ಬೆಂಗಳೂರು:ಮುಂಗಾರು ಕ್ಷೀಣಿಸಿದ್ದರಿಂದ ರಾಜ್ಯದಲ್ಲಿ ಜೂನ್​, ಜುಲೈನಲ್ಲಿ ವಾಡಿಕೆ ಪ್ರಮಾಣದಷ್ಟು ಮಳೆಯಾಗಿಲ್ಲ. ಇದರಿಂದಾಗಿ ಕೆಲ ಜಿಲ್ಲೆಗಳಲ್ಲಿ ಬಿತ್ತನೆ ಕಾರ್ಯಕ್ಕೆ ಅಡ್ಡಿಯಾಗಿದ್ದು, ಇನ್ನೂ ಕೆಲ ಜಿಲ್ಲೆಗಳಲ್ಲಿರುವ ಜಲಾಶಯಗಳು ಭರ್ತಿಯಾಗಿಲ್ಲ.
ಈ ಬಾರಿ ರಾಜ್ಯದಲ್ಲಿ ಮುಂಗಾರು ತಡವಾಗಿ ಆರಂಭವಾದರೂ ಜುಲೈನಲ್ಲಿ ಉತ್ತಮ ಮಳೆಯಾಗಿತ್ತು. ಇದು ಸಹಜವಾಗಿಯೆ ಕೃಷಿ ಚಟುವಟಿಕೆಗಳಿಗೆ ಪೂರಕ ವಾತಾವರಣ ಕಲ್ಪಿಸಿತ್ತು. ಆದರೆ, ಆಗಸ್ಟ್​ ಆರಂಭವಾಗುತ್ತಿದ್ದಂತೆ ಮತ್ತೆ ಮಳೆ ಕೈಕೊಟ್ಟ ಪರಿಣಾಮ ಹಲವು ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣ ಕಂಡುಬಂದಿದೆ.
ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾದರೂ, ಮಲೆನಾಡು ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಹೆಚ್ಚು ಮಳೆ ಬೀಳುವ ಕೊಡಗಿನಲ್ಲಿ ಶೇ.36 ಮಳೆ ಕೊರತೆ ಉಂಟಾಗಿದ್ದು, ಮುಂದಿನ ದಿನಗಳಲ್ಲಿ ಕಾಫಿ ಬೆಳಗಾರರ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹಾಸನ(ಶೇ.22), ಶಿವಮೊಗ್ಗ (ಶೇ.10), ಚಿಕ್ಕಮಗಳೂರಲ್ಲಿ (ಶೇ.7)ಮಳೆ ಕಡಿಮೆಯಾಗಿದೆ.
ಇದನ್ನೂ ಓದಿ:Meghana Raj Mourns Spandana’s Passing | ಗೆಳತಿ ಸ್ಪಂದನಾಗೆ ಮೇಘನಾ ರಾಜ್ ಅಂತಿಮ ವಿದಾಯ | BENGALURU
ಆರಂಭದಲ್ಲಿ ಮುಂಗಾರು ಹೊಡೆತ ಕೊಟ್ಟರೂ, ಜುಲೈ ಅಂತ್ಯದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಕೆಲವೆಡೆ ಪ್ರವಾಹದ ಭೀತಿಯೂ ಎದುರಾಗಿತ್ತು. ಅಂಕಿ ಅಂಶಗಳ ಪ್ರಕಾರ ಈವರೆಗೆ ಉತ್ತರಕನ್ನಡದಲ್ಲಿ ವಾಡಿಕೆಗಿಂತ ಶೇ.10 ಹೆಚ್ಚು ಮಳೆಯಾಗಿದೆ. ಆದರೆ ದಣ ಕನ್ನಡದಲ್ಲಿ ಶೇ.7 ಹಾಗೂ ಉಡುಪಿಯಲ್ಲಿ ಶೇ.1 ಕಡಿಮೆ ಮಳೆಯಾಗಿದೆ.
ಉತ್ತರ ಒಳನಾಡಿನಲ್ಲಿ ವಾಡಿಕೆ ಮಳೆಉತ್ತರ ಒಳನಾಡಿನಲ್ಲಿ ಜಿಲ್ಲೆಗಳಲ್ಲಿ ವಾಡಿಕೆಯಷ್ಟು ಮಳೆಯಾಗಿದೆ. ಬಾಗಲಕೋಟೆ ಹಾಗೂ ಬೆಳಗಾವಿಯಲ್ಲಿ ಶೇ.2 ಮಳೆ ಕಡಿಮೆಯಾಗಿದ್ದರೆ, ಬೀದರ್​ನಲ್ಲಿ ಶೇ.43 ಹೆಚ್ಚು ಮಳೆ ಬಿದ್ದಿದೆ. ಕಲಬುರಗಿ (ಶೇ.40), ಹಾವೇರಿ (ಶೇ.34), ಕೊಪ್ಪಳದಲ್ಲಿ (ಶೇ.24)ಹೆಚ್ಚುವರಿ ಮಳೆಯಾಗಿದೆ.
ಕಳೆದ ಎರಡು ತಿಂಗಳ ಅವಧಿಯಲ್ಲಿ ದಣ ಒಳನಾಡಿನ ಜಿಲ್ಲೆಗಳಾದ ಚಿತ್ರದುರ್ಗ (ಶೇ. 67), ವಿಜಯನಗರ (ಶೇ.50), ದಾವಣಗೆರೆಯಲ್ಲಿ (ಶೇ.36) ಹೆಚ್ಚುವರಿ ಮಳೆಯಾಗಿದ್ದು, ಉಳಿದ ಜಿಲ್ಲೆಗಳಾದ ರಾಮನಗರ (ಶೇ. 45) ಚಿಕ್ಕಬಳ್ಳಾಪುರ (ಶೇ.20), ಕೋಲಾರ (ಶೇ.19), ಚಾಮರಾಮಜನಗರದಲ್ಲಿ (ಶೇ.11) ಮಳೆ ಕುಂಠಿತವಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
