ಬೆಂಗಳೂರು:ಕಾಂಗ್ರೆಸ್​ನವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಹಾಕುವ ಕೇಸ್​ಗಳನ್ನು ಎದುರಿಸಲು ಕಾನೂನು ಹೆಲ್ಪ್​ಲೈನ್​ ಜಾರಿಗೆ ಬರಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ರಾಜ್ಯದ ವಿವಿಧ ಭಾಗದ ವಕೀಲರನ್ನು ಒಳಗೊಂಡಂತೆ ಇಂದು ಬಿಜೆಪಿ ಕಚೇರಿಯಲ್ಲಿ ನಡೆದ ಕಾನೂನು ಪ್ರಕೋಷ್ಠ ಸಭೆ ಬಳಿಕ ಅವರು ಈ ವಿಷಯ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರರು ನಮ್ಮ ಕಾರ್ಯಕರ್ತರಿಗೆ ಧಮ್ಕಿ ಹಾಕುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ಕೊಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಹಿಂದೆಯೂ ಸಿದ್ದರಾಮಯ್ಯ ಅವಧಿಯಲ್ಲಿ ಹೀಗೆ ಮಾಡಿದ್ದರು. ಸುಮ್​ಸುಮ್ನೆ ರೌಡಿ ಶೀಟರ್ ಕೇಸ್ ಹಾಕಿಸಿದ್ದರು ಎನ್ನುವ ಮೂಲಕ ಕಾನೂನು ಹೆಲ್ಪ್​​ಲೈನ್​ ಅಗತ್ಯದ ಕುರಿತು ತೇಜಸ್ವಿ ಸೂರ್ಯ ವಿವರಿಸಿದರು.
ಇದನ್ನೂ ಓದಿ:ವೀರ ಸಾವರ್ಕರ್ ಹೆಸರಿನ ಕಾರ್ಯಕ್ರಮಕ್ಕೆ ಸರ್ಕಾರದಿಂದ ತಡೆ?; ಕೊನೆಗೂ…
ಹಿಂದೂ ಪರವಾಗಿ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡುವವರ ಮೇಲೆ ಕೇಸ್ ಹಾಕಿಸುತ್ತಿದ್ದಾರೆ. ಈ ಮೊದಲೂ ಕೇಸ್​​ಗಳನ್ನು ಹಾಕಿದ್ದರು. ಆದ್ದರಿಂದ ಕಾಂಗ್ರೆಸ್ ಪಕ್ಷದ ಕಾನೂನಿನ ದೌರ್ಜನ್ಯವನ್ನು ಎದುರಿಸಲು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ. ಮುಂದೆ ನಮ್ಮ ಕಾರ್ಯಕರ್ತರ ಸಹಾಯಕ್ಕೆಂದೇ ಕಾನೂನು ಹೆಲ್ಪ್​ಲೈನ್​ ಆರಂಭಿಸಲಾಗುವುದು ಎಂದರು.
ದಿನದ 24 ಗಂಟೆಯೂ ಕೆಲಸ ಮಾಡಲಿರುವ ಈ ಹೆಲ್ಪ್​​ಲೈನ್​ಗೆ ಕಾರ್ಯಕರ್ತರು ರಾಜ್ಯದ ಯಾವ ಭಾಗದಿಂದ ಬೇಕಿದ್ದರೂ ಫೋನ್ ಮಾಡಬಹುದು. ರಾಜ್ಯದಲ್ಲಿ ವಕೀಲರ ಮೂರು ತಂಡಗಳು ಇದರಲ್ಲಿ ತೊಡಗಿಸಿಕೊಳ್ಳಲಿವೆ. ಬೆಂಗಳೂರು, ಧಾರವಾಡ ಮತ್ತು ಕಲಬುರಗಿಯಲ್ಲಿ ಈ ವಕೀಲರ ತಂಡಗಳು ಕೆಲಸ ಮಾಡಲಿವೆ ಎಂದು ಸಂಸದರು ತಿಳಿಸಿದರು.
ಬಸ್ ಚಲಾಯಿಸುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಚಾಲಕ ಸಾವು!

ಪೊಲೀಸರು ಸಾರ್ವಜನಿಕರ ಜತೆ ಕಡೇಪಕ್ಷ ಸಭ್ಯತೆಯಿಂದ ವರ್ತಿಸಿ: ಪೊಲೀಸರಿಗೆ ಎಡಿಜಿಪಿ ಪರೋಕ್ಷ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
