|ಡಾ.ಕೆ.ಸುಧಾಕರ್, ಆರೋಗ್ಯ-ವೈದ್ಯಕೀಯ ಶಿಕ್ಷಣ ಸಚಿವರು
ಹಿರಿಯ ರಾಜಕಾರಣಿ, ಮಾಜಿ ಸಚಿವ ಎಂ.ರಘುಪತಿ ಅವರ ನಿಧನ ರಾಜ್ಯದ ರಾಜಕೀಯ ಮತ್ತು ಸಾರ್ವಜನಿಕ ಜೀವನಕ್ಕೆ ತುಂಬಲಾರದ ನಷ್ಟವಾಗಿದೆ.
1970ರ ದಶಕದಲ್ಲಿ ರಘುಪತಿ ಅವರು ಕರ್ನಾಟಕದ ಯುವ ಕಾಂಗ್ರೆಸ್ ಅನ್ನು ಸೈದ್ಧಾಂತಿಕ ರಾಜಕೀಯ ಚಳವಳಿಯಾಗಿ ಪರಿವರ್ತಿಸಿದವರು. ಇಂದಿರಾ ಗಾಂಧಿ ಅವರ ಕಟ್ಟಾ ಅನುಯಾಯಿಯಾಗಿ ಮತ್ತು ದೇವರಾಜ ಅರಸು ಅವರ ನಿಷ್ಠಾವಂತ ಶಿಷ್ಯರಾಗಿ ಪರಿವರ್ತನಾ ರಾಜಕೀಯದಲ್ಲಿ ಅವರು ಪ್ರಮುಖಪಾತ್ರ ವಹಿಸಿದ್ದರು.
ರಘುಪತಿ ಅವರು ಸೆಂಟ್ರಲ್ ಕಾಲೇಜಿನ ವಿದ್ಯಾರ್ಥಿಯಾಗಿ ಎಕ್ಸೊ್ಪೕ 70 ಆಂದೋಲನದ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದರು. ಈ ಐತಿಹಾಸಿಕ ಹೋರಾಟವು ಅಂದಿನ ಮೈಸೂರು ರಾಜ್ಯದಲ್ಲಿ ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕಾರಣವಾಯಿತು. ನಂತರ ಇಂದಿರಾ ಗಾಂಧಿ ಮತ್ತು ಎಸ್. ನಿಜಲಿಂಗಪ್ಪ ಬಣಗಳ ನಡುವೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವಿಭಜನೆಯಾಯಿತು.
ದೇವರಾಜ ಅರಸು ಅವರ ಸಾಮಾಜಿಕ ನ್ಯಾಯ ರಾಜಕಾರಣಕ್ಕೆ ನಾಂದಿ ಹಾಡಿದ ಪ್ರಮುಖ ಯುವ ನಾಯಕರಲ್ಲಿ ರಘುಪತಿ ಒಬ್ಬರು. 1980ರ ದಶಕದ ಆರಂಭದಲ್ಲಿ ಅಂದಿನ ಕಾಂಗ್ರೆಸ್​ನ ಮುಖ್ಯಮಂತ್ರಿ ಗುಂಡೂರಾವ್ ವಿರುದ್ಧ ಬಂಡಾಯವೆದ್ದ ಅವರು, ರಾಜ್ಯದ ಪರ್ಯಾಯ ರಾಜಕಾರಣದ ಉಗಮಕ್ಕೆ ನಾಂದಿ ಹಾಡುವಲ್ಲಿ ಪ್ರಮುಖರು.
ದೇವರಾಜ ಅರಸು ಪರಂಪರೆಯನ್ನು ಮುಂದಕ್ಕೆ ಕೊಂಡೊಯ್ದ ಅವರು, 1983ರ ವಿಧಾನಸಭಾ ಚುನಾವಣೆಯಲ್ಲಿ ‘ಕರ್ನಾಟಕ ಕ್ರಾಂತಿ ರಂಗ’ದ ವಿಜಯವನ್ನು ಖಚಿತಪಡಿಸಿದರು. ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ‘ಕರ್ನಾಟಕ ಕ್ರಾಂತಿ ರಂಗ’ ಕಾಂಗ್ರೆಸ್ ವಿರುದ್ಧ ಸಮಾನಾಂತರ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಿತು. ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ರಘುಪತಿ ಅವರು ಮಾಧ್ಯಮಗಳು, ಬುದ್ಧಿಜೀವಿಗಳು, ವಿದ್ಯಾರ್ಥಿ ಸಮುದಾಯ ಮತ್ತು ಚಿತ್ರರಂಗದ ಗಣ್ಯರನ್ನೂ ಪ್ರೀತಿಸುವ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದರು.
