ವಿಜಯವಾಣಿ ಸುದ್ದಿಜಾಲ ನವದೆಹಲಿ
ದೇಶದ ವಕ್ಪ್ ಮಂಡಳಿಗಳನ್ನು ನಿಯಂತ್ರಿಸುವ ಕಾನೂನಿಗೆ ತಿದ್ದುಪಡಿ ತರುವ ಮಹತ್ವದ ಮಸೂದೆಯನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಗುರುವಾರ ಲೋಕಸಭೆಯಲ್ಲಿ ಮಂಡಿಸಿದರು. ನಿರೀಕ್ಷೆಯಂತೆ ತಿದ್ದುಪಡಿ ವಿರುದ್ಧ ಸಿಡಿದೆದ್ದಿರುವ ವಿಪಕ್ಷಗಳು ಸಂಸತ್​ನಲ್ಲಿ ಕೋಹಾಹಲ ಎಬ್ಬಿಸಿದವು. ಕ್ರೂರ ಮತ್ತು ದೇಶವನ್ನು ಧಾರ್ವಿುಕತೆಯ ಆಧಾರದ ಮೇಲೆ ವಿಭಜಿಸುವ ಪ್ರಯತ್ನ ಈ ಮಸೂದೆ ಹಿಂದಿರುವುದಾಗಿ ಕಿಡಿಕಾರಿದವು. ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ವಕ್ಪ್ ಬೋರ್ಡ್ ಗಳನ್ನು ಮಾಫಿಯಾ ವಶಪಡಿಸಿಕೊಂಡಿದ್ದವು. ತಿದ್ದುಪಡಿ ಮಸೂದೆಯ ಉದ್ದೇಶ ಆಸ್ತಿ ಕಾಯುವುದೇ ಹೊರತು ಯಾವುದೇ ಧಾರ್ವಿುಕ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ವಕ್ಪ್ ಕಾಯ್ದೆ-1995 ಅನ್ನು ಹೊಸದಾಗಿ ಏಕೀಕೃತ ವಕ್ಪ್ ನಿರ್ವಹಣೆ, ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ಕಾಯ್ದೆ (ಯುನಿಫೈಡ್ ವಕ್ಪ್ ಮ್ಯಾನೇಜ್​ವೆುಂಟ್, ಎಂಪವರ್​ವೆುಂಟ್, ಎಫಿಶಿಯೆನ್ಸಿ ಆಂಡ್ ಡೆವಲಪ್​ವೆುಂಟ್ ಆಕ್ಟ್) ಎಂದು ಮರುನಾಮ ಕರಣ ಮಾಡಲು ಪ್ರಸ್ತಾಪಿಸಲಾಗಿದೆ. ಕೇಂದ್ರೀಯ ಪೋರ್ಟಲ್ ಮೂಲಕ ವಕ್ಪ್ ಆಸ್ತಿಗಳ ನೋಂದಣಿ ವಿಧಾನ ಸರಳೀಕರಿಸುವ ಉದ್ದೇಶವನ್ನು ಮಸೂದೆ ಹೊಂದಿದೆ.
ಜೆಪಿಸಿಗೆ ಮಸೂದೆ: ಬಿಜೆಪಿ ನೇತೃತ್ವದ ಎನ್​ಡಿಎಯ ಪ್ರಮುಖ ಮಿತ್ರ ಪಕ್ಷಗಳಾಗಿರುವ ಟಿಡಿಪಿ, ಜೆಡಿಯು ವಕ್ಪ್ ಮಸೂದೆಗೆ ಬೆಂಬಲ ಸೂಚಿಸಿವೆ. ಮಸೂದೆಯಲ್ಲಿ ಮತ್ತಷ್ಟು ತಿದ್ದುಪಡಿ ಅಗತ್ಯವಿದ್ದಲ್ಲಿ, ಪರಿಶೀಲಿಸಿ ಶಿಫಾರಸು ಮಾಡುವ ಸಲುವಾಗಿ ಸಂಸತ್ತಿನ ಜಂಟಿ ಸಮಿತಿಗೆ (ಜೆಪಿಸಿ) ಕಳುಹಿಸಿಕೊಡಲಾಗಿದೆ ಎಂದು ಕೇಂದ್ರ ಸಚಿವ ರಿಜಿಜು ಹೇಳಿದ್ದಾರೆ. ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಕೌನ್ಸಿಲ್ ಮಸೂದೆಯನ್ನು ಸ್ವಾಗತಿಸಿದೆ.
