ಬೆಂಗಳೂರು:ಸರ್ಕಾರದ ವಿರುದ್ಧ ಬಿ.ಕೆ.ಹರಿಪ್ರಸಾದ್ ದನಿ ಎತ್ತಿದ ಪ್ರಕರಣ, 30 ಶಾಸಕರು ಸಚಿವರ ವಿರುದ್ಧ ಸಹಿ ಸಂಗ್ರಹಿಸಿದ ಬೆಳವಣಿಗೆಯ ಬೆನ್ನಲ್ಲೇ ಗುರುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆಯು ಸಂಜೆ 6.30 ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ನಡೆಯಲಿದ್ದು, ಒಗ್ಗಟ್ಟಾಗಿ ತಮ್ಮ ದುಮ್ಮಾನ ಹೇಳಿಕೊಳ್ಳಲು ಶಾಸಕರೂ ಸಹ ತಯಾರಾಗಿದ್ದಾರೆ.
ಪಕ್ಷವು ಲೋಕಸಭೆ ಚುನಾವಣೆಗೆ ತಯಾರಿಗೆ ಗುರಿಗಳನ್ನು ನೀಡಲು, ಕೇಂದ್ರ ವಿರುದ್ಧ ನಿರಂತರ ಹೋರಾಟ ಸಂಘಟಿಸಲು ಶಾಸಕರಿಗೆ ಸೂಚನೆಗಳನ್ನು ನೀಡಲಿದೆ. ಇದೇ ಕಾರಣಕ್ಕೆ ಖುದ್ದು ಮಲ್ಲಿಕಾರ್ಜುನ ಖರ್ಗೆಯವರೇ ಸಭೆಗೆ ಆಗಮಿಸುತ್ತಿದ್ದಾರೆ.ಇತ್ತ ಶಾಸಕರು ಕಳೆದ ಎರಡು ತಿಂಗಳಲ್ಲಿ ತಾವು ಅನುಭವಿಸಿದ ಸಂಕಟವನ್ನು ಸರ್ಕಾರ ಹಾಗೂ ಪಕ್ಷದ ಗಮನಕ್ಕೆ ತರಲು ಸಂಘಟಿತರಾಗಿದ್ದಾರೆ.
ಸರ್ಕಾರಿ ನೌಕರರ ವರ್ಗಾವಣೆ ವಿಷಯದಲ್ಲಿ ಹಲವು ಸಚಿವರು ಶಾಸಕರ ಅಭಿಪ್ರಾಯವನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಅನುದಾನ ವಿಷಯದಲ್ಲಿ ಸಚಿವರು ಶಾಸಕರ ಮನವಿಗಳಿಗೆ ಸ್ಪಂದಿಸುತ್ತಿಲ್ಲ, ಗ್ಯಾರೆಂಟಿ ಸರ್ಕಾರ ಹಾಗೂ ಪಕ್ಷದ ವರ್ಚಸ್ಸು ಹೆಚ್ಚಿಸಬಹುದು. ಆದರೆ, ಜನರ ಬೇಡಿಕೆ ಈಡೇರಿಸಲು ವಿಶೇಷ ಅನುದಾನ ಕೊಡಲೇಬೇಕು , ಪಕ್ಷಕ್ಕಾಗಿ ಹಲವು ವರ್ಷದಿಂದ ದುಡಿದು 3-4 ಬಾರಿ ಗೆದ್ದ ಶಾಸಕರಿಗೆ ಹೊಸ ಸಚಿವರು ಪ್ರಾಮುಖ್ಯತೆ ಕೊಡುತ್ತಿಲ್ಲ ಎಂಬ ಸಾಮಾನ್ಯ ಅಭಿಪ್ರಾಯ ಹೊಂದಿರುವ ಹಿರಿಯ ಶಾಸಕರು ಒಟ್ಟಾಗಿ ಅಭಿಪ್ರಾಯ ತಿಳಿಸಲು ತೀರ್ಮಾನಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಇದೇ ವೇಳೆ ನಿಗಮ ಮಂಡಳಿಗೆ ನೇಮಕ ಪ್ರಕ್ರಿಯೆ ನಡೆಸುವುದು, ಸ್ಥಳೀಯ ಸಂಸ್ಥೆ ಚುನಾವಣೆ ಕುರಿತಂತೆಯೂ ಚರ್ಚೆಯಾಗಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಸಿಂಗಾಪುರದಿಂದ ಸರ್ಕಾರವನ್ನು ಅಸ್ಥಿರತೆಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂಬ ಹೇಳಿಕೆ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಸಭೆಯಲ್ಲಿ ಇನ್ನಷ್ಟು ವಿಚಾರವನ್ನು ಬಹಿರಂಗ ಮಾಡುವ ಸಾಧ್ಯತೆಯೂ ಇದೆ. ಇಂತಹ ಹೇಳಿಕೆ ನೀಡಲು ಕಾರಣ ಏನೆಂಬುದನ್ನು ತಿಳಿಸಲು ಆಡಳಿತ ಪಕ್ಷದ ಶಾಸಕರೂ ಸಹ ತುದಿಗಾಲಲ್ಲಿ ನಿಂತಿದ್ದಾರೆ.
ಅನುದಾನ ಬಿಡುಗಡೆ ವಿಷಯದಲ್ಲಿ ಸರ್ಕಾರದ ಕಡೆಯಿಂದ ಕೂಡ ಸಮರ್ಥನೆಯೂ ಸಿದ್ಧವಾಗಿದೆ. ಶಾಸಕರು ನೂರಾರು ಕೋಟಿಗೆ ಮನವಿ ಪತ್ರ ಸಲ್ಲಿಸಿದ್ದು, ಸಣ್ಣ ಮೊತ್ತವನ್ನು ಹೊಂದಿಸುವುದೂ ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ಇದೆ. ಗ್ಯಾರೆಂಟಿ ಯೋಜನೆ ಜಾರಿ ಸುಗಮವಾಗಿ ಸಾಗಿದರೆ ಮುಂದಿನ ವರ್ಷ ಆದ್ಯತೆ ಮೇಲೆ ಅನುದಾನ ಕೊಡಲಾಗುತ್ತದೆ ಎಂಬ ಭರವಸೆಯನ್ನು ಸರ್ಕಾರದ ಕಡೆಯಿಂದ ನೀಡಲು ಉದ್ದೇಶಿಸಲಾಗಿದೆ. ಅಷ್ಟೇ ಅಲ್ಲದೇ, ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ಶಾಸಕರನ್ನು ಎದುರಿಸಲು ಸಂಪುಟ ಸದಸ್ಯರು ತಯಾರಿ ಮಾಡಿಕೊಳ್ಳಲಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 − four =
Remember me
