ಬೆಂಗಳೂರು:ರಾಜಕಾಲುವೆ ತೆರವು ಮಾಡಿಸಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ, ಇದನ್ನು ಅರಿತು ಮಾತನಾಡಬೇಕೆಂದು ಎಚ್​.ಡಿ. ಕುಮಾರಸ್ವಾಮಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಮಳೆಯಿಂದಾಗಿ ಜಲಾವೃತಗೊಂಡಿರುವ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಅವಧಿಯಲ್ಲಿ ಯಾವುದೇ ಕೆಲಸ ಆಗಿಲ್ಲ ಎಂಬ ಕುಮಾರಸ್ವಾಮಿ ಹೇಳಿದ್ದಾರೆ. ಅವರ ಅವಧಿಯಲ್ಲಿ ಏನು ಮಾಡಿದ್ದಾರೆ ಎಂಬುದನ್ನು ಹೇಳಲಿ ಎಂದರು.
ಅವರು ಅವರ ಕಾಲದಲ್ಲಿ ಅವರು ಏನ್ ಮಾಡಿದರು ಎಂಬುದನ್ನ ಮಾತನಾಡಲಿ.ನಮ್ಮ ಸರ್ಕಾರ ಇದ್ದಾಗ ರಾಜಕಾಲುವೆ ಕೆಲಸ ಮಾಡಿದ್ದೀವಿ. ಯಾರು ಯಾರು ಎಷ್ಟೆಷ್ಟು ಹಣ ಬಿಡುಗಡೆ ಮಾಡಿದ್ರು ಎಂಬುದನ್ನು ಹೇಳಲಿ, ನಮ್ಮ ಕಾಲದಲ್ಲಿ ರಾಮಲಿಂಗರೆಡ್ಡಿ, ಜಾರ್ಜ್ ಬೆಂಗಳೂರು ಅಭಿವೃದ್ಧಿ ಸಚಿವರಾಗಿದ್ದರು. ಹಲವು ವರ್ಷಗಳಿಂದ ರಾಮಲಿಂಗರೆಡ್ಡಿ ನಗರದಲ್ಲಿ ಕೆಲಸ ಮಾಡಿದ್ದಾರೆ.ದಿನೇಶ್ ಗುಂಡೂರಾವ್ ಅವರ ತಂದೆ ಕಾಲದಿಂದಲೂ ನಗರದ ರಾಜಕೀಯ ಮಾಡ್ತಿದ್ದಾರೆ ಎಂದರು ಹೇಳಿದರು.
ಕುಮಾರಸ್ವಾಮಿ ಸಹ ಸಿಎಂ ಆಗಿದ್ದವರು, ನಾನು ಸಿಎಂ ಆಗಿದ್ದೆ..ಯಾರ ಕಾಲದಲ್ಲಿ ಎಷ್ಟು ಹಣ ಬಿಡುಗಡೆಯಾಯಿತು ಅನ್ನೋದನ್ನ ಕುಮಾರಸ್ವಾಮಿ ಮಾಹಿತಿ ಕೊಡಲಿ ಎಂದರು.
ರಾಜಕಾಲುವೆ ಒತ್ತುವರಿ ತೆರವು ಮಾಡಬೇಕು. ಕೆಲವರು ಅಕ್ರಮವಾಗಿ ಮನೆ ಕಟ್ಟಿಕೊಂಡು ಬಿಟ್ಟಿದಾರೆ.ನಮ್ಮ ಕಾಲದಲ್ಲಿ ನಾವು ತೆರವು ಮಾಡಿದ್ವಿ ಆಮೇಲೆ ನಾವು ಹೊದ್ವಿ.‌ಈಗೇನು ಮಾಡಿಲ್ಲ. ಇದಕ್ಕೆ ರಾಜಕೀಯ ಇಚ್ಚಾಶಕ್ತಿ ಬೇಕು.ಸರ್ಕಾರಕ್ಕೆ ಇಚ್ಚಾ ಶಕ್ತಿ ಕೊರತೆಯಿದೆ ಎಂದು ಹೇಳಿದರು.
ಬೇಸಿಗೆ ಕಾಲದಲ್ಲಿ ಮಾಡಬೇಕಾದ ಕೆಲಸ ಮಳೆಗಾಲದಲ್ಲಿ ಮಾಡ್ತಿದ್ದಾರೆ.ರಾಜಕಾಲುವೆ ಒತ್ತುವರಿ ಮಾಡಿರುವುದು ಒಂದು ಭಾಗ.ರಾಜಕಾಲುವೆ ಕ್ಲಿನ್ ಮಾಡದೇ ಇರೋದು ನೀರು ನುಗ್ಗಲು ಕಾರಣವಾಗಿದೆ.ಬೆಂಗಳೂರು ಅಭಿವೃದ್ಧಿ ಖಾತೆ ಸಿಎಂ ಬಳಿಯಿದೆ.ಅವರೇ ಈ ಕೆಲಸ ಮಾಡಬೇಕು.ನಾನು ಇದ್ದಾಗ ಪ್ರತ್ಯೇಕವಾಗಿ ಬೇರೆಯವರಿಗೆ ನೀಡಿದ್ದೆ.ಈಗ ಬಿಜೆಪಿ ಸರ್ಕಾರದಲ್ಲಿ ಸಿಎಂ ಬಳಿ ಉಳಿಸಿಕೊಂಡು ನಗರದ ಸಮಸ್ಯೆಗಳು ದುಪ್ಪಟ್ಟು ಆಗಿವೆ.ಬಿಬಿಎಂಪಿ ಚುನಾವಣೆ ಮುಂದೂಡಿಕೆ ಮಾಡಿರುವುದು ಇದಕ್ಕೆ ಕಾರಣಸೋಲಿನ ಬೀತಿಯಿಂದ ಒಂದು ವರ್ಷ ಎಂಟು ತಿಂಗಳಿಂದ ಚುನಾವಣೆ ನಡೆಸಿಲ್ಲ ಎಂದರು.
ಪತ್ತೆಯಾಯ್ತು ಹೊಸ ವೈರಸ್​​; ಅಮೆರಿಕ ವ್ಯಕ್ತಿಯಲ್ಲಿ ಕಾಣಿಸಿತು ಮಂಕಿಪಾಕ್ಸ್​! ಏನಿದರ ಲಕ್ಷಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