ಜಿಲ್ಲಾಧಿಕಾರಿ ತೀರ್ವನ:ಮಸೂದೆಯಲ್ಲಿ ಕೇಂದ್ರೀಯ ವಕ್ಪ್ ಕೌನ್ಸಿಲ್ ಮತ್ತು ರಾಜ್ಯ ವಕ್ಪ್ ಮಂಡಳಿಗಳ ರಚನೆ ಬಗ್ಗೆ ಪ್ರಸ್ತಾಪಿಸಲಾಗಿದೆ. ಮುಸ್ಲಿಂ ಮಹಿಳೆಯರು, ಮುಸ್ಲಿಮೇತರರ ಪ್ರಾತಿನಿಧ್ಯಕ್ಕೂ ಆದ್ಯತೆ ನೀಡಲಾಗಿದೆ. ಪ್ರಸ್ತಾವಿತ ವಿಧೇಯಕ ಜಾರಿಯಾದರೆ ನಿರ್ದಿಷ್ಟ ಆಸ್ತಿ ವಕ್ಪ್ ಆಸ್ತಿಯೇ ಅಥವಾ ಸರ್ಕಾರಿ ಭೂಮಿಯೇ ಎಂಬ ಬಗ್ಗೆ ಜಿಲ್ಲಾಧಿಕಾರಿಯೇ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲದಿಂದ ಮುಸ್ಲಿಂ ಧರ್ವಚರಣೆ ಮಾಡಿಕೊಂಡು ಬರುತ್ತಿರುವ ಮುಸ್ಲಿಮರು ಮಾತ್ರ ವಕ್ಪ್ ಬೋರ್ಡ್​ಗಳಿಗೆ ಆಸ್ತಿಗಳನ್ನು ದಾನ ಮಾಡಬಹುದು ಹಾಗೂ ಕಾನೂನಾತ್ಮಕವಾಗಿ ಯಾರು ಮಾಲೀಕರಿದ್ದಾರೋ ಅವರೇ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಮಸೂದೆಯಲ್ಲಿ ದಾಖಲಿಸಲಾಗಿದೆ. ಈ ಪ್ರಸ್ತಾವನೆ ವಿರೋಧಿಸಿರುವ ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ, ಒಬ್ಬ ವ್ಯಕ್ತಿ ಮುಸ್ಲಿಂ ಧರ್ವಚರಣೆ ಮಾಡುತ್ತಿದ್ದಾನೆ ಎಂಬುದನ್ನು ಪರಿಶೀಲಿಸುವ ಮಾನದಂಡವೇನು ಎಂಬ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ವಿಪಕ್ಷಗಳ ಆಕ್ರೋಶ:ಮಸೂದೆ ಬಗ್ಗೆ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಸಂಸದ ಕೆ.ಸಿ ವೇಣುಗೋಪಾಲ್, ಮಸೂದೆಯಲ್ಲಿ ಹಳೆ ಕಾನೂನಿಗೆ 44 ತಿದ್ದುಪಡಿ ತರಲಾಗಿರುವುದು ಸಂವಿಧಾನದ ಮೇಲಿನ ದಾಳಿಯಾಗಿದೆ. ಮುಸ್ಲಿಮೇತರರೂ ವಕ್ಪ್ ಆಡಳಿತ ಮಂಡಳಿಯ ಸದಸ್ಯರನ್ನಾಗಿ ಮಾಡಬೇಕೆಂಬ ನಿಬಂಧನೆಯನ್ನೂ ಹಾಕಿದ್ದಾರೆ. ಇದು ಧಾರ್ವಿುಕ ಸ್ವಾತಂತ್ರ್ಯದ ಮೇಲಿನ ನೇರ ದಾಳಿ. ಮುಂದೆ ನೀವು ಕ್ರಿಶ್ಚಿಯನ್, ಜೈನರು ಸೇರಿ ಎಲ್ಲರನ್ನೂ ಗುರಿ ಮಾಡುತ್ತೀರಿ. ಈ ರೀತಿಯ ವಿಭಜಕ ರಾಜಕೀಯಕ್ಕೆ ಜನ ಮಾನ್ಯತೆ ನೀಡುವುದಿಲ್ಲ ಎಂದಿದ್ದಾರೆ. ನಾವು ಹಿಂದೂಗಳಾಗಿದ್ದರೂ, ಇತರ ಧರ್ಮಗಳ ನಂಬಿಕೆ ಗೌರವಿಸುತ್ತೇವೆ. ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಮಸೂದೆ ಮಂಡಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಜನ ನಿಮಗೆ ಬುದ್ಧಿ ಕಲಿಸಿದರೂ ಅರ್ಥವಾಗಿಲ್ಲ ಎಂದು ಕಿಡಿಕಾರಿದ್ದಾರೆ.
