ವಿಜಯಪುರ: ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಶಿಕ್ಷಣದಂತೆ ರಾಜ್ಯದಲ್ಲಿರುವ ಆರು ಕೃಷಿ ವಿಶ್ವವಿದ್ಯಾಲಯಗಳಲ್ಲಿ ಕೃಷಿ ವಿಜ್ಞಾನವನ್ನು ಆಯ್ಕೆ ಮಾಡಿಕೊಂಡು ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ ಎಂದು ಕೃಷಿ ಮಹಾವಿದ್ಯಾಲಯದ ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ ಹೇಳಿದರು.
ನಗರದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ಸೋಮವಾರದಿಂದ ಆರಂಭಗೊಂಡ ವಿಜಯವಾಣಿ ಎಕ್ಸಪೋದಲ್ಲಿ ಕೃಷಿ ಶಿಕ್ಷಣದಲ್ಲಿರುವ ವಿಫುಲ ಅವಕಾಶಗಳ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಪಿಯುಸಿ ಹಂತದಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು, ಸಿಇಟಿ ಪರೀಕ್ಷೆಯಲ್ಲಿ ಅಗ್ರಿಕಲ್ಚರ್ ಎಂಬ ವಿಷಯದ ಆದ್ಯತೆಯನ್ನು ಆಯ್ಕೆ ಮಾಡಿಕೊಂಡು ಪರೀಕ್ಷೆ ಬರೆದು ನಾಲ್ಕು ವರ್ಷದ ಕೃಷಿ ವಿಜ್ಞಾನ ಶಿಕ್ಷಣದಲ್ಲೂ ಸಾಧನೆ ತೋರಬಹುದು. ಅಲ್ಲದೇ ಕೃಷಿ ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುವ ರೈತರ ಮಕ್ಕಳಿಗೆ ಶೇಕಡಾ 50ರಷ್ಟು ಮೀಸಲು ಸೀಟುಗಳು ದೊರೆಯುತ್ತವೆ.
ವಿಜಯಪುರದ ಕೃಷಿ ವಿವಿಯಲ್ಲೂ ಓದಲು ಅವಕಾಶಗಳಿವೆ. ಇವುಗಳಲ್ಲಿ ನಾಲ್ಕು ವರ್ಷದ, ವೆಟರ್ನರಿ, ಬಿಎಸ್ಸಿ ಅಗ್ರಿ, ಅಗ್ರಿ ಮಾರ್ಕೆಟಿಂಗ್, ಫಾರೆಸ್ಟರಿ, ಫುಡ್​ ಆ್ಯಂಡ್ ಸೈನ್ಸ್, ಕಮ್ಯುನಿಟಿ ಸೈನ್ಸ್, ಡೈರಿ ಟೆಕ್ನಾಲಜಿ ಸೇರಿ ಎಂಟು ಕೋರ್ಸ್ಗಳಿವೆ. ಇವುಗಳನ್ನು ಓದಿದ ಬಹುತೇಕ ವಿದ್ಯಾವಂತರು ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಐಎಎಸ್, ಕೆಎಎಸ್, ಐಎಎಸ್, ಐಪಿಎಸ್ ಓದಿ ಸಾಧನೆ ತೋರಿದ್ದಾರೆ. ಅನೇಕ ವಿದ್ಯಾವಂತರು ಸಾವಯವ ಕೃಷಿಯತ್ತ ಹೊರಳುವ ಮೂಲಕ ಉದ್ಯಮಶೀಲರಾಗುತ್ತಿದ್ದಾರೆ ಎಂದರು.
