ಭಟ್ಕಳ:ಚಿರತೆಯೊಂದರ ಶವ ಭಟ್ಕಳ ತಾಲೂಕಿನ ಬೆಳಕೆ ಪಂಚಾಯಿತಿ ವ್ಯಾಪ್ತಿಯ ಅರುಕಿ ರೋಡ್‌ನಲ್ಲಿ ಸೋಮವಾರ ಪತ್ತೆಯಾಗಿದೆ. ಸುಮಾರು ಹತ್ತು ವರ್ಷ ವಯಸ್ಸಿನ ಚಿರತೆ ಇದಾಗಿರಬಹುದು ಎಂದು ಅಂದಾಜಿಸಲಾಗಿದೆ. ಚಿರತೆಯ ಬಾಲಕ್ಕೆ ವಿದ್ಯುತ್ ತಂತಿ ತಗುಲಿರುವ ಗುರುತು ಪತ್ತೆಯಾಗಿದ್ದು, ಎತ್ತರದ ಪ್ರದೇಶದಿಂದ ಧುಮುಕುವ ವೇಳೆ ವಿದ್ಯುತ್ ತಂತಿಯ ಶಾಕ್ ತಗುಲಿರಬಹುದು ಎಂದು ಶಂಕಿಸಲಾಗಿದೆ.
ಆದರೆ ಮೃತ ಚಿರತೆಯ ಉಗುರುಗಳು ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಇದು ನಿಜಕ್ಕೂ ಆಕಸ್ಮಿಕವಾಗಿ ನಡೆದ ಘಟನೆಯೋ ಅಥವಾ ಉಗುರುಗಳಿಗೋಸ್ಕರ ಉದ್ದೇಶಪೂರ್ವಕವಾಗಿ ಚಿರತೆಯನ್ನು ಹತ್ಯೆ ಮಾಡಲಾಗಿದೆಯೋ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿರಿಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು
ಪಶುವೈದ್ಯ ಮಿಥುನ ರಾಜ್ ಅವರು ಘಟನಾ ಸ್ಥಳಕ್ಕೆ ತೆರಳಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ಚಿರತೆಯ ದೇಹದ ಕೆಲ ಭಾಗಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಎಸಿಎಫ್ ಬಾಲಚಂದ್ರ, ಆರ್‌ಎಫ್‌ಒ ಸವಿತಾ ದೇವಾಡಿಗ ಮತ್ತು ಅರಣ್ಯ ಇಲಾಖೆಯ ಇತರ ಕೆಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
ಭಾವಿ ಪತಿಗೆ ತನ್ನ ಮನೆಯಲ್ಲೇ ಮಲಗಲು ಜಾಗ ಕೊಟ್ಟ ಯುವತಿ, ಬೆಳಗ್ಗೆ ಎದ್ದಾಗ ಅಲ್ಲೋಲ-ಕಲ್ಲೋಲ್ಲ​!

ಕನ್ನಡ ಬಿಗ್‌ಬಾಸ್-8ರಲ್ಲಿ ಭಾಗವಹಿಸೋ ಸೆಲೆಬ್ರಿಟಿಗಳು ಯಾರ‌್ಯಾರು? ಇಲ್ಲಿದೆ ವಿವರ…

ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

ಉಮೇಶ್​ ಕತ್ತಿಗೆ ಹಿಗ್ಗಾಮುಗ್ಗಾ ತರಾಟೆ! ಟಿವಿ, ಬೈಕ್‌, ಫ್ರಿಡ್ಜ್‌ ಉಳ್ಳವರು ಓದಲೇಬೇಕಾದ ಸುದ್ದಿ ಇದು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − three =
Remember me
