ಬೆಳಗಾವಿ:ರಾಜ್ಯದ 10 ಸಾವಿರ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಇದ್ದಾರೆ ಎಂಬ ಅಂಶವನ್ನು ವಿಧಾನ ಮಂಡಲದ ಹಿಂದುಳಿದ ವರ್ಗ-ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ವರದಿ ಬಹಿರಂಗಪಡಿಸಿದೆ. ಎಸ್.ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯ ಸಮಿತಿಯು ವಿವಿಧ ಇಲಾಖೆಗಳಿಗೆ ಕಳೆದ ಮೂರು ವರ್ಷಗಳಲ್ಲಿ ಬಿಡುಗಡೆಯಾದ ಅನುದಾನ ಹಾಗೂ ವೆಚ್ಚದ ಬಗ್ಗೆ ರ್ಚಚಿಸಿ ಸಿದ್ಧಪಡಿಸಿದ ವರದಿಯನ್ನು ಶಿಫಾರಸು ಸಹಿತ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿದೆ.
ರಾಜ್ಯದ ಪ್ರತಿಯೊಂದು ಹಳ್ಳಿಯಲ್ಲಿ ಸರ್ಕಾರಿ ಶಾಲೆಗಳು ತಲೆ ಎತ್ತಿದ್ದರೂ ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದು (ಗ್ರಾ್ಯಂಟ್ ಇನ್ ಏಡ್) ಮುಂದುವರಿದಿದೆ. ಈ ಹಿಂದೆ ಸರ್ಕಾರಿ ಶಾಲೆಗಳು ಕಡಿಮೆಯಿವೆ ಎಂಬ ಕಾರಣಕ್ಕೆ ಅನುದಾನದ ವ್ಯವಸ್ಥೆ ಜಾರಿಗೆ ತರಲಾಗಿತ್ತು ಎಂದು ಉಲ್ಲೇಖಿಸಿದೆ.
ಭೌಗೋಳಿಕ ಅಂಶ ಪರಿಗಣಿಸಿ:ಶಾಲಾ ಕಟ್ಟಡಗಳ ದುರಸ್ತಿ ಕಾಮಗಾರಿಗೆ ಅನುದಾನ ನಿಗದಿ, ಬಿಡುಗಡೆ ಸಂದರ್ಭದಲ್ಲಿ ಭೌಗೋಳಿಕ ಅಂಶಗಳನ್ನು ಪರಿಗಣಿಸಬೇಕು ಎಂದು ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಹಳೆಯ ಶಾಲಾ ಕಟ್ಟಡಗಳ ದುರಸ್ತಿಗೆ ಪ್ರಸ್ತುತ ಏಕರೂಪವಾಗಿ 2 ರಿಂದ 5 ಲಕ್ಷ ರೂ. ಅನುದಾನ ನೀಡಲಾಗುತ್ತಿದೆ. ಆದರೆ ನಿರಂತರ, ವಿಪರೀತವಾಗಿ ಮಳೆಯಾಗುವ ಮಲೆನಾಡಿನ ಪ್ರದೇಶಗಳಲ್ಲಿ ರಿಪೇರಿಗೆ ಈ ಮೊತ್ತ ಸಾಲುವುದಿಲ್ಲ. ಈ ಹಿನ್ನೆಲೆಯಲ್ಲಿ ಭೌಗೋಳಿಕ ಪ್ರದೇಶದ ಅಂಶಗಳನ್ನು ಪರಿಗಣಿಸುವುದು ಸೂಕ್ತವೆಂದು ಸಮಿತಿ ಹೇಳಿದೆ.
