ಬೆಂಗಳೂರು:ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ವಿಧಾನಸಭೆಯಲ್ಲಿ ವಿಧೇಯಕದ ಪ್ರತಿ ಹರಿದು ಎಸೆದು ಸಭಾತ್ಯಾಗ ಮಾಡಿದರು. ಈ ನಡುವೆ, ರೈತರು ಹಾಗೂ ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಸರ್ಕಾರ ಹಿಂದಿದ್ದ ಯುನಿಟ್​ಗಳನ್ನು ಹಾಗೆಯೇ ಉಳಿಸಿಕೊಳ್ಳುವ ಭರವಸೆ ನೀಡುವ ಮೂಲಕ ತಿದ್ದುಪಡಿ ಕಾಯ್ದೆಗೆ ಅಂಗೀಕಾರ ಪಡೆಯಿತು.
ಕಾಯ್ದೆ ಜಾರಿ ಬಗ್ಗೆ ಸದನದ ಹೊರಗೆ ರೈತ ಸಂಘಟನೆಗಳು, ಒಳಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹಿಂದೆ ಇದ್ದಂತೆಯೇ 5 ಜನರ ಒಳಗಿನ ಒಂದು ಕುಟುಂಬಕ್ಕಿದ್ದ 10 ಯುನಿಟ್ (54 ಎಕರೆ) ಹಾಗೂ 5ಕ್ಕಿಂತ ಹೆಚ್ಚು ಜನರಿರುವ ಕುಟುಂಬಕ್ಕೆ 20 ಯುನಿಟ್(108 ಎಕರೆ) ಖರೀದಿಗೆ ಮಿತಿಗೊಳಿಸಿ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದಾಗಿ ಸರ್ಕಾರ ಸ್ಪಷ್ಟಪಡಿಸಿತು. ಕಾಯ್ದೆ ವಿರೋಧಿಸಿದ ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಕಂದಾಯ ಸಚಿವ ಆರ್.ಅಶೋಕ್, ಕಾಯ್ದೆ ಇತಿಹಾಸ ಕೆದಕಿ ಕಾಂಗ್ರೆಸ್​ನ ಘಟಾನುಘಟಿ ನಾಯಕರ ಬಣ್ಣ ಬಯಲು ಮಾಡಿದರು. ಈ ಮಧ್ಯೆ, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ನಡೆದು ರೈತ ವಿರೋಧಿ ಬಿಜೆಪಿಗೆ ಧಿಕ್ಕಾರವೆಂದು ಕೈ ಸದಸ್ಯರು ಘೊಷಣೆ ಹಾಕಿದರೆ, ಅದಕ್ಕೆ ಪ್ರತಿಯಾಗಿ ಬಿಜೆಪಿಗರು ದೇಶ ವಿರೋಧಿ ಕಾಂಗ್ರೆಸ್​ಗೆ ಧಿಕ್ಕಾರ ಕೂಗಿದರು.
ಕಾಯ್ದೆ ತಂದದ್ದು ನಾವಲ್ಲ:ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ನಾವು ತಂದದ್ದು ಎಂಬ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಇದು ನಾವು ತಂದದ್ದಲ್ಲ. 2014ರಲ್ಲಿ ಅಂದಿನ ಸರ್ಕಾರ ಕಾಯ್ದೆಯ ಕಲಂ 79ಎ ಮತ್ತು ಬಿಗೆ ತಿದ್ದುಪಡಿ ತರುವ ಹಿನ್ನೆಲೆಯಲ್ಲಿ ಸಂಪುಟ ಉಪಸಮಿತಿ ರಚಿಸಿದ್ದರು. ಈ ಸಮಿತಿಯು ಭೂ ಸುಧಾರಣಾ ಕಾಯ್ದೆ ಕಾಲಕ್ರಮೇಣ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಪ್ರಾಯೋಗಿಕವಾಗಿ ಅನುಷ್ಠಾನ ಗೊಳಿಸುವುದು ಕಷ್ಟ ಸಾಧ್ಯ. ಹಾಗಾಗಿ 79 ಎ ಮತ್ತು ಬಿ ಕಲಂಗಳಿಗೆ ತಿದ್ದುಪಡಿ ತರುವುದು ಅವಶ್ಯ ಎಂದು ಶಿಫಾರಸು ಮಾಡಿತ್ತು ಎಂದರು. ಆಗ ಕೆಲ ಕಾಂಗ್ರೆಸ್ ಸದಸ್ಯರು ‘ಹೋ..’ ಎಂದು ಸರ್ಕಾರದ ವಿರುದ್ಧ ಕೂಗಿದರು.ಮಧ್ಯ ಪ್ರವೇಶಿಸಿದ ಸಚಿವ ಸಿ.ಟಿ.ರವಿ. ಕಾಂಗ್ರೆಸ್​ನವರ ನಾಟಕ ಬಯಲಾಯಿತು. ಹಾಗಾಗಿ ಸಭಾತ್ಯಾಗ ಮಾಡುತ್ತಿದ್ದಾರೆ. ಇವರು ಹಗಲು ವೇಷಧಾರಿಗಳು ಎಂದು ತಿವಿದರು. ಅದಕ್ಕೆ ಪೂರಕವಾಗಿ ಅಶೋಕ್, ನಾನು ಕೊಟ್ಟ ಒಂದು ಸ್ಯಾಂಪಲ್​ಗೆ ಇವರಿಗೆ ಉರಿ ಬಿದ್ದಿದೆ. ಕಾಂಗ್ರೆಸ್​ನವರದ್ದು ಕಪಟ ನಾಟಕ. ಅವರ ಬಾಳೇ ಅಂತಹದ್ದು. ಕೈಗಾರಿಕೆಗಳಿಗೆ 20 ಯುನಿಟ್ ಇದ್ದುದನ್ನು ಆ.13, 2015ರಲ್ಲಿ 40 ಯುನಿಟ್ ಮಾಡಿದವರು ಅವರೇ ಎಂದು ಹರಿಹಾಯ್ದರು.ಇದನ್ನೂ ಓದಿ:ಕೋವಿಡ್ ರಹಿತ ರೋಗಿಗಳಿಗೆ ಚಿಕಿತ್ಸೆ ಆರಂಭವಾದರೂ ವಿಕ್ಟೋರಿಯಾದತ್ತ ಸುಳಿಯದ ರೋಗಿಗಳು
ಹಿಂದೆ ಇದೇ ವಿಧಾನಸಭೆಯಲ್ಲಿ ವಿಶ್ವನಾಥ ರೆಡ್ಡಿ, ಎಚ್.ಎಸ್.ಸಿದ್ದಪ್ಪ, ಶಿವಾನಂದ ಕೌಜಲಗಿ, ಬಿ.ಎಚ್.ಬನ್ನಿಕೋಡ, ಏಕಾಂತಯ್ಯ, ಪೊ›.ಎಂ.ಡಿ.ನಂಜುಂಡಸ್ವಾಮಿ, 79 ಎ ಮತ್ತು ಬಿಗೆ ತಿದ್ದುಪಡಿ ತರಬೇಕು ಎಂದು ಅಭಿಪ್ರಾಯಪಟ್ಟಿದ್ದರು ಎಂದು ಆರ್.ಅಶೋಕ್ ಸದನದ ದಾಖಲೆಗಳನ್ನು ಓದಿ ಕಿಚಾಯಿಸಿದರು. ಕಾಯ್ದೆ ಕುರಿತು ಡಿ.ಕೆ.ಶಿವಕುಮಾರ್ ಇದೊಂದು ಅಧಿಕಾರಿಗಳು ದುಡ್ಡು ಹೊಡೆಯಲು ತಂದಿರುವ ಕಾಯ್ದೆ. ಅಧಿಕಾರಿಗಳು ದುಡ್ಡು ಹೊಡೆಯುತ್ತಿದ್ದಾರೆಂದು ಅವರ ಪಕ್ಷವೇ ತಂದ ಕಾಯ್ದೆ ವಿರುದ್ಧ ಮಾತನಾಡಿದ್ದರು. ಅಷ್ಟೇ ಅಲ್ಲ, ಬೆಂಗಳೂರನ್ನು ಕಟ್ಟಿದವರು ಕೆಂಪೇಗೌಡರಲ್ಲವಂತೆ. ಖಾಸಗಿ ಡೆವಲಪರ್ಸ್ ಗಳು ಎಂದು ಡಿಕೆಶಿ ಹೇಳಿದ್ದರು. ಈಗ ಈ ಅತಿರಥ ಮಹಾರಥರು ರೈತ ವಿರೋಧಿ ಕಾಯ್ದೆ ಎಂದು ಮಾತನಾಡುತ್ತಿದ್ದಾರೆಂದು ಅಶೋಕ್ ಟೀಕಿಸಿದರು. ಇದನ್ನೂ ಓದಿ:
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಎಸ್​ಸಿ-ಎಸ್​ಟಿ ಜಮೀನಿಗೆ ಯಾವುದೇ ಬಾಧಕವಾಗುವುದಿಲ್ಲ. ಈ ವರ್ಗಗಳ ಒಂದೇಒಂದು ಎಕರೆ ಜಮೀನು ಮಾರಾಟಕ್ಕೂ ಅವಕಾಶ ಕೊಡುವುದಿಲ್ಲ. ಇನ್ನೂ 3 ವರ್ಷ ನಾವೂ ಇರುತ್ತೇವೆ. ನೀವೂ ಇರುತ್ತೀರಿ. ನಮ್ಮ ಮೇಲೆ ನಂಬಿಕೆ ಇಡಿ ಎಂದು ಸಿಎಂ ಯಡಿಯೂರಪ್ಪ ಭರವಸೆ ನೀಡಿದರು. ಬಿಎಸ್​ಪಿಯ ಮಹೇಶ್ ಮತ್ತಿತರರು, ಪರಿಶಿಷ್ಟರಲ್ಲಿ ಶೇ.10 ಮಂದಿ ಮಾತ್ರ ಭೂ ಒಡೆತನ ಹೊಂದಿದ್ದಾರೆ. ಶೇ.95 ಸಣ್ಣ ಮತ್ತು ಅತಿ ಸಣ್ಣ ರೈತರು. ಈ ವರ್ಗಕ್ಕೆ ಅನ್ಯಾಯವಾಗುತ್ತದೆ ಎಂದು ಗಮನ ಸೆಳೆದರು.
ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ 79ಎ, ಬಿ, ಸಿ ಮತ್ತು 80ನೇ ಕಲಂಗಳನ್ನು ರದ್ದುಗೊಳಿಸಿ, ಕಲಂ 63ರಲ್ಲಿ ನಿಗದಿಪಡಿಸಿದ ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸುವ ರಾಜ್ಯ ಸರ್ಕಾರ ನಿಧಾರ ಕೃಷಿ ಕ್ಷೇತ್ರದ ಶವಪೆಟ್ಟಿಗೆಗೆ ಹೊಡೆದ ಕೊನೆ ಮೊಳೆ. ಭೂಗಳ್ಳರನ್ನು ರಕ್ಷಿಸುವುದಕ್ಕಾಗಿಯೇ ಈ ತಿದ್ದುಪಡಿ ತರಲಾಗಿದೆ. ನಮ್ಮ ಹೋರಾಟ ಸದನಕ್ಕೆ ಸೀಮಿತವಲ್ಲ. ಮುಂದೆ ಬೀದಿಗಿಳಿದು ಹೋರಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು.ಇದನ್ನೂ ಓದಿ:ಮತ್ತಷ್ಟು ತಗ್ಗಿತು ಕರೊನಾ ಪರೀಕ್ಷೆ ಖರ್ಚು.. ಕೋವಿಡ್​ ಟೆಸ್ಟ್​ ಬೆಲೆ ಇಳಿಸಿದ ಸರ್ಕಾರ..
ನನಗೆ 2 ಬಾರಿ ಹೃದಯ ಶಸ್ತ್ರಚಿಕಿತ್ಸೆಯಾಗಿದೆ, ಕರೊನಾ ಸಂದರ್ಭದಲ್ಲಿ ವೈದ್ಯರ ಸಲಹೆ ಮೇರೆಗೆ ಕಲಾಪದಲ್ಲಿ ಬರಲು ಸಾಧ್ಯವಾಗಿಲ್ಲ, ಯಾರೂ ಅನ್ಯಥಾ ಭಾವಿಸಬಾರದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಡಿಸಿದರು. ಕೊನೇದಿನ ಭೂಸುಧಾರಣೆ ತಿದ್ದುಪಡಿ ವಿಧೇಯಕ ಬಗ್ಗೆ ಚರ್ಚೆ ಮಾಡಲು ಬಂದಿದ್ದೇನೆ, ಈವರೆಗೂ ಪ್ರತಿ ದಿನ ಕಲಾಪವನ್ನು ವೀಕ್ಷಿಸಿದ್ದೇನೆ ಎಂದರು.
ತೀವ್ರ ವಿರೋಧದ ನಡುವೆಯೂ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅನುಮೋದನೆ ಪಡೆಯುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಸರ್ಕಾರದ ನಿಲುವು ಖಂಡಿಸಿ, ಎಪಿಎಂಸಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಘೊಷಣೆ ಕೂಗಿ ಸಭಾತ್ಯಾಗ ಮಾಡಿದರು. ಅಂತಹ ಸ್ಥಿತಿ ನಮ್ಮ ರಾಜ್ಯದಲ್ಲಿ ತಂದುಕೊಳ್ಳುವುದು ಬೇಡ ಎಂದರು. ಕಾಯ್ದೆ ಮಂಡನೆ ಮಾಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಎಪಿಎಂಸಿ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ವಿಶೇಷ ಕಾಳಜಿ ವಹಿಸಿದೆ. ಅಲ್ಲಿನ ನೌಕರರಿಗೆ ಸರ್ಕಾರದಿಂದ ನೇರ ಸಂಬಳ ನೀಡಲು ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸದನಕ್ಕೆ ಭರವಸೆ ನೀಡಿದರು.
ಸಿದ್ದರಾಮಯ್ಯ ಮಾತಿಗೆ ಸಿಡಿದೆದ್ದ ಸಿಎಂ ಫುಲ್​ ಗರಂ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
