ಬೆಂಗಳೂರು:ಒಂದು ವಾರದಿಂದ ಮತ್ತೆ ಮತ್ತೆ ಕಾಣಿಸಿಕೊಂಡು ಬೇಗೂರು ರಸ್ತೆಯ ನಿವಾಸಿಗಳ ನಿದ್ದೆ ಕೆಡಿಸಿದ್ದ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಜನವರಿ 22 ರಂದು ಬೇಗೂರು ರಸ್ತೆಯಲ್ಲಿರುವ ಪ್ರೆಸ್ಟೀಜ್ ಸಾಂಗ್ ಅಪಾರ್ಟ್​ಮೆಂಟ್​ ಆವರಣದಲ್ಲಿ ಸಿಸಿಟಿವಿಯಲ್ಲಿ ಚಿರತೆಯೊಂದರ ಓಡಾಟ ಸೆರೆಯಾಗಿತ್ತು. ಈ ಚಿರತೆಯನ್ನು ಹಿಡಿಯಲು ಕ್ಯಾಮೆರಾ ಟ್ರ್ಯಾಪ್​ ಮತ್ತು ಹಲವು ಕಬ್ಬಿಣದ ಗೂಡುಗಳನ್ನು ಇರಿಸಿದರೂ ಚಿರತೆ ಪತ್ತೆಯಾಗಿರಲಿಲ್ಲ.
ಬೇಗೂರು ರಸ್ತೆಯ ಅಪಾರ್ಟ್​ಮೆಂಟ್​ನ ಬಳಿ ಕಾಣಿಸಿಕೊಂಡ ಚಿರತೆ#Leopard#BegurRoadpic.twitter.com/NpyPj3O5Or— Vijayavani (@VVani4U)February 1, 2021
ಬೇಗೂರು ರಸ್ತೆಯ ಅಪಾರ್ಟ್​ಮೆಂಟ್​ನ ಬಳಿ ಕಾಣಿಸಿಕೊಂಡ ಚಿರತೆ#Leopard#BegurRoadpic.twitter.com/NpyPj3O5Or
ಸಿಸಿಟಿವಿ ಚಿತ್ರಗಳಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆಯ ಹೆಜ್ಜೆಗುರುತುಗಳೂ ಅಲ್ಲಲ್ಲಿ ಕಾಣುತ್ತಿದ್ದವು. ಈ ಬಗ್ಗೆ ನಿವಾಸಿಗಳಲ್ಲಿ ಬಹಳ ಆತಂಕ ಉಂಟಾಗಿತ್ತು. ಭಾನುವಾರ ರಾತ್ರಿ ಕೂಡ ಸ್ಥಳೀಯರ ಕಣ್ಣಿಗೆ ಈ ಚಿರತೆ ಕಾಣಿಸಿಕೊಂಡಿತ್ತು.
ಸೋಮವಾರ ಬೆಳಿಗ್ಗೆ 6.30 ರ ಹೊತ್ತಿಗೆ ಅಪಾರ್ಟ್​ಮೆಂಟಿನ ಹಿಂಭಾಗದಲ್ಲಿ ಚಿರತೆಯನ್ನು ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಆಹಾರದ ಹುಡುಕಾಟದಲ್ಲಿ ಜನವಾಸ ಪ್ರದೇಶಕ್ಕೆ ಬಂದಿದ್ದ ಈ ಚಿರತೆಯನ್ನು ಬನ್ನೆರುಘಟ್ಟ ಅರಣ್ಯದಲ್ಲಿ ಬಿಡಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)
14 ತಿಂಗಳಿಂದ ಕಾಣೆಯಾಗಿದ್ದವ ಬಾವಿಯಲ್ಲಿ ಪ್ರತ್ಯಕ್ಷನಾದ !
ಕೇಂದ್ರ ಬಜೆಟ್​| ಜನ ಸಾಮಾನ್ಯರಿಗೆ ಯಾವುದು ಅಗ್ಗ? ಯಾವುದು ದುಬಾರಿ?


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
