ಬೆಂಗಳೂರು:ವಿಧಾನಸಭೆ ಉಪಚುನಾವಣೆ ಜತೆಗೆ ವಿಧಾನ ಪರಿಷತ್​ಗೆ ನಡೆದಿದ್ದ ಚುನಾವಣೆಗಳಲ್ಲೂ ಬಿಜೆಪಿ ಪಾರಮ್ಯ ಮೆರೆದಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಈಗಾಗಲೇ ಮೂರರಲ್ಲಿ ದಿಗ್ವಿಜಯ ಸಾಧಿಸಿದೆ. ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಸಲೀಸಾಗಿ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ನಿಕಟಪೂರ್ವ ಎಂಎಲ್​ಸಿ ಪ್ರೊ. ಎಸ್.ವಿ. ಸಂಕನೂರ ಅವರು ಪುನರಾಯ್ಕೆಗೊಂಡಿದ್ದಾರೆ.
ನಾಟಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಬೆಂಬಲವನ್ನೂ ಪಡೆದು, ಆ ಪಕ್ಷದ ಅಧಿಕೃತ ಅಭ್ಯರ್ಥಿ ಕಣದಿಂದ ನಿವೃತ್ತಿ ಘೊಷಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಪಕ್ಷೇತರ ಅಭ್ಯರ್ಥಿ ರಾಷ್ಟ್ರೀಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಬಸವರಾಜ ಗುರಿಕಾರಗೆ 6,188 ಮತಗಳು ಮಾತ್ರ ಪ್ರಾಪ್ತವಾಗಿವೆ. ಧಾರವಾಡ, ಉತ್ತರ ಕನ್ನಡ, ಹಾವೇರಿ, ಗದಗ ಜಿಲ್ಲೆಗಳನ್ನು ಒಳಗೊಂಡ ಈ ಕ್ಷೇತ್ರಕ್ಕೆ ಅ. 28ರಂದು ಚುನಾವಣೆ ನಡೆದಿತ್ತು. ಮಂಗಳವಾರ ಬೆಳಗ್ಗೆಯಿಂದ ಧಾರವಾಡದ ಕೃಷಿ ವಿವಿ ಆವರಣದಲ್ಲಿ ಮತ ಎಣಿಕೆ ನಡೆಯಿತು.
ಅಭ್ಯರ್ಥಿಗಳು ಪಡೆದ ಮತ ವಿವರಪ್ರೊ. ಸಂಕನೂರ (ಬಿಜೆಪಿ) 23,857ಕುಬೇರಪ್ಪ (ಕಾಂಗ್ರೆಸ್ )12,448ಬಸವರಾಜ ಗುರಿಕಾರ (ಪಕ್ಷೇತರ) 6,188ಚಲಾವಣೆಯಾಗಿದ್ದ ಮತ 52,041ತಿರಸ್ಕೃತಗೊಂಡ ಮತಗಳು: 8772
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದ ಪುಟ್ಟಣ್ಣ ನಾಲ್ಕನೇ ಬಾರಿ ಜಯಭೇರಿ ಬಾರಿಸಿದ್ದಾರೆ. ಮೂರು ಬಾರಿ ಜೆಡಿಎಸ್​ನಿಂದ ಗೆದ್ದಿದ್ದ ಪುಟ್ಟಣ್ಣ ಈ ಬಾರಿ ಬಿಜೆಪಿಗೆ ಜಿಗಿದು ವಿಜಯ ದುಂದುಭಿ ಮೊಳಗಿಸಿದ್ದಾರೆ. ಮೂರು ಬಾರಿ ಜೆಡಿಎಸ್​ನಿಂದ ಗೆದ್ದರೂ ಆ ಮತಗಳನ್ನು ಬಿಜೆಪಿಗೆ ಪರಿವರ್ತನೆ ಮಾಡಿಕೊಳ್ಳುವ ತಂತ್ರಗಾರಿಕೆಯಲ್ಲಿ ಪುಟ್ಟಣ್ಣ ಯಶಸ್ವಿಯಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಜೆಡಿಎಸ್ ಇಲ್ಲಿ ಕಳಪೆ ಪ್ರದರ್ಶನವೇನೂ ನೀಡಿಲ್ಲ. ಈ ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯ ಇನ್ನೂ ಬಲವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ಬಿಜೆಪಿಯ ಪುಟ್ಟಣ್ಣ 7335 ಮತ ಪಡೆದರೆ, ಜೆಡಿಎಸ್​ನ ಎ.ಪಿ.ರಂಗನಾಥ್ 5107 ಮತ ಪಡೆದು ಎರಡನೇ ಸ್ಥಾನದಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಲ್ಲದೆ, ಹೀನಾಯ ಸೋಲು ಕಂಡಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರವೀಣ್ ಪೀಟರ್ ಕೇವಲ 782 ಮತ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಮಾಡಿದ ಪ್ರಯತ್ನವೆಲ್ಲ ಹೊಳೆಯಲ್ಲಿ ಹುಣುಸೇಹಣ್ಣು ತೊಳೆದಂತಾಗಿದೆ.
