| ಡಿ.ಪಿ.ಮಹೇಶ್ ಯಳಂದೂರು
ಗಣ್ಯರಿಗೆ ದೇಶದ ಉನ್ನತ ಮಟ್ಟದ ‘ಜಡ್ ಪ್ಲಸ್’ ಭದ್ರತೆ ನೀಡುವುದನ್ನು ನೋಡಿದ್ದೇವೆ. ಇದೇ ಮಾದರಿಯಲ್ಲಿ ಇಲ್ಲೊಂದು ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಭದ್ರತೆ ಒದಗಿಸಲಾಗುತ್ತಿದೆ..! ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬಿಗಿಭದ್ರತೆ ಒದಗಿಸಿದ್ದಾರೆ. ಹನೂರಿನ ಕಗ್ಗಲಿಗುಂದಿಯಲ್ಲಿ 6 ವರ್ಷದ ಬಾಲಕಿ ಸುಶೀಲಾ ಚಿರತೆ ದಾಳಿಯಿಂದ ಮೃತಪಟ್ಟಿದ್ದಳು. ಎರಡ್ಮೂರು ದಿನಗಳ ಹಿಂದೆ ಮಲ್ಲಿಗೆಹಳ್ಳಿಯ ಹರ್ಷ(8) ಎಂಬ ಬಾಲಕನ ಮೇಲೆ ಚಿರತೆ ದಾಳಿ ಮಾಡಿತ್ತು. ಗಾಯಗೊಂಡಿರುವ ಬಾಲಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಎರಡೂ ಅವಘಡಗಳು ಮಕ್ಕಳಲ್ಲಿ ಭೀತಿ ಸೃಷ್ಟಿಸಿವೆ.
ತಾಲೂಕಿನ ಕೆಸ್ತೂರಿನ ಶಾಲೆಯಲ್ಲಿ 624, ಮಲ್ಲಿಗೆಹಳ್ಳಿಯಲ್ಲಿ 105, ಹಾಗೂ ಕಟ್ನವಾಡಿಯಲ್ಲಿ 50, ಕಿನಕಹಳ್ಳಿಯಲ್ಲಿ 87, ಕೆ.ಹೊಸೂರಿನಲ್ಲಿ 26 ಮಕ್ಕಳು ಓದುತ್ತಿದ್ದಾರೆ. ಇಷ್ಟೂ ಗ್ರಾಮಗಳ ಮಕ್ಕಳು ಚಿರತೆ ಭಯದಲ್ಲಿ ಇದ್ದಾರೆ. ಬಾಲಕನ ಮೇಲೆ ಚಿರತೆ ದಾಳಿ ನಡೆದಿದ್ದ ಮಲ್ಲಿಗೆಹಳ್ಳಿ ಗ್ರಾಮದ ಮಕ್ಕಳಿಗೆ ಅರಣ್ಯ ಇಲಾಖೆ ಭದ್ರತೆ ನೀಡಿದೆ. ಉಳಿದಂತೆ ಕಟ್ನವಾಡಿ, ಕೆ.ಹೊಸೂರು, ಕಿನಕಹಳ್ಳಿ, ಕೆಸ್ತೂರಿನಲ್ಲಿ ಮಕ್ಕಳ ಓಡಾಡುವ ರಸ್ತೆ, ಶಾಲೆ ಸುತ್ತ ಅರಣ್ಯ ಇಲಾಖೆ ಅಧಿಕಾರಿಗಳು ಜೀಪ್​ನಲ್ಲಿ ಗಸ್ತು ತಿರುಗುತ್ತಿದ್ದಾರೆ.
ಚಿರತೆಗೆ ಹೆದರಿ ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಬಾರದು. ಹಾಗಾಗಿ, ಮಲ್ಲಿಗೆಹಳ್ಳಿ ಗ್ರಾಮದ ಮಕ್ಕಳಿಗೆ ಧೈರ್ಯತುಂಬಿ ಭದ್ರತೆ ನೀಡಲಾಗಿದ್ದು, ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಮುಂದುವರಿದಿದೆ.| ಲೋಕೇಶ್​​ಮೂರ್ತಿ, ಆರ್​ಎಫ್​ಒ, ಬಿಆರ್​ಟಿ ಯಳಂದೂರು ವಲಯ
ಒಂಟಿಯಾಗಿ ಓಡಾಡಬೇಡಿ:ಚಿರತೆ ಆತಂಕ ಆವರಿಸಿರುವ ಗ್ರಾಮಗಳಲ್ಲಿ ಮಕ್ಕಳನ್ನು ಒಂಟಿಯಾಗಿ ಓಡಾಡಲು ಬಿಡಬಾರದು, ಮುಂಜಾನೆ ಮತ್ತು ಮುಸ್ಸಂಜೆ ವೇಳೆ ಯಾರೂ ಅಡ್ಡಾಡಬಾರದು ಎಂದು ಚಿರತೆ ಕಾರ್ಯಪಡೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಬಯಲುಶೌಚಕ್ಕೆ ಹೋಗಬಾರದು, ಚಿರತೆ ಕಂಡುಬಂದಲ್ಲಿ ಮೊಬೈಲ್​ನಲ್ಲಿ ಸೆರೆ ಹಿಡಿಯುವ ಹಾಗೂ ಸೆಲ್ಪೀ ತೆಗೆದುಕೊಳ್ಳುವ ಹುಚ್ಚಾಟ ಮಾಡದೆ, ಕೂಡಲೇ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಯಳಂದೂರು ಡಿಆರ್​ಎಫ್ ಪುನೀತ್, ವರುಣ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + twelve =
Remember me