ಸರ್ಕಾರದ ಸಮರ್ಥನೆ:ಯಾವುದೇ ಧಾರ್ವಿುಕ ಸಂಘಟನೆಯ ಸ್ವಾತಂತ್ರ್ಯದಲ್ಲಿ ಯಾವುದೇ ಹಸ್ತಕ್ಷೇಪವನ್ನು ಮಸೂದೆ ಪ್ರತಿಪಾದಿಸುವುದಿಲ್ಲ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ. ನೀವು (ಕಾಂಗ್ರೆಸ್) ಮಾಡಿದ ಸಾಚಾರ್ ಸಮಿತಿಯ ವರದಿ ಆಧರಿಸಿ ಈ ಮಸೂದೆ ತರಲಾಗುತ್ತಿದೆ. ಪಕ್ಷಪಾತ ರಾಜಕಾರಣದಿಂದಾಗಿ ಮುಸ್ಲಿಮರನ್ನು ದಾರಿ ತಪ್ಪಿಸಲಾಗುತ್ತಿತ್ತು. 2005ರಲ್ಲಿ, ದೆಹಲಿ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ರಾಜಿಂದರ್ ಸಾಚಾರ್ ನೇತೃತ್ವದ ಏಳು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾರತದಲ್ಲಿ ಮುಸ್ಲಿಮರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲು ರಚನೆ ಮಾಡಿದ್ದರು ಎಂದು ಮಾಹಿತಿ ನೀಡಿದರು. ವಕ್ಪ್ ಬೋರ್ಡ್ ಅನ್ನು ಮಾಫಿಯಾ ವಶಪಡಿಸಿಕೊಂಡಿದೆ ಮತ್ತು ಸರ್ಕಾರಕ್ಕೆ ನೂರಕ್ಕೂ ಹೆಚ್ಚು ಭೂಕಬಳಿಕೆ ದೂರುಗಳು ಬಂದಿವೆ ಎಂದು ವಿವರಿಸಿದರು.
ಬೆಂಗಳೂರು:ವಕ್ಪ್ ಬೋರ್ಡ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೇಂದ್ರ ಸರ್ಕಾರ ದೇಶದ ಅಲ್ಪಸಂಖ್ಯಾತರ ವಿರೋಧಿಗಳು ಎಂಬುದನ್ನು ನಿರೂಪಿಸಿದೆ. ಕೇಂದ್ರದ ಕ್ರಮವನ್ನು, ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಸಂಪೂರ್ಣವಾಗಿ ವಿರೋಧಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ವಕ್ಪ್ ಬೋರ್ಡ್ ಕಾನೂನು ಆ ಸಮುದಾಯದ ವೈಯಕ್ತಿಕ ಕಾನೂನಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವುದು ಸಂವಿಧಾನ ಬಾಹಿರ ಕೇಂದ್ರದ ಈ ನಿಲುವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದರು.