ಪ್ರತಿ ಕಿ.ಮೀ. ರಸ್ತೆ ದುರಸ್ತಿ ಹಾಗೂ ಗುಂಡಿ ಮುಚ್ಚುವುದಕ್ಕೆ ಇಲಾಖೆ ನಿಗದಿಪಡಿಸಿದ 60 ಸಾವಿರ ರೂ. ಸಾಲದು. ಲಭ್ಯ ಅನುದಾನದಲ್ಲಿಯೇ ಕಾಮಗಾರಿ ನಿರ್ವಹಿಸಲಾಗುತ್ತದೆ. ಆದರೆ, ಮಳೆಯಾದರೆ ಒಂದು ವಾರದೊಳಗೆ ಹಾಳಾಗುತ್ತದೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ರಸ್ತೆ, ಗುಂಡಿಗಳ ಮುಚ್ಚುವ ಕಾಮಗಾರಿ ಗುಣಮಟ್ಟ ಹಾಗೂ ನಿರ್ವಹಣೆಗೆ ಐಆರ್​ಸಿ ಪ್ರಕಾರ ನಿರ್ದಿಷ್ಟ ಮಾರ್ಗಸೂಚಿ ತಯಾರಿಸಬೇಕು. ಮುಂದಿನ ಐದು ವರ್ಷಗಳ ಯೋಜನೆ ರೂಪಿಸಿ, ಅನುಷ್ಠಾನ ಹಾಗೂ ಮೇಲ್ವಿಚಾರಣೆಗೆ ವ್ಯವಸ್ಥೆ ಮಾಡಬೇಕು ಎಂದು ಸಮಿತಿ ಸೂಚಿಸಿದೆ.
ದೊಡ್ಡ ನಷ್ಟ:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಇಂಧನ ಇಲಾಖೆಗಳಿಂದ ರಾಜ್ಯದ ಬೊಕ್ಕಸಕ್ಕೆ ದೊಡ್ಡ ನಷ್ಟವಾಗುತ್ತಿದೆ. ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ, ನಷ್ಟದ ಮೊತ್ತ ವಸೂಲಿ ಮಾಡಬೇಕು ಎಂದು ಸರ್ಕಾರಕ್ಕೆ ಸಮಿತಿ ನಿರ್ದೇಶಿಸಿದೆ.
ನಿರಂತರ ಜ್ಯೋತಿ ಯೋಜನೆಯಡಿ ಮೂಲ ಸೌಕರ್ಯ ಸೃಜಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಹಗಲು-ರಾತ್ರಿ ಎನ್ನದೇ ಏಳೆಂಟು ತಿಂಗಳ ಕಾಲ ಬೀದಿ ದೀಪಗಳು ಬೆಳಗುತ್ತಿದ್ದು, ವಿದ್ಯುತ್ ವ್ಯರ್ಥ ಪೋಲಾಗುತ್ತಿದೆ. ವಿದ್ಯುತ್ ಬಿಲನ್ನು ಗ್ರಾಮ ಪಂಚಾಯಿತಿಗಳು ಭರಿಸುತ್ತಿವೆ. ಎರಡೂ ರೀತಿಯ ನಷ್ಟದ ಬಗ್ಗೆ ಆರ್​ಡಿಪಿಆರ್ ಹಾಗೂ ಇಂಧನ ಇಲಾಖೆಗಳು ಗಂಭೀರ ಚಿಂತನೆ ನಡೆಸಿ, ಸರಿಪಡಿಸಬೇಕು. ಈ ವಿಷಯದಲ್ಲಿ ಆರ್ಥಿಕ ಇಲಾಖೆ ಮಧ್ಯೆ ಪ್ರವೇಶಿಸಿ ಒತ್ತಡ ತರುವ ಅಗತ್ಯವಿದೆ ಎಂದು ಸಮಿತಿ ತಾಕೀತು ಮಾಡಿದೆ. ಸಾರಿಗೆ ಇಲಾಖೆ ಬಸ್​ಗಳ ನೋಂದಣಿ, ತೆರಿಗೆ ಪಾವತಿ ಇನ್ನಿತರ ವ್ಯವಸ್ಥೆಗಳ ನಿರ್ವಹಣೆ ಕೆಟ್ಟದಾಗಿದೆ. ಸರಿಯಾಗಿ ನಂಬರ್ ಪ್ಲೇಟ್ ಹಾಕುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನೋಂದಣಿಯಿಲ್ಲದೆ ದ್ವಿಚಕ್ರ ವಾಹನಗಳ ಓಡಾಟ ಹೆಚ್ಚಾಗಿದ್ದು, ಮಾರಾಟಗಾರರ ಹಂತದಲ್ಲೇ ಇದನ್ನು ತಪ್ಪಿಸಲು ಸಾಧ್ಯವಿದೆ ಎಂದು ಸಮಿತಿ ತಿಳಿಸಿದೆ.