ಆಂಧ್ರಪ್ರದೇಶದ ತೆಲುಗುದೇಶಂ ಸಿಎಂ ಎನ್.ಟಿ. ರಾಮರಾವ್(ಎನ್​ಟಿಆರ್) ಮತ್ತು ತಮಿಳುನಾಡಿನ ಎಐಡಿಎಂಕೆ ಸಿಎಂ ಎಂ.ಜಿ.ರಾಮಚಂದ್ರನ್ (ಎನ್​ಜಿಆರ್) ಅವರನ್ನು ಕರ್ನಾಟಕ ರಾಜಕೀಯಕ್ಕೆ ಪರಿಚಯಿಸಿದವರು ರಘುಪತಿ. ಅವರು ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಸೂಪರ್ ಹೀರೋಗಳೊಂದಿಗೆ ವೈಯಕ್ತಿಕ ಸಂಬಂಧವನ್ನು ಹೊಂದಿದ್ದರು. ಅವರ ಬಾಂಧವ್ಯವು ಎರಡು ನೆರೆಯ ರಾಜ್ಯಗಳ ಕಾಂಗ್ರೆಸ್ಸೇತರ ಸರ್ಕಾರಗಳ ನಡುವಿನ ಸೌಹಾರ್ದತೆ ಬಂಧವನ್ನು ಬಲಪಡಿಸಿತು.
ಒಂದು ಕಾಲದಲ್ಲಿ ರಾಜಧಾನಿ ಬೆಂಗಳೂರಿನ ರಾಜಕೀಯವನ್ನು ರಘುಪತಿ ಅವರ ಪ್ರಭಾವಶಾಲಿ ಉಪಸ್ಥಿತಿ ಇಲ್ಲದೆ ಕಲ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಇಂದಿನ ರಾಜಕೀಯ ನಾಯಕರಂತಲ್ಲದೆ, ರಘುಪತಿ ಅವರು ಮಲ್ಲೇಶ್ವರದ ಒಂದು ಸಣ್ಣ ಓಣಿಯಲ್ಲಿ ಸರಳ ಜೀವನದಲ್ಲಿ ವಾಸಿಸುತ್ತಿದ್ದರು. ಅವರ ವೈಯಕ್ತಿಕ ಜೀವನದಲ್ಲಿ ಕೆಲವು ಮುಜುಗರದ ಹಿನ್ನಡೆಗಳ ಹೊರತಾಗಿಯೂ, ಮೌಲ್ಯಾಧಾರಿತ ರಾಜಕೀಯಕ್ಕಾಗಿ ಬದ್ಧತೆ ಮತ್ತು ಉತ್ಸಾಹವನ್ನು ಎಂದಿಗೂ ಕಳೆದುಕೊಳ್ಳಲಿಲ್ಲ.
ಅಗಲಿದ ಆತ್ಮಕ್ಕೆ ನನ್ನ ಪ್ರಾಮಾಣಿಕ ಸಂತಾಪ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತೇನೆ ಮತ್ತು ಸಾರ್ವಜನಿಕ ಜೀವನದಲ್ಲಿ ಅವರ ಶಕ್ತಿಯುತ ಪಾತ್ರವು ಇಂದಿನ ಪೀಳಿಗೆಯಲ್ಲಿ ನಮಗೆಲ್ಲರಿಗೂ ಸ್ಪೂರ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ.
