ಬೆಂಗಳೂರು:ವಿಧಾನಸಭೆಯಿಂದ ಆಯ್ಕೆಯಾದ 11 ಹಾಗೂ ಪದವೀಧರ, ಶಿಕ್ಷಕರ ಕ್ಷೇತ್ರಗಳಿಂದ ಆರು ಸೇರಿ ಒಟ್ಟು 17 ಜನರು ವಿಧಾನ ಪರಿಷತ್ ನೂತನ ಸದಸ್ಯರಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಸಮಕ್ಷಮ ಈ ಕಾರ್ಯಕ್ರಮ ನಡೆಯಿತು.
ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಆಯ್ಕೆಯಾದ ಎನ್.ಎಸ್.ಬೋಸರಾಜು, ಕೆ.ಗೋವಿಂದರಾಜು, ಐವನ್ ಡಿ.ಸೋಜಾ, ಜಗದೇವ ಗುತ್ತೇದಾರ್, ಟಿ.ಎನ್.ಜವರಾಯಿಗೌಡ, ಬಲ್ಕಿಸ್ ಬಾನು, ಮಾರುತಿರಾವ್ ಮುಳೆ, ಡಾ.ಯತೀಂದ್ರ.ಎಸ್, ಸಿ.ಟಿ.ರವಿ, ಎನ್.ರವಿಕುಮಾರ್, ಎ.ವಸಂತಕುಮಾರ್, ಎನ್.ರವಿಕುಮಾರ್, ಹಾಗೂ ಪದವೀಧರ, ಶಿಕ್ಷಕರ ಕ್ಷೇತ್ರಗಳಿಂದ ವಿಧಾನ ಪರಿಷತ್ ಗೆ ಆಯ್ಕೆಯಾದ ಡಾ.ಚಂದ್ರಶೇಖರ ಪಾಟೀಲ, ಡಾ.ಧನಂಜಯ ಸರ್ಜಿ, ರಾಮೋಜಿಗೌಡ, ಎಸ್.ಎಲ್.ಭೋಜೇಗೌಡ, ಕೆ.ವಿವೇಕಾನಂದ ಮತ್ತು ಡಿ.ಟಿ.ಶ್ರೀನಿವಾಸ ಪ್ರಮಾಣವಚನ ಸ್ವೀಕರಿಸಿದರು.
ವಿಧಾನ ಪರಿಷತ್ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ಬಿಜೆಪಿಯ ಸಿ.ಟಿ.ರವಿ ಅವರು ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲುಮುಟ್ಟಿ ನಮಸ್ಕರಿಸಿದರು. ಇದೇ ವೇಳೆ ಸಿ.ಟಿ.ರವಿಗೆ ಸಿದ್ದರಾಮಯ್ಯ ಪುಷ್ಪಗುಚ್ಛ ನೀಡಿ ಕಿವಿಹಿಂಡಿ ಬೆನ್ನುತಟ್ಟಿದರು. ಪಕ್ಕದಲ್ಲಿ ನಿಂತಿದ್ದ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಚ್.ಕೆ.ಪಾಟೀಲ ನಸುನಕ್ಕರು.
ಆಯಾ ಸದಸ್ಯರ ಬೆಂಬಲಿಗರ ಜಯಘೋಷಗಳು, ಸಿಳ್ಳು, ಚಪ್ಪಾಳೆ, ಕೇಕೆಗಳು ಗಡಚಿಕ್ಕಿದವು. ಬಿಜೆಪಿ ಸದಸ್ಯರು ಪ್ರಮಾಣವಚನ ಸ್ವೀಕರಿಸುವಾಗ ಭಾರತ ಮಾತಾ‌ ಕೀ ಜೈ, ಜೈಶ್ರೀರಾಮ, ಛತ್ರಪತಿ ಶಿವಾಜಿ ಮಹಾರಾಜ ಪರ ಘೋಷಣೆಗಳು ಮೊಳಗಿದವು.
ನೂತನ ಸದಸ್ಯರು ಭಗವಂತ, ದೇವರು, ಅಲ್ಲಾ, ಸಂವಿಧಾನ ಸತ್ಯ ನಿಷ್ಠೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಸಿಎಂ ಕಾಲುಮುಟ್ಟಿ ನಮಸ್ಕರಿಸಿದರು. ಬಹುತೇಕ ಸದಸ್ಯರ ಕುಟುಂಬ ವರ್ಗದವರು ಆಗಮಿಸಿದ್ದರು.
ಪ್ರಮಾಣವಚನ ಕಾರ್ಯಕ್ರಮದ ಬಳಿಕ ಮಾಲಾರ್ಪಣೆ, ಶಾಲು ಹೊದಿಸಿ ಸನ್ಮಾನ, ಅಭಿನಂದನೆ ಸಲ್ಲಿಸಲು ಬೆಂಬಲಿಗರು, ಅಭಿಮಾನಿಗಳು ಮುಗಿಬಿದ್ದ ಕಾರಣ ಸ್ವಲ್ಪಹೊತ್ತು ನೂಕುನುಗ್ಗಲು ಉಂಟಾಯಿತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