ರಾಜ್ಯದ ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಅಲ್ಪಾವಧಿ, ಹೆಚ್ಚೆಂದರೆ ಮೂರು ತಿಂಗಳ ಅವಧಿಯ ಔಷಧ ಪೂರೈಸುತ್ತಿರುವ ದೂರುಗಳು ಬಂದಿವೆ ಎಂದು ವಿಧಾನ ಮಂಡಲದ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಕಳವಳ ವ್ಯಕ್ತಪಡಿಸಿದೆ. ದುರ್ಬಲರು, ಶೋಷಿತರು, ಬಡವರು, ಅಲ್ಪಸಂಖ್ಯಾತರಿಗೆ ಉಚಿತ ಔಷಧ ಪೂರೈಕೆ ಉದ್ದೇಶವೇ ಈಡೇರುವುದಿಲ್ಲ. ಕನಿಷ್ಠ ಒಂದು ವರ್ಷದ ಅವಧಿಯ ಔಷಧಗಳನ್ನು ಪೂರೈಸುವುದು ಕಾರ್ಯಸಾಧುವಾಗುತ್ತದೆ ಎಂದು ಸಮಿತಿ ಸಲ್ಲಿಸಿದ ವರದಿಯಲ್ಲಿ ಸರ್ಕಾರದ ಗಮನಸೆಳೆದಿದೆ.
ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ಸಿಸಿ ಟಿವಿ ಅಳವಡಿಸಿ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳಿಗೆ ನಿಗಾ ವ್ಯವಸ್ಥೆ ಜವಾಬ್ದಾರಿವಹಿಸಿ, ಇಂಜಿನಿಯರಿಂಗ್ ವಿಭಾಗವನ್ನು ಬಲಪಡಿಸಬೇಕಾಗಿದೆ ಎಂದು ತಿಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಬಿಡುಗಡೆಯಾದ ಅನುದಾನ, ವೆಚ್ಚ, ಸವಲತ್ತುಗಳ ಉನ್ನತೀಕರಣ, ಸುಸಜ್ಜಿತ ವ್ಯವಸ್ಥೆ ಬಗ್ಗೆ ಸಮಿತಿ ಪರಾಮಶಿಸಿದ್ದು, ಜನೌಷಧ ಕೇಂದ್ರಗಳನ್ನು ದೂರದೆಲ್ಲೆಲ್ಲೋ ತೆರೆಯುವ ಬದಲಿಗೆ ಈ ಆಸ್ಪತ್ರೆಗಳ ಆಸುಪಾಸಿನಲ್ಲಿ ತೆರೆದರೆ ಜನರಿಗೆ ಅನುಕೂಲವಾಗುತ್ತದೆ ಎಂಬ ಸಲಹೆ ನೀಡಿದೆ.
ರ‌್ಯಾಂಡಮ್ ತಪಾಸಣೆ:ಕರೊನಾ ಸಾಂಕ್ರಾಮಿಕ ಪಿಡುಗು ನಿಯಂತ್ರಣ ಕ್ರಮಗಳು ತಾತ್ಕಾಲಿಕವಾಗಿರದೆ ನಿರಂತರವಾಗಿ ಚಾಲ್ತಿಯಲ್ಲಿಡುವ ಅನಿವಾರ್ಯತೆಯಿದೆ. ಗ್ರಾಮೀಣ ಪ್ರದೇಶದ ಜನ ಸಾಮಾನ್ಯರು ಹಾಗೂ ರೋಗ ಲಕ್ಷಣವುಳ್ಳ ವಿದ್ಯಾರ್ಥಿಗಳ ರ‌್ಯಾಂಡಮ್ (ಯಾದೃಚ್ಛಿಕ ತಪಾಸಣೆ ನಡೆಸಿ, ಸಕಾಲಿಕ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದು ಸಮಿತಿ ಸಲಹೆ ನೀಡಿದೆ.