ಅಭ್ಯರ್ಥಿಗಳು ಪಡೆದ ಮತ ವಿವರ:ಪುಟ್ಟಣ್ಣ(ಬಿಜೆಪಿ)- 7335ಎ.ಪಿ.ರಂಗನಾಥ್(ಜೆಡಿಎಸ್)- 5107ಪ್ರವೀಣ್ ಪೀಟರ್(ಕಾಂಗ್ರೆಸ್)- 782ಒಟ್ಟು ಚಲಾವಣೆಗೊಂಡ ಮತಗಳು: 14,538ತಿರಸ್ಕೃತಗೊಂಡ ಮತಗಳು: 1251
ತೀವ್ರ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್​ನ ಈಶಾನ್ಯ ಶಿಕ್ಷಕರ ಕ್ಷೇತ್ರವನ್ನು ವಶಪಡಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಪಕ್ಷದ ಅಭ್ಯರ್ಥಿ ಶಶೀಲ್ ಜಿ.ನಮೋಶಿ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್​ನ ಹಾಲಿ ಸದಸ್ಯ ಶರಣಪ್ಪ ಮಟ್ಟೂರ್ ಅವರನ್ನು ಸೋಲಿಸಿ 4ನೇ ಬಾರಿ ವಿಧಾನ ಪರಿಷತ್ ಪ್ರವೇಶಿಸಿದರು. ಕ್ಷೇತ್ರದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಮತದಾರ ಶಿಕ್ಷಕರು ತಮ್ಮ ಹಕ್ಕನ್ನು ಚಲಾಯಿಸಿದ್ದರು. ಮೊದಲ ಪ್ರಾಶಸ್ಱದಲ್ಲೇ ಗೆಲುವು ಸಿಗಬಹುದು ಎಂಬ ಬಿಜೆಪಿ ನಿರೀಕ್ಷೆ ಹುಸಿಯಾಯಿತು. ಆದರೆ ಮೊದಲ ಪ್ರಾಶಸ್ಱದಲ್ಲಿ ನಮೋಶಿಯವರಿಗೆ ಉತ್ತಮ ಲೀಡ್ ಬಂದಿದ್ದರಿಂದ ಮುಂದಿನ ಪ್ರಾಶಸ್ಱದಲ್ಲಿ ಗೆಲುವಿನ ಹಾದಿ ಸುಗಮವಾಯಿತು.
ಶಶೀಲ್ ನಮೋಶಿ (ಬಿಜೆಪಿ 10210ಮಟ್ಟೂರ್ (ಕಾಂಗ್ರೆಸ್) 7072ಜೆಡಿಎಸ್​ನ ತಿಮ್ಮಯ್ಯ ಪುರ್ಲೆ 3812ಚಲಾವಣೆಯಾದ ಮತ -21437ತಿರಸ್ಕಾರಗೊಂಡ ಮತ- 1844
ಉಪಚುನಾವಣೆಯಲ್ಲೂ ಬಿಜೆಪಿ ಜಯಭೇರಿ: ಮಧ್ಯಪ್ರದೇಶದಲ್ಲಿ ಚೌಹಾಣ್ ಸರ್ಕಾರ ಭದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