ಅನ್ವೇಷಕ ರೈತರೊಂದಿಗೆ ನಡೆದ ಸಂವಾದದಲ್ಲಿ ಮನಗೂಳಿಯ ರೈತ ವೀರೇಶ ಮನಗೂಳಿ ಮಾತನಾಡಿ, ನಮ್ಮ ಮಣ್ಣು ವಿಷಮುಕ್ತವಾಗುತ್ತಿದೆ. ಪಂಚಭೂತಗಳೇ ಮಲೀನವಾಗಿವೆ. ರಾಸಾಯನಿಕಗಳ ಬಳಕೆಯಿಂದ ಅನ್ನದಾತ ಇಂದು ವಿಷದಾತನಾಗಿದ್ದಾನೆ. ಇದರಿಂದ ನಾವು ನಮ್ಮ ಕುಟುಂಬಗಳು ಅನಾರೋಗ್ಯಕ್ಕೀಡಾಗಿ ಸಾವಿಗೀಡಾಗುತ್ತಿದ್ದೇವೆ. ಇದಕ್ಕೆಲ್ಲ ನಮ್ಮ ರಾಸಾಯನಿಕ ಬಳಕೆಯೇ ಕಾರಣವಾಗಿದೆ. ಬೆಳಗ್ಗೆ ಹಲ್ಲುಜ್ಜುವುದರಿಂದ ಹಿಡಿದು, ಮಾತ್ರೆ ನುಂಗಿ ಮಲಗುವವರೆಗೂ ನಮ್ಮ ದಿನಚರಿ ವಿಷಯುಕ್ತವಾಗಿದೆ.
ನಾವು ವಿಷ ಮುಕ್ತರಾಗಲು ಸಾವಯವ ಕೃಷಿಯಿಂದ ಮಾತ್ರ ಸಾಧ್ಯ. ನೈಸರ್ಗಿಕವಾದ ಆಹಾರ ಉತ್ಪಾದನೆ ಪ್ರತಿ ರೈತನ ಮೊದಲ ಹೆಜ್ಜೆಯಾದರೆ, ದೇಶದ ಪ್ರತಿ ಮನುಷ್ಯ ಆರೋಗ್ಯವಂತನಾಗುತ್ತಾನೆ. ರೈತರ ಸಾಧನೆ ಇಂದಿಗೂ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಕಾಲದಲ್ಲಿ ವಿಜಯವಾಣಿ ಬಳಗ ಮುಚ್ಚಿದ ಕೆಂಡದಿಂದಲೇ ಬೆಳಕು ಚೆಲ್ಲುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಮಣ್ಣು ಸಂರಕ್ಷಣೆ ಹೋರಾಟಗಾರ, ನಾದ ಕೆಡಿ ಗ್ರಾಮದ ಪ್ರಗತಿಪರ ರೈತ ಎಸ್.ಟಿ. ಪಾಟೀಲ ಮಾತನಾಡಿ, ವಿಷಮುಕ್ತ ಆಹಾರ ಬೆಳೆಯುವ ಪದ್ಧತಿ ಭಾರತದ ಕೃಷಿ ಸಂಸ್ಕೃತಿಯಾಗಿತ್ತು. ಎಲ್ಲರೂ ಸುಸ್ಥಿರ ಕೃಷಿಯಾಧಾರಿತವಾಗಿ ಬೆಳೆಗಳನ್ನು ಬೆಳೆದು, ನೆಲದ ಋಣ ತೀರಿಸೋಣ ಎಂದು ಹೇಳಿದರು.
ವೇದಿಕೆಯಲ್ಲಿ ಸಾವಯವ, ಪ್ರಗತಿಪರ ರೈತ ಹಿರೇಬೇನೂರಿನ ಸುರೇಶ ವಿಜಾಪುರೆ, ಶಿರಶ್ಯಾಡದ ಚಂದ್ರಶೇಖರ ಪಾಸೋಡಿ, ಇಂಗಳಗಿ ರೈತ ಸದಾನಂದ ಹುಗ್ಗಿ, ತಡವಲಗಾ ರೈತ ಭೀಮರಾವ ಸಾಬಳೆ ಮತ್ತಿತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + one =
Remember me
