ರೀದೇವಿಯು ಅವಳಿಗೆ ಸಮಾಧಿ ಅವಸ್ಥೆಯನ್ನು ಉಂಟá-ಮಾಡುವ ಮೂಲಕ ಸೂಕ್ಷ್ಮರೂಪಕ್ಕೆ ತಂದು ಈ ಎಲ್ಲ ದರ್ಶನಗಳನ್ನು ಮಾಡಿಸುತ್ತಿದ್ದಾಳೆ. ಪದ್ಮಮಹಾರಾಜನ ಮುಂದಿನ ಜನ್ಮವು ಭಾರತ ದೇಶದಲ್ಲಿ ಈಗ ಆಗಿದೆ. ಶ್ರೀದೇವಿಯೊಂದಿಗೆ ಲೀಲಾಮಹಾರಾಣಿಯು ಈಗ ಅಲ್ಲಿಗೆ ಹೋಗಿದ್ದಾಳೆ. ಅಲ್ಲಿ ಈಗ ಯುದ್ಧದ ವಾತಾವರಣವಿದೆ. ರಾಜನ ಸಾಮಂತ ರಾಜರು ರಾಜನ ಮೇಲೆ ಯುದ್ಧಕ್ಕೆ ಬಂದಿದ್ದಾರೆ. ಸಿಂಧá-ರಾಜನು ಉಳಿದ ಕೆಲವು ಸಾಮಂತ ರಾಜರೊಡನೆ ಕೂಡಿಕೊಂಡು ಸೇನಾ ಸಮೇತನಾಗಿ ಯುದ್ಧಕ್ಕೆ ಬಂದಿದ್ದಾನೆ. ಅದಕ್ಕೆ ಪ್ರತಿಯಾಗಿ ರಾಜನೂ ತನ್ನ ಸೇನೆಯನ್ನು ಸನ್ನದ್ಧಗೊಳಿಸಿದ್ದಾನೆ. ಹೀಗಾಗಿ ಎರಡು ಸೇನೆಗಳು ಎದುರುಬದುರಾಗಿ ನಿಂತಿವೆ. ಯುದ್ಧವನ್ನು ನೋಡá-ವುದಕ್ಕಾಗಿ ಮತ್ತು ಯುದ್ಧದಲ್ಲಿ ವೀರಮರಣವನ್ನಪ್ಪಿದ ಯೋಧರನ್ನು ಸ್ವರ್ಗಕ್ಕೆ ಒಯ್ಯುವುದಕ್ಕಾಗಿ ದೇವತಾಗಣಗಳು ಆಕಾಶದಲ್ಲಿ ಜಮಾಯಿಸಿದ್ದಾರೆ. ಈ ದೃಶ್ಯವನ್ನು ಶ್ರೀ ವಸಿಷ್ಠರು ವರ್ಣಿಸುತ್ತಾ, ಶ್ರೀರಾಮನ ಸಾಂರ್ದಭಿಕ ಪ್ರಶ್ನೆಗೆ ಉತ್ತರಿಸುತ್ತಾ ಮುಂದುವರಿಸುತ್ತಿದ್ದಾರೆ.
‘ಶ್ರೀರಾಮ! ಲೀಲಾಮಹಾರಾಣಿಯು ಸರಸ್ವತೀ ದೇವಿಯ ಒಡಗೂಡಿ ಯುದ್ಧರಂಗದ ಆಕಾಶದಲ್ಲಿ ನಿಂತಿದ್ದಾಳೆ. ಆ ಆಕಾಶದಲ್ಲಿ ಶ್ರೇಷ್ಠ ವೀರರನ್ನು ಸ್ವಾಗತಿಸಲು ಕಾತರರಾಗಿರುವ ಅಪ್ಸರೆಯರು ನರ್ತಿಸುತ್ತಿದ್ದಾರೆ. ಅಲ್ಲಿಂದಲೇ ಅವಳು ಯುದ್ಧವನ್ನು ವೀಕ್ಷಿಸುತ್ತಿದ್ದಾಳೆ. ತನ್ನ ಪತಿಯಿಂದ ರಕ್ಷಿಸಲ್ಪಡುತ್ತಿರುವ, ಆ ಅರ್ಥದಲ್ಲಿ ತನ್ನದಾಗಿರುವ ರಾಷ್ಟ್ರಮಂಡಲದಲ್ಲಿರುವ ಎರಡು ಸೇನೆಗಳನ್ನು ನೋಡುತ್ತಿದ್ದಾಳೆ. ರಾಜನ ಚದುರಂಗ ಸೇನೆಯಿಂದ ರಕ್ಷಿಸಲ್ಪಟ್ಟ ರಾಜ್ಯದಲ್ಲಿ ಒಂದು ವಿಸ್ತಾರವಾದ ಅರಣ್ಯದಲ್ಲಿ ಆ ಎರಡು ಸೇನೆಗಳು ನಿಂತಿದ್ದವು. ಆ ಅರಣ್ಯವಾದರೋ, ಸಿಂಹಗಳು, ವೃಶ್ಚಿಕಗಳು (ಚೇಳುಗಳು), ರಾಕ್ಷಸರು, ಪಿಶಾಚಗಳು ತುಂಬಿಕೊಂಡು ಭಯಂಕರ ವಾತಾವರಣದಿಂದ ಕೂಡಿದೆ. ವಿಸ್ತಾರವಾದ ಆಕಾಶದಲ್ಲಿ ಸಿಂಹ, ವೃಶ್ಚಿಕ ಎಂಬ ಹೆಸರಿನ ನಕ್ಷತ್ರರಾಶಿಗಳಿವೆ. ಅಲ್ಲದೇ ಆಕಾಶದಲ್ಲಿ ಸಂಚರಿಸುವ ರಾಕ್ಷಸರು ಮತ್ತು ಪಿಶಾಚರೂ ಇದ್ದಾರೆ. ಈ ಅರಣ್ಯದಲ್ಲೂ ಸಿಂಹ, ವೃಶ್ಚಿಕ, ರಾಕ್ಷಸ, ಪಿಶಾಚಗಳು ಇರುವುದಲ್ಲದೇ ಈ ಅರಣ್ಯವು ಆಕಾಶದಂತೆ ವಿಸ್ತಾರವಾಗಿದೆ. ಹಾಗಾಗಿ ಇನ್ನೊಂದು ಆಕಾಶವೋ ಎಂಬಂತೆ ಭಯಂಕರವೂ, ವಿಸ್ತಾರವೂ ಆಗಿರುವ ಅರಣ್ಯದಲ್ಲಿ ಎರಡು ಸೇನೆಗಳು ಸೇರಿವೆ. ಆ ಸೇನೆಗಳು ಕಿಕ್ಕಿರಿದು ಸೇರಿರುವುದನ್ನು ನೋಡಿದರೆ, ಎರಡು ಕ್ಷೀರಸಾಗರಗಳು ಅಲ್ಲಿ ಇವೆಯೋ ಎಂದೆನಿಸುತ್ತಿತ್ತು. ಮಹಾನ್ ಯುದ್ಧವನ್ನು ಪ್ರಾರಂಭಿಸುತ್ತಿರುವುದರಿಂದ ಆ ಯುದ್ಧದಲ್ಲಿ ಗಾಢವಾಗಿ ತೊಡಗಿಕೊಳ್ಳುವ ಸನ್ನಾಹದಲ್ಲಿತ್ತು. ಯುದ್ಧದ ಉನ್ಮಾದ ಎರಡೂ ಕಡೆ ಕಂಡುಬರುತ್ತಿತ್ತು. ಎರಡೂ ಕಡೆಯ ರಾಜರು ಉಪಸ್ಥಿತ ರಿದ್ದರು. ಅದ್ಭುತವಾಗಿ ಪ್ರಜ್ವಲಿಸುವ ಅಗ್ನಿಯಂತೆ ಯುದ್ಧಕ್ಕೆ ಸಜ್ಜಾಗಿ, ಚೆನ್ನಾಗಿ ಸನ್ನದ್ಧ ಸ್ಥಿತಿಯಲ್ಲಿ ಆ ಎರಡು ಸೇನೆಗಳೂ ಇದ್ದವು. ಈ ಎರಡು ಸೇನೆಗಳಲ್ಲಿ ಯಾರ ಕಡೆಯಿಂದ ಮೊದಲು ಅಸ್ತ್ರಗಳ ಪ್ರಹಾರ ಪ್ರಾರಂಭವಾಗುತ್ತದೆ? ಆ ಅಸ್ತ್ರಗಳು ಯಾರಿಗೆ ಏಟು ಕೊಡುತ್ತದೆ? ಎಂಬುದನ್ನು ನೋಡಲು ಅನೇಕ ಕಣ್ಣುಗಳು ಸುತ್ತಲೂ ಜಾಗೃತವಾಗಿವೆ.
