ಬಾಗಲಕೋಟೆ:ಸಿದ್ದರಾಮೋತ್ಸವಕ್ಕೆ ಆಗಮಿಸುತ್ತಿದ್ದಾಗ ಅಪಘಾತಕ್ಕೀಡಾಗಿ ಗಾಯಗೊಂಡಿದ್ದವರನ್ನು ಭೇಟಿಯಾಗಲು ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಾಲು ಜಾರಿ ಕುಸಿದು ಬಿದ್ದ ಘಟನೆ ನಡೆದಿದೆ. ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆ ಮುಂದೆ ಈ ಘಟನೆ ನಡೆದಿದೆ.
ಆಗಸ್ಟ್​ 2ರಂದು ಸಿದ್ದರಾಮೋತ್ಸವಕ್ಕೆ ಹೊರಟ ವಾಹನ ಅಪಘಾತಕ್ಕೀಡಾಗಿ ಗಾಯಗೊಂಡಿದ್ದವರ ಯೋಗಕ್ಷೇಮ ವಿಚಾರಿಸಲು ಸಿದ್ದರಾಮಯ್ಯ ಆಗಮಿಸಿದ್ದರು. ಸಿದ್ದರಾಮಯ್ಯ ಅವರು ಡ್ರೈವರ್ ಪಕ್ಕದ ಡೋರ್​ನಲ್ಲಿ ನಿಂತು ಅಭಿಮಾನಿಗಳತ್ತ ಕೈಬೀಸುವಾಗ ಕಾಲು ಜಾರಿ ಕುಸಿದು ಬಿದ್ದಿದ್ದರು. ಅವರು ಬೀಳುತ್ತಿದ್ದಂತೆ ಅಂಗರಕ್ಷಕರು ಅವರನ್ನು ಹಿಡಿದು ಎಬ್ಬಿಸಿ ಕಾರಲ್ಲಿ‌ ಕೂರಿಸಿದರು.
ಅದೃಷ್ಟವಶಾತ್ ಯಾವುದೇ ತೊಂದರೆ ಉಂಟಾಗಿಲ್ಲ. ಬಳಿಕ ಕೂಡಲೇ ಚೇತರಿಸಿಕೊಂಡ ಅವರು, ಚಿಕ್ಕ ಆಲಗುಂಡಿಗೆ ತೆರಳಿದರು. ಸಿದ್ದರಾಮೋತ್ಸವಕ್ಕೆ ತೆರಳುತ್ತಿರುವಾಗ ಗಾಯಗೊಂಡಿದ್ದ ಪ್ರಕಾಶ್ ಬಡಿಗೇರ ಎಂಬವರ ಮನೆಗೆ ಹೊರಟರು.
ಹರ್​ ಘರ್ ತಿರಂಗ: ಅಂಚೆ ಮೂಲಕ ಮನೆಗೇ ಬರಲಿದೆ ರಾಷ್ಟ್ರಧ್ವಜ, ಬುಕಿಂಗ್​​ಗೆ ಯಾವತ್ತು ಕಡೇ ದಿನ?

ದೇವಸ್ಥಾನದ ನೀರಲ್ಲೇ ಉರಿಯುತ್ತದೆ ಈ ದರ್ಗಾದ ದೀಪ!; ಹಿಂದೂ-ಮುಸ್ಲಿಂ ಸಾಮರಸ್ಯದ ಮೊಹರಂ..

ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

Sign in to your account
Please enter an answer in digits:17 − 12 =
Remember me
