ಬೆಂಗಳೂರು:ಕರೊನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ರಾಜ್ಯ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಬಿಜೆಪಿ ಲೀಗಲ್ ನೋಟಿಸ್ ಜಾರಿ ಮಾಡಿದೆ.
ಸರ್ಕಾರದ ಮೇಲೆ ನಿರಾಧಾರ ಆರೋಪ ಹೊರಿಸಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೋರಲು‌ ಒತ್ತಾಯಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆದ ಎಂಎಲ್ಸಿ ಎನ್. ರವಿಕುಮಾರ್ ಮತ್ತು ರಾಜ್ಯ ವಕ್ತಾರ ಅಶ್ವತ್ಥನಾರಾಯಣ, ಲೀಗಲ್ ನೋಟಿಸ್​ಗೆ 15 ದಿನದೊಳಗೆ ಲಿಖಿತ ಸಮಜಾಯಿಷಿ ನೀಡಬೇಕು. ತಪ್ಪಿದ್ದಲ್ಲಿ ಗಂಭೀರ ಕ್ರಮ ಎದುರಿಸಬೇಕಾದೀತು ಎಂದು ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಎಚ್ಚರಿಕೆ ನೀಡಿದ್ದಾರೆ. ಜನರ ದಾರಿ ತಪ್ಪಿಸುವ ಆರೋಪದಿಂದ ಸರ್ಕಾರ ಮತ್ತು ಪಕ್ಷದ ಗೌರವಕ್ಕೆ ಕುಂದುಂಟಾಗಿದೆ. ನಿರಾಧಾರ ಆರೋಪಕ್ಕೆ ಸಮಜಾಯಿಷಿ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿರಿಅಂಬೇಡ್ಕರ್​ಗೆ ಊಟ ಬಡಿಸಿದ್ದ ಬೆಳಗಾವಿಯ ಅಜ್ಜಿ ಸಿದ್ದವ್ವ ಮೇತ್ರಿ ನಿಧನ
ಇನ್ನು ಬಿಜೆಪಿ ಲೀಗಲ್​ ನೋಟಿಸ್​ ಜಾರಿ ಮಾಡಿರುವ ಸಂಬಂಧ ಮಂಡ್ಯದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಇವತ್ತು ನಮಗೆ ಲೀಗಲ್ ನೋಟಿಸ್ ಕೊಟ್ಟಿದ್ದಾರೆ. ಅವರು ಕೊಡಲಿ ಅಂತಾನೇ ನಾನೂ ಕಾಯುತ್ತಿದ್ದೆ. ನಾವು ಆರೋಪ ಮಾಡಿರೋದು ಸರ್ಕಾರದ ವಿರುದ್ಧ. ನಮಗೆ ನೋಟಿಸ್ ಕೊಡಬೇಕಾದ್ದು ಚೀಫ್ ಸೆಕ್ರೆಟರಿ. ಆದರೆ, ಲೀಗಲ್ ನೋಟಿಸ್ ಕೊಟ್ಟಿರೋದು ಬಿಜೆಪಿ. ಒಬ್ಬ ಎಂಎಸ್ಸಿ ಕೈಲಿ ಲೀಗಲ್ ನೋಟಿಸ್ ಕೊಡಿಸಿದ್ದಾರೆ. ಇದನ್ನು ಸಿಎಂ, ಡಿಸಿಎಂ, ಸಚಿವರು ಕೊಡಬೇಕು. ಆದರೂ ಬಿಜೆಪಿಯಿಂದ ಕೊಡಿಸಿದ್ದಾರೆ’ ಎಂದರು.
ಈ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ ಕೊಟ್ಟ ನೋಟಿಸ್​ಗೆ ಉತ್ತರ ಕೊಡುತ್ತೇವೆ. ನಮ್ಮಲ್ಲಿ ಬೇಕಾದ ಎಲ್ಲ ದಾಖಲೆಯೂ ಇದೆ. ಕರೊನಾಗಿಂತ ಭೀಕರವಾಗಿದೆ ಬಿಜೆಪಿಯ ಭ್ರಷ್ಟಾಚಾರ. ನ್ಯಾಯಾಧೀಶರು ಈ ಪ್ರಕರಣವನ್ನು ತನಿಖೆ ಮಾಡಬೇಕು’ ಎಂದು ಆಗ್ರಹಿಸಿದರು.
ಅಧಿಕಾರ, ಹಣಕ್ಕಾಗಿ ಹಲವು ಬಾರಿ ಡಿ.ಕೆ.ಶಿವಕುಮಾರ್​ ನನ್ನ ಕಾಲಿಗೆ ಬಿದ್ದಿದ್ದಾರೆ… ಅದರ ವಿಡಿಯೋ ಇದೆ: ಸಿ.ಪಿ.ಯೋಗೇಶ್ವರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
