ರಾಯಚೂರು:ಕಾಡುಪ್ರಾಣಿಗಳು ನಾಡಿಗೆ ಬರುವುದು ಹೊಸದೇನಲ್ಲ. ನಗರೀಕರಣ ಕಾಡುಗಳಿಗೂ ವ್ಯಾಪಿಸಲಾರಂಭಿಸಿದಂತೆ ಕಾಡುಪ್ರಾಣಿಗಳು ನಾಡಿಗೂ ಬರುವುದು ಕಾಣಲಾರಂಭಿಸಿದೆ. ಆದರೆ ಸಾಮಾನ್ಯವಾಗಿ ರಾತ್ರಿ ಹೊತ್ತಲ್ಲಿ ಜನವಸತಿಯ ಪ್ರದೇಶಕ್ಕೆ ಬಂದು ಹೋಗುವ ಕಾಡುಪ್ರಾಣಿಗಳು ಇದೀಗ ಹಗಲಲ್ಲಿ ಅದೂ ಜನರೆದುರೇ ಬಂದು ಹೋಗುತ್ತಿರುವುದು ಆತಂಕ ಉಂಟು ಮಾಡಲಾರಂಭಿಸಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ನೀರಮಾನ್ವಿ ಗುಡ್ಡದಲ್ಲಿ ಚಿರತೆಯೊಂದು ಹಗಲಿನಲ್ಲೇ ಪ್ರತ್ಯಕ್ಷವಾಗಿದೆ. ಮಾತ್ರವಲ್ಲ, ಗ್ರಾಮಸ್ಥರ ಎದುರೇ ಕುರಿಯೊಂದನ್ನು ಕಚ್ಚಿಕೊಂಡು ಹೋಗಿದೆ. ಇಂದು ಮಧ್ಯಾಹ್ನ 1.30ರ ಸುಮಾರಿಗೆ ಈ ಪ್ರಕರಣ ನಡೆದಿದೆ.
ರಮೇಶ್ ಎಂಬವರಿಗೆ ಸೇರಿದ ಕುರಿ ಇದಾಗಿದ್ದು, ಕಣ್ಣೆದುರೇ ಕುರಿಯನ್ನು ಕೊಂಡೊಯ್ದಿರುವುದು ಜನರಲ್ಲ ಆತಂಕ ಮೂಡಿಸಿದೆ. ಕಳೆದ ಆರು ತಿಂಗಳಿಂದ ನಾಲ್ಕು ಚಿರತೆಗಳು ಕಾಣಿಸಿಕೊಳ್ಳುತ್ತಿದ್ದು, ಬೆಟ್ಟದಲ್ಲಿ ನಾಯಿ, ಕುರಿ, ನವಿಲುಗಳನ್ನ ಕೊಂದು ತಿಂದು ಹಾಕಿರುವುದು ಗಮನಕ್ಕೆ ಬಂದಿದೆ. ಇನ್ನೊಂದೆಡೆ ಅರಣ್ಯ ಇಲಾಖೆ ಅಧಿಕಾರಿಗಳು ಬೋನುಗಳನ್ನ ಹಾಕಿದ್ದರೂ, ಚಿರತೆಗಳು ಅದಕ್ಕೆ ಬಿದ್ದಿಲ್ಲ. ಚಿರತೆ ಹಿಡಿಯದ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.vijayavani.net/college-lecturer-suicide-at-udupi-district/
ಆ್ಯಂಬುಲೆನ್ಸ್ ಅಪಘಾತ ಪ್ರಕರಣ; ಗ್ರಾಮಸ್ಥರಿಂದ ಸಾಮೂಹಿಕವಾಗಿ ನಾಲ್ವರ ಅಂತಿಮಸಂಸ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − thirteen =
Remember me