* ಮುಸ್ಲಿಮೇತರರಿಗೆ ಸದಸ್ಯತ್ವ ನೀಡಿದ್ದು
* ಧಾರ್ವಿುಕ ಸ್ವಾತಂತ್ರ್ಯದ ಮೇಲಿನ ದಾಳಿ
* ಮಂಡಳಿ ಹಣ ಬಳಕೆಗೆ ಮಾನದಂಡ
*ಸರ್ಕಾರ ಹೇಳುವುದಕ್ಕೆ ಬಳಸುವ ರೂಲ್ಸ್
* ಧರ್ಮದ ನಡುವೆ ಮೂಗು ತೂರಿಸುವಿಕೆ
* ಧಾರ್ವಿುಕ ಹಸ್ತಕ್ಷೇಪ ಮಾಡಲಾಗಿಲ್ಲ
* ಹಕ್ಕು ವಂಚಿತರಿಗೆ ಹಕ್ಕು ನೀಡುವ ಗುರಿ
* ಸಾಚಾರ್ ಸಮಿತಿ ವರದಿ ಅಡಿ ನಿರ್ಧಾರ
* ಮುಸ್ಲಿಮರಿಗೆ ಅನ್ಯಾಯ ಆಗಲು ಬಿಡಲ್ಲ
? ತಿದ್ದುಪಡಿ ಮಸೂದೆ ಪಾರದರ್ಶಕವಾಗಿದೆ
* ವಕ್ಪ್ ಮಂಡಳಿ ನಿಯಂತ್ರಿಸುವುದು
* ನೋಂದಣಿ, ಆಸ್ತಿ ಸಮೀಕ್ಷೆ ಹೊಣೆ
* ಒತ್ತುವರಿ ವಿವಾದ ಬಗೆಹರಿಸುವುದು
*ಹಣ ದುರ್ಬಳಕೆ ತಡೆಯುವುದು
* ವಕ್ಪ್ ಸ್ವಾಧೀನದಲ್ಲಿ ಆಸ್ತಿ ಹೇಗೆ ಮರು ವ್ಯಾಖ್ಯಾನಿ ಸುವುದು? ರಾಜ್ಯಗಳಲ್ಲಿನ ವಕ್ಪ್ ಮಂಡಳಿಗಳ ಸಂಯೋಜನೆ ಬದಲಾವಣೆ ಸೇರಿ ಆಸ್ತಿಗಳ ನಿಯಂತ್ರಣದಲ್ಲಿ ಸರ್ಕಾರಕ್ಕೆ ಹೆಚ್ಚು ಅಧಿಕಾರ
* ರಾಜ್ಯ ಸರ್ಕಾರಗಳಿಗೆ ಮುಸ್ಲಿಮೇತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕನಿಷ್ಠ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ವಕ್ಪ್ ಮಂಡಳಿಗಳಿಗೆ ನೇಮಿಸಲು ಅವಕಾಶ
* ಈ ಕಾಯ್ದೆ ಜಾರಿಗೆ ಮುನ್ನ ಅಥವಾ ನಂತರ ವಕ್ಪ್ ಆಸ್ತಿ ಎಂದು ಗುರುತಿಸಲಾದ ಅಥವಾ ಘೊಷಿಸಲಾದ ಯಾವುದೇ ಸರ್ಕಾರಿ ಆಸ್ತಿಯನ್ನು ವಕ್ಪ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ಈ ವಿವಾದದ ಬಗ್ಗೆ ಅಂತಿಮ ತೀರ್ವನವನ್ನು ಜಿಲ್ಲಾಧಿಕಾರಿ ಮಾಡುತ್ತಾರೆಯೇ ವಿನಃ ವಕ್ಪ್ ಟ್ರಿಬ್ಯುನಲ್ ಅಲ್ಲ
* ಒಂದು ವೇಳೆ ಜಿಲ್ಲಾಧಿಕಾರಿ ನಿರ್ದಿಷ್ಟ ಆಸ್ತಿಯನ್ನು ಸರ್ಕಾರಿ ಆಸ್ತಿ ಎಂದು ನಿರ್ಧರಿಸಿದರೆ, ಅವರು ಕಂದಾಯ ದಾಖಲೆಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ಮಾಡುತ್ತಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಜಿಲ್ಲಾಧಿಕಾರಿ ತನ್ನ ವರದಿ ಸಲ್ಲಿಸುವವರೆಗೆ ಅದನ್ನು ವಕ್ಪ್ ಆಸ್ತಿ ಎಂದು ಪರಿಗಣಿಸಲಾಗುವುದಿಲ್ಲ