ಕರೊನಾ ನಿಯಂತ್ರಣ ಜತೆಗೆ ಸಮರ್ಪಕ ನಿರ್ವಹಣೆಗೆ ವಿಶೇಷ ನೇಮಕ ನಿಯಮಗಳಡಿ 1,193 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳು, 351 ತಜ್ಞ ವೈದ್ಯರು, ಹೆಚ್ಚುವರಿ ಪಟ್ಟಿಯಲ್ಲಿ106 ಸಾಮಾನ್ಯ ಕರ್ತವ್ಯದ ವೈದ್ಯಾಧಿಕಾರಿಗಳು ಮತ್ತು 49 ತಜ್ಞ ವೈದ್ಯರನ್ನು ನೇಮಿಸಿಕೊಂಡು ಸ್ಥಳ ನಿಯುಕ್ತಿಗೊಳಿಸಿರುವುದನ್ನು ಸಮಿತಿ ಶ್ಲಾಘಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 183 ತಜ್ಞ ವೈದ್ಯರು, 142 ಸಾಮಾನ್ಯ ವೈದ್ಯಾಧಿಕಾರಿಗಳನ್ನು ನೇಮಿಸಿಕೊಂಡಿದ್ದು ಈ ಪೈಕಿ 102 ತಜ್ಞ ವೈದ್ಯರು ಹಾಗೂ 118 ಸಾಮಾನ್ಯ ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿರುವುದನ್ನು ಸಮಿತಿ ಗಮನಿಸಿದೆ.
ಸೇವೆ ಬಳಕೆ:ರ‌್ಯಾಂಡಮ್ ತಪಾಸಣೆಯಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಸಮರ್ಥರಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಅವರನ್ನು ನಿಯೋಜಿಸಿ ಸೇವೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಮಿತಿ ಸೂಚಿಸಿದೆ. ಗ್ರಾಮೀಣ ಸೇವೆ ಕಡ್ಡಾಯದಡಿ 2050 ಎಂಬಿಬಿಎಸ್ ಪದವೀಧರರನ್ನು ಸಮುದಾಯ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಿಗೆ ನಿಯೋಜಿಸಿದ್ದು, 1768 ಪದವೀದರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 3,498 ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ 6,463 ಹೆಚ್ಚುವರಿ ಮಾನವ ಸಂಪನ್ಮೂಲವನ್ನು ಹೊರ ಗುತ್ತಿಗೆ ಹಾಗೂ ತಾತ್ಕಾಲಿಕ ಗುತ್ತಿಗೆಯಡಿ ನೇಮಿಸಲಾಗಿದೆ.
ತಜ್ಞರು, ವಿಶೇಷ ವಿಭಾಗಗಳು, ಪ್ರಯೋಗಾಲಯಗಳ ವ್ಯವಸ್ಥೆ ಮಾಡಿದ್ದರೂ ದಕ್ಷ ನಿರ್ವಹಣೆಗೆ ಅಗತ್ಯವುಳ್ಳ ನುರಿತ ವೈದ್ಯರು ಹಾಗೂ ಸಿಬ್ಬಂದಿ ಕೊರತೆಯಿದೆ. ಅಲ್ಲದೆ, ಅಂಬುಲೆನ್ಸ್ ಸೇವೆಯಲ್ಲಿ ಅದಕ್ಷತೆ, ಸಿಬ್ಬಂದಿ ತಾತ್ಸಾರ ಎದ್ದು ಕಾಣುತ್ತಿದ್ದು ಜಿಪಿಎಸ್ ವ್ಯವಸ್ಥೆ ಅಳವಡಿಸಬೇಕು ಎಂದು ಸಮಿತಿ ಸರ್ಕಾರಕ್ಕೆ ಸೂಚಿಸಿದೆ.
ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!

ಶೂಟಿಂಗ್​ ಸೆಟ್​​ನಲ್ಲೇ ನೇಣು ಹಾಕಿಕೊಂಡು ಪ್ರಾಣ ಕಳ್ಕೊಂಡ ನಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 9 =
Remember me
