ಲಾಕ್​ಡೌನ್​ನಿಂದಾಗಿ ಬೆಂಗಳೂರಿನ ಪೌರಕಾರ್ವಿುಕರು, ತ್ಯಾಜ್ಯ ನಿರ್ವಹಣ ಘಟಕ ಹಾಗೂ ಭೂಭರ್ತಿಗಳ ಮೇಲಿನ ಭಾರ ತಗ್ಗಿದೆ.
ಕಳೆದ ತಿಂಗಳ ಹೋಲಿಕೆಯಲ್ಲಿ ಪ್ರತಿದಿನ ಬರೊಬ್ಬರಿ 1 ಸಾವಿರ ಟನ್ ತ್ಯಾಜ್ಯ ಸಂಗ್ರಹ ಕಡಿಮೆಯಾಗಿದ್ದು, ಪ್ರಮುಖವಾಗಿ ಹಸಿ ತ್ಯಾಜ್ಯ ಸಂಗ್ರಹದಲ್ಲಿ ಇಳಿಕೆ ಕಂಡುಬಂದಿದೆ. ಬಿಬಿಎಂಪಿಗೆ ಒಳಪಡುವ 800 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿದಿನ 3.5ರಿಂದ 4 ಸಾವಿರ ಟನ್ (ಟಿಪಿಡಿ) ತ್ಯಾಜ್ಯ ಸಂಗ್ರಹವಾಗುತ್ತದೆ. ತಿಂಗಳ ಸರಾಸರಿಯಲ್ಲಿ ಮೂರೂವರೆ ಸಾವಿರ ಟನ್ ಪ್ರತಿದಿನ ಮನೆಗಳಿಂದ ಸಂಗ್ರಹ ಸಾಗಿಸಲಾಗುತ್ತದೆ. ಸಗಟು ತ್ಯಾಜ್ಯ ಉತ್ಪಾದಕರಾದ ಹೋಟೆಲ್​ಗಳು ಬಂದ್ ಆಗಿರುವುದು ಶೇ.23 ಹಸಿ ತ್ಯಾಜ್ಯ ಇಳಿಯಲು ಕಾರಣವಾಗಿದೆ.
ಪ್ರತಿದಿನ 3,070 ಟನ್ ತ್ಯಾಜ್ಯ:ಮನೆಗಳು ಹಾಗೂ ಉದ್ಯಮದಿಂದ ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ವಿಂಗಡಿಸಿ ನೀಡಲು ತಿಳಿಸಲಾಗಿದೆ. ಉದ್ಯಮಗಳು, ಅಪಾರ್ಟ್​ವೆುಂಟ್​ಗಳು ಸಾಕಷ್ಟು ಪಾಲನೆ ಮಾಡುತ್ತಿವೆಯಾದರೂ ವೈಯಕ್ತಿಕ ಮನೆಗಳಲ್ಲಿ ಬಹುತೇಕರು ಹಸಿ ಹಾಗೂ ಒಣ ಕಸವನ್ನು ಒಟ್ಟಿಗೆ ನೀಡುತ್ತಾರೆ. ಮೂಲದಲ್ಲೇ ಪ್ರತ್ಯೇಕಿಸಲಾದ ಹಸಿ ತ್ಯಾಜ್ಯವನ್ನು ಬಿಬಿಎಂಪಿಯ 7 ಸಂಸ್ಕರಣ ಘಟಕಗಳಿಗೆ ಕಳಿಸಿಕೊಡಲಾಗುತ್ತದೆ. ಅಲ್ಲಿ ಕಾಂಪೋಸ್ಟ್ ತಯಾರಿಸಿ ಮಾರಲಾಗುತ್ತದೆ. ಈ ಪ್ರಮಾಣ ಪ್ರತಿದಿನ 500-600 ಟನ್ ಇರುತ್ತದೆ. ಆದರೆ ಬೇರ್ಪಡಿಸಲಾಗದ ಹಸಿ ಹಾಗೂ ಒಣ ತ್ಯಾಜ್ಯವನ್ನು ಸಂಸ್ಕರಣೆ ಮಾಡಲು ಸಾಧ್ಯವಾಗದೆ ನಗರದ ಹೊರವಲಯದಲ್ಲಿರುವ ಭೂಭರ್ತಿಯಲ್ಲಿ (ಲ್ಯಾಂಡ್​ಫಿಲ್) ತುಂಬಲಾಗುತ್ತದೆ. ದೊಡ್ಡಬಳ್ಳಾಪುರ ತಾಲೂಕಿನ ಚಿಗರನಹಳ್ಳಿಯಲ್ಲಿರುವ ಎಂಎಸ್​ಜಿಪಿ ಮಿಶ್ರತ್ಯಾಜ್ಯ ಸಂಸ್ಕರಣ ಘಟಕಕ್ಕೆ ಪ್ರತಿದಿನ 400 ಟನ್ ಪ್ರತಿದಿನ ಕಳಿಸಲಾಗುತ್ತದೆ. ಈ ಮಿಶ್ರ ತ್ಯಾಜ್ಯದ ಪ್ರಮಾಣವೇ ಶೇ.85-90 ಇರುತ್ತದೆ. ಅದರಲ್ಲಿ ಪ್ರಮುಖವಾಗಿ ಹಸಿ ಕಸವೇ ಇರುತ್ತದೆ. ಪ್ರತಿದಿನ ಸರಾಸರಿ 3ರಿಂದ 3.5 ಸಾವಿರ ಟನ್ ಕಸ ಭೂಭರ್ತಿಗೆ ಹೋಗುತ್ತದೆ. ಎರಡೂ ಸೇರಿ 3.5ರಿಂದ 4 ಸಾವಿಟ ಟನ್ ಉತ್ಪಾದನೆಯಾಗುತ್ತದೆ. ಮಾರ್ಚ್​ನಲ್ಲಿ ಪ್ರತಿದಿನ ಸರಾಸರಿ 3,990 ಉತ್ಪಾದನೆ ಯಾಗುತ್ತಿದ್ದ ತ್ಯಾಜ್ಯ ಇದೀಗ ಏಪ್ರಿಲ್​ನಲ್ಲಿ ಸರಾಸರಿ 3,070 ಟನ್​ಗೆ ಇಳಿಕೆಯಾಗಿದೆ. ಸಂಸ್ಕರಣ ಘಟಕಗಳಿಗೆ ರವಾನೆಯಾಗುವ ಒಣಕಸದ ಪ್ರಮಾಣ 110 ಟನ್ ಕಡಿಮೆಯಾಗಿದ್ದರೆ ಭೂಭರ್ತಿಗೆ ಹೋಗುವ ಮಿಶ್ರ ತ್ಯಾಜ್ಯ 810 ಟನ್ ಕಡಿಮೆಯಾಗಿದೆ. ಒಟ್ಟಾರೆ 920 ಟನ್ ಕಸ ಉತ್ಪಾದನೆ ಪ್ರತಿದಿನ ಕಡಿಮೆಯಾಗಿದೆ.
ಮಾರುಕಟ್ಟೆಗೆಳು ದೂರ:ಲಕ್ಷಾಂತರ ಸಂಖ್ಯೆಯಲ್ಲಿ ಬೆಂಗಳೂರು ನಿವಾಸಿಗಳು ತಂತಮ್ಮ ಊರು ಸೇರಿಕೊಂಡಿದ್ದಾರೆ. ಮಾರುಕಟ್ಟೆಗಳು ದೂರದಲ್ಲಿರುವ ಕಾರಣಕ್ಕೆ ಈ ಹಿಂದಿನ ಪ್ರಮಾಣದಲ್ಲಿ ನಗರದ ಕೇಂದ್ರ ಪ್ರದೇಶಗಳಿಗೆ ಸರಬರಾಜಾಗುತ್ತಿಲ್ಲ. 7 ಕಸ ಸಂಸ್ಕರಣ ಘಟಕಗಳಿಗೆ ರವಾನೆಯಾಗುವ ತ್ಯಾಜ್ಯದ ಪ್ರಮಾಣ ಮಾರ್ಚ್ ತಿಂಗಳ ಹೋಲಿಕೆಯಲ್ಲಿ ಶೇ.17 ತಗ್ಗಿದೆ. ಆದರೆ ಭೂಭರ್ತಿ ಹಾಗೂ ಎಂಎಸ್​ಜಿಪಿಗೆ ಕಳಿಸಲಾಗುವ ಮಿಶ್ರ ತ್ಯಾಜ್ಯದ ಪ್ರಮಾಣ ಶೇ.24 ಕುಸಿತ ಕಂಡಿದೆ. ಒಟ್ಟಾರೆಯಾಗಿ ಮಾರ್ಚ್ ಹೋಲಿಕೆಯಲ್ಲಿ ಶೇ.23 ತ್ಯಾಜ್ಯ ಉತ್ಪಾದನೆ ಕಡಿಮೆಯಾಗಿದೆ ಎಂದು ಅಧಿಕಾರಿಗಳು ತಳಿಸಿದ್ದಾರೆ.
ಹೋಟೆಲ್​ಗಳು ಮುಚ್ಚಿರುವುದು ಹಾಗೂ ಬಹಳಷ್ಟು ಜನರು ಬೆಂಗಳೂರು ತೊರೆದಿರುವುದರ ಕಾರಣಕ್ಕೆ ತ್ಯಾಜ್ಯದ ಪ್ರಮಾಣದಲ್ಲಿ ಇಳಿಕೆಯಾಗಿದೆ. ಅದರಲ್ಲೂ ಮಿಶ್ರ ತ್ಯಾಜ್ಯ ಗಣನೀಯವಾಗಿ ಕಡಿಮೆಯಾಗಿದೆ.
| ಡಿ. ರಂದೀಪ್ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ
ರಮೇಶ ದೊಡ್ಡಪುರ ಬೆಂಗಳೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