* ಇದರರ್ಥ ಸಮಸ್ಯೆ ನಿರ್ಧರಿಸುವವರೆಗೆ, ವಿವಾದಿತ ಭೂಮಿಯ ಮೇಲೆ ವಕ್ಪ್ ನಿಯಂತ್ರಣದಲ್ಲಿರುವುದಿಲ್ಲ. ಯಾವುದೇ ಸಮಯದಲ್ಲಿ ಯಾವುದೇ ವಕ್ಪ್​ನ ಲೆಕ್ಕಪರಿಶೋಧನೆ ನಡೆಸಬೇಕೆಂದರೆ ದೇಶದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ನೇಮಿಸಿದ ಲೆಕ್ಕಪರಿಶೋಧಕರಿಂದ ಅಥವಾ ಅದಕ್ಕಾಗಿ ಕೇಂದ್ರ ಸರ್ಕಾರದಿಂದ ಗೊತ್ತುಪಡಿಸಿದ ಯಾವುದೇ ಅಧಿಕಾರಿಯಿಂದ ಪರಿಶೋಧನೆ ನಡೆಸುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ
*ಕೇಂದ್ರೀಯ ವಕ್ಪ್ ಕೌನ್ಸಿಲ್ ಸ್ಥಾಪನೆ ಮಾಡಲು ಪ್ರಸ್ತಾವಿತ ಮಸೂದೆ ಮೂರು ಸಂಸದರನ್ನು (ಲೋಕಸಭೆಯ ಇಬ್ಬರು ಮತ್ತು ರಾಜ್ಯಸಭೆಯ ಒಬ್ಬರು) ಸೇರಿಸುವ ಅಧಿಕಾರವನ್ನು ಕೇಂದ್ರಕ್ಕೆ ನೀಡಲು ಉದ್ದೇಶಿಸಿದೆ. ಅವರು ಮುಸ್ಲಿಮರೇ ಆಗಿರಬೇಕು ಎಂದು ತಿಳಿಸಲಾಗಿಲ್ಲ. ಹಳೆ ಕಾಯ್ದೆಯಲ್ಲಿ ಕೌನ್ಸಿಲ್​ಗೆ ಸೇರ್ಪಡೆಗೊಳ್ಳುವ ಮೂವರು ಸಂಸದರು ಮುಸ್ಲಿಂ ಸಮುದಾಯದವರಾಗಿರಬೇಕು ಎಂದು ದಾಖಲಿಸಲಾಗಿತ್ತು
* ಕೇಂದ್ರ ವಕ್ಪ್ ಕೌನ್ಸಿಲ್​ನಲ್ಲಿ ಓರ್ವ ಕೇಂದ್ರ ಸಚಿವರು, ಮೂವರು ಸಂಸದರು, ಮುಸ್ಲಿಂ ಸಂಘಟನೆಗಳ ಮೂವರು ಪ್ರತಿನಿಧಿಗಳು ಮತ್ತು ಮೂವರು ಮುಸ್ಲಿಂ ಕಾನೂನು ತಜ್ಞರಿರಬೇಕು. ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್​ನ ಇಬ್ಬರು ಮಾಜಿ ನ್ಯಾಯಮೂರ್ತಿಗಳು, ರಾಷ್ಟ್ರಮಟ್ಟದಲ್ಲಿ ಖ್ಯಾತಿ ಹೊಂದಿರುವ ನಾಲ್ವರು ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳಿರುತ್ತಾರೆ. ಮುಖ್ಯವಾಗಿ, ಇವರಲ್ಲಿ ಕನಿಷ್ಠ ಇಬ್ಬರು ಮಹಿಳೆಯರಿರಬೇಕು.
ಮುಸ್ಲಿಂ ಧರ್ವಿುಯರ ಏಳಿಗೆಗಾಗಿ ಬಳಸಿಕೊಳ್ಳಬೇಕಿದ್ದ ವಕ್ಪ್ ಆಸ್ತಿಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿತ್ತು. ಹೀಗಾಗಿ, ತಿದ್ದುಪಡಿ ಮಸೂದೆ ಸರಿಯಾದ ದಿಕ್ಕಿನಲ್ಲಿರುವ ಸ್ವಾಗತಾರ್ಹ ಕ್ರಮ.
| ಫೌಜನ್ ಅಲವಿ ಕಾರ್ಯನಿರ್ವಾಹಕ ನಿರ್ದೇಶಕ, ಅಲಾನಾ ಗ್ರೂಪ್
ಕಿರಣ್ ರಿಜಿಜು ಮುಸಲ್ಮಾನ್ ವಕ್ಪ್ (ರದ್ದತಿ) ಮಸೂದೆ-2024 ಮಂಡಿಸಿದ್ದಾರೆ. 1995ರ ವಕ್ಪ್ ಕಾಯ್ದೆ ಜಾರಿಗೆ ಬಂದಾಗಿನಿಂದ ಕಾಯ್ದೆ ಪ್ರಸ್ತುತತೆ ಕಳೆದುಕೊಂಡಿತ್ತು. ಹೀಗಾಗಿ ಅದನ್ನು ಹಿಂತೆಗೆದುಕೊಳ್ಳುವ ಅಗತ್ಯವಿತ್ತು.
| ಅಮಿತ್ ಷಾ ಕೇಂದ್ರ ಗೃಹ ಸಚಿವ
ವಕ್ಫ್​ ಮಂಡಳಿ ಕಾನೂನು ತಿದ್ದುಪಡಿ ಮಸೂದೆ ಮಂಡನೆಗೆ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 14 =
Remember me