ಸಂಚಾರಿ ಗ್ರಂಥಾಲಯ ಆರಂಭಿಸಿದ ಕೀರ್ತಿ:ರಘುಪತಿ ಅವರು ದಕ್ಷಿಣ ಭಾರತದಿಂದ ಅಖಿಲ ಭಾರತ ಯೂತ್ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯಾಗಿದ್ದರು. 1983ರಲ್ಲಿ ಸಿ.ಎಂ.ಇಬ್ರಾಹಿಂ ಅವರನ್ನು ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸಿ ಚುನಾವಣೆಯಲ್ಲಿ ಗೆದ್ದರು. ನಂತರದಲ್ಲಿ ಅವರು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಬರಬೇಕಾಯಿತು. ಸಂಚಾರಿ ಗ್ರಂಥಾಲಯ, ದೂರದರ್ಶನವನ್ನು ಬೆಂಗಳೂರಿನಲ್ಲಿ ಆರಂಭಿಸಿದ ಕೀರ್ತಿ ರಘುಪತಿ ಅವರಿಗೆ ಸಲ್ಲುತ್ತದೆ.
ಮಾಜಿ ಶಿಕ್ಷಣ ಸಚಿವ ಎಂ. ರಘುಪತಿ (81)ಹೃದಯಾಘಾತದಿಂದ ಶನಿವಾರ ಬೆಳಗಿನ ಜಾವ ಮಲ್ಲೇಶ್ವರದಲ್ಲಿರುವ ನಿವಾಸದಲ್ಲಿ ನಿಧನರಾದರು. ಅವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ. ಮಲ್ಲೇಶ್ವರ ಹಾಗೂ ಶಿವಾಜಿನಗರ ಕ್ಷೇತ್ರಗಳಿಂದ ತಲಾ ಒಂದು ಬಾರಿ ವಿಧಾನಸಭಾ ಸದಸ್ಯರಾಗಿದ್ದ ಅವರು, ಅದಕ್ಕೂ ಮುನ್ನ ವಿಧಾನ ಪರಿಷತ್​ಸದಸ್ಯರಾಗಿದ್ದರು. ಕಾಂಗ್ರೆಸ್​ನಿಂದ ವಿದ್ಯಾರ್ಥಿ ನಾಯಕರಾಗಿ ರಾಜಕೀಯ ಆರಂಭಿಸಿದ ರಘುಪತಿ, ನಂತರ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. 1985ರಲ್ಲಿ ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಶಿಕ್ಷಣ ಹಾಗೂ ವಾರ್ತಾ ಸಚಿವರಾಗಿದ್ದರು. ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರ ಹಾಗೂ ಪಠ್ಯ ಪುಸ್ತಕಗಳನ್ನು ಉಚಿತವಾಗಿ ವಿತರಿಸುವ ಯೋಜನೆಯನ್ನು ಜಾರಿಗೆ ತಂದರು. ದಿವಂಗತ ಪ್ರಧಾನಿ ವಿ.ಪಿ. ಸಿಂಗ್ ಅವರಿಗೆ ಆತ್ಮೀಯರಾಗಿದ್ದರು. ವಿ.ಪಿ. ಸಿಂಗ್ ಬೆಂಗಳೂರಿಗೆ ಬಂದರೆ ರಘುಪತಿ ಮನೆಯಲ್ಲಿ ಹೆಚ್ಚು ಉಳಿಯುತ್ತಿದ್ದರು. ಆಂಧ್ರ ಪ್ರದೇಶದ ಸಿಎಂ ಆಗಿದ್ದ ದಿವಂಗತ ಎನ್.ಟಿ. ರಾಮರಾವ್ ಅವರಿಗೂ ರಘುಪತಿ ಉತ್ತಮ ಸ್ನೇಹಿತರಾಗಿದ್ದರು. ರಘುಪತಿ ನಿಧನಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.
29 ವರ್ಷಗಳ ಬಳಿಕ ಪಿಯು ಪರೀಕ್ಷೆ ಬರೆದ ಶಾಸಕರ ಪತ್ನಿ ಫಸ್ಟ್​ ಕ್ಲಾಸ್​ನಲ್ಲಿ ಪಾಸ್

ಪತಿಗೆ ‘ಬ್ಯಾಡ್​ ನ್ಯೂಸ್​’ ಕೊಟ್ಟ ಪತ್ನಿ ; ಒಂದೂವರೆ ತಿಂಗಳ ನವವಿವಾಹಿತೆ 4 ತಿಂಗಳ ಗರ್ಭಿಣಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