‘ಆ ಸೇನೆಗಳಲ್ಲಿರುವ ಸೈನಿಕರು ಖಡ್ಗಗಳೆಂಬ ಜಲಧಾರೆಗಳನ್ನು (ಜಲದ ಧಾರೆಯಂತೆ ಹೊಳಪುಳ್ಳ ಖಡ್ಗಗಳನ್ನು) ಕೈಯಲ್ಲಿ ಧರಿಸಿದ್ದರು. ಪರಶ್ವಧ, ಪ್ರಾಸ, ಭಿಂದಿಪಾಲ, ಅಷಿರ್r, ಮುದ್ಗರ ಮುಂತಾದ ಆಯುಧ ಕೈಯಲ್ಲಿ ಹಿಡಿದು ನಿಂತಿದ್ದರು. ಗರುಡನ ಬಲವಾದ ರೆಕ್ಕೆಗಳಿಂದ ಕ್ಷೋಭೆಗೊಂಡಿರುವ ವನದಂತೆ ಆ ಸೇನೆಗಳು ಕಂಪಿಸುತ್ತಿದ್ದವು. ಉದಯಿಸುತ್ತಿರುವ ಸೂರ್ಯನ ಬೆಳಕಿನಂತಹ ಕಾಂತಿಯನ್ನು ಬೀರುತ್ತಿರುವ ಬಂಗಾರದ ಕವಚಗಳನ್ನು ಸೈನಿಕರು ಧರಿಸಿದ್ದರು.
‘ಒಂದು ಸೇನೆಗೆ ಇನ್ನೊಂದು ಸೇನೆ ಎದುರಾಗಿ ನಿಂತಿದ್ದರಿಂದ ವೈರಿ ಸೇನೆಯಲ್ಲಿರುವ ಯೋಧರನ್ನು ದಿಟ್ಟಿಸಿ ನೋಡುತ್ತಾ, ಸೈನಿಕರು ಕೋಪದಿಂದ ಆಯುಧಗಳನ್ನು ಎತ್ತಿ ಹಿಡಿದಿದ್ದರು. ಹೀಗೆ ಅನ್ಯೋನ್ಯ ದೃಷ್ಟಿಗಳು ಅಚಲವಾಗಿ ನಿಂತಿದ್ದರಿಂದ ಕೆಲವೊಮ್ಮೆ ಗೋಡೆಯಲ್ಲಿ ಬಿಡಿಸಿದ ಚಿತ್ರದಂತೆ ಕಾಣುತ್ತಿದ್ದರು. ಎರಡು ಸೇನೆಗಳ ಮಧ್ಯದಲ್ಲಿ ಒಂದು ದೀರ್ಘವಾದ ರೇಖೆ ಕಂಡುಬರುತ್ತಿತ್ತು. ಅದು ಎರಡು ಸೇನೆಗಳು ಪರಸ್ಪರ ದಾಟಿ ಮುಂದೆ ಬರಬಾರದೆಂಬ ಉದ್ದೇಶಕ್ಕೆ ಹಾಕಿದ ರೇಖೆ. ಮಾಂತ್ರಿಕರು ಸರ್ಪಾದಿಗಳನ್ನು ತಡೆಗಟ್ಟಲು ಮಂತ್ರಪೂರ್ವಕವಾಗಿ ಹಾಕಿದ ರೇಖೆಯಂತೆ ಅದು ಕಾಣುತ್ತಿತ್ತು. ಹಾಗಾಗಿ ಎರಡೂ ಸೇನೆಗಳು ಆ ರೇಖೆಯನ್ನು ದಾಟದೇ ನಿಂತಿವೆ. ಆದರೂ ಧನುಸ್ಸಿನ ಠೇಂಕಾರಗಳು ಮತ್ತು ವೀರಾವೇಶದ ಘರ್ಜನೆಗಳ ಶಬ್ದಗಳು ಕೇಳಿಬರುತ್ತಿದ್ದವು. ಮಹಾಸೈನ್ಯಗಳ ಈ ಶಬ್ದಗಳನ್ನು ಕಡಿಮೆ ಮಾಡಲು ಸಾಧ್ಯವಿಲ್ಲದ್ದರಿಂದ ಹೊರಗಡೆ ನಿಂತವರಿಗೆ ಪರಸ್ಪರ ಮಾತನಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಷ್ಟು ದೊಡ್ಡದಾಗಿ ಸೇನೆಗಳ ಶಬ್ದವಿತ್ತು. ಈ ಸೇನೆಗಳ ವರ್ಣನೆ ಇನ್ನೂ ಮುಂದುವರಿಯಲಿದೆ.
IPL 2024: ಭಾರತದಲ್ಲಿ ಐಪಿಎಲ್ ನಡೆಯುವುದು ಬಹುತೇಕ ಡೌಟ್? ಈ ಬಗ್ಗೆ ಅಧ್ಯಕ್ಷರು ಹೇಳಿದ್ದಿಷ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 1 =
Remember me
