ಬೆಂಗಳೂರು:ಕಾನೂನು ಚೌಕಟ್ಟಿನಲ್ಲಿ ಸಮೀಕ್ಷೆ ನಡೆಸಿ ತಯಾರಿಸಲಾದ ಸಾಮಾಜಿಕ, ಶೈಕ್ಷಣಿಕ ಅಂಶನ್ನೊಳಗೊಂಡ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಸ್ವೀಕರಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ ಒತ್ತಾಯಿಸಿದ್ದಾರೆ.
ಈಗಿನ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ವರದಿಯನ್ನು ಯಥಾವತ್ತಾಗಿ ಸರ್ಕಾರಕ್ಕೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಇದನ್ನು ಮರು ಪರಿಶೀಲಿಸಬಾರದು. ವರದಿಯಲ್ಲಿ ಯಾವುದೇ ಲೋಪದೋಷವಿಲ್ಲ. ಕಾನೂನಿನ ಪ್ರಕಾರ ಅಂತಿಮ ವರದಿಗೆ ಸದಸ್ಯ ಕಾರ್ಯದರ್ಶಿಯವರ ಸಹಿ ಅಗತ್ಯ ಇಲ್ಲ. 55 ಪ್ರಶ್ನಾವಳಿಗಳ ಮುಂದಿಟ್ಟುಕೊಂಡು ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದ ವರದಿ ವೈಜ್ಞಾನಿಕವಾಗಿದೆ. ವಿಳಂಬ ಮಾಡದೆ ವರದಿಯನ್ನು ಸರ್ಕಾರ ಸ್ವೀಕರಿಸಬೇಕು. ಆಯೋಗದ ವರದಿಯನ್ನು ಸರ್ಕಾರ ಬಿಡುಗಡೆ ಮಾಡಿದ ನಂತರ ಪರಿಶೀಲಿಸಿ ಅಧ್ಯಯನ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಕಾಂತರಾಜ ಹೇಳಿದ್ದಾರೆ.
2013ರಲ್ಲಿ ರಾಜ್ಯ ಸರ್ಕಾರ, ದೇಶದಲ್ಲೇ ಮೊದಲ ಬಾರಿಗೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಆದೇಶ ಹೊರಡಿಸಿತ್ತು. ಸಮೀಕ್ಷೆ ನಡೆಸಿ ವರದಿ ನೀಡಲು ಆಯೋಗಕ್ಕೆ ಜವಾಬ್ದಾರಿ ನೀಡಲಾಯಿತು. 2014ರಲ್ಲಿ ನನ್ನನ್ನು ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿತ್ತು. 2015ರ ಏಪ್ರಿಲ್‌ನಲ್ಲಿ ಸಮೀಕ್ಷೆ ನಡೆಸಲು ಆರಂಭಿಸಲಾಯಿತು. ರಾಜ್ಯದ ಮನೆ ಮನೆಗೆ ತೆರಳಿದ್ದ ವೇಳೆ ಜಾತಿ ಗಣತಿ ಜತೆಗೆ ಶೈಕ್ಷಣಿಕ, ಸಾಮಾಜಿಕ, ಉದ್ಯೋಗ, ಕೌಟುಂಬಿಕ, ಚಿರಾಸ್ಥಿ, ಬ್ಯಾಂಕ್ ಸಾಲ ಮತ್ತು ಆರೋಗ್ಯ ಕುರಿತು ಸೇರಿ 55 ಪ್ರಶ್ನಾವಳಿ ಒಳಗೊಂಡ ಅರ್ಜಿಯಲ್ಲಿ ಕುಟುಂಬದ ಸದಸ್ಯರಿಂದ ವಿವರ ಪಡೆದು ನಮೂದಿಸಲಾಯಿತು. 40 ದಿನದಲ್ಲಿ ಸಮೀಕ್ಷೆ ಮುಗಿಸಲಾಯಿತು. ಎಲ್ಲ ಅಂಕಿ ಅಂಶಗಳನ್ನು ಕ್ರೂಢೀಕರಿಸುವುದು ಸೇರಿ ಇತರೆ ಕಾರ್ಯಗಳನ್ನು ಮಾಡಲಾಯಿತು. 2018ರಲ್ಲಿ ಸಂಪೂರ್ಣವಾಗಿ ವರದಿಯನ್ನು ಸಿದ್ಧಪಡಿಸಲಾಯಿತು ಎಂದು ಕಾಂತರಾಜ ವಿವರಿಸಿದರು.
ಇದನ್ನೂ ಓದಿ:ಸರ್ಕಾರಿ ನೇಮಕಾತಿಯಲ್ಲಿ ಯುವಕರನ್ನು ರಾಹುಲ್ ಗಾಂಧಿ ಪ್ರಚೋದಿಸುತ್ತಿದ್ದಾರೆ: ರಾಮರಾವ್ ಆರೋಪ!
ಅಂತಿಮ ವರದಿಗೆ ಸದಸ್ಯ ಕಾರ್ಯದರ್ಶಿಯವರ ಸಹಿ ಇಲ್ಲ ಎಂಬ ಪ್ರಶ್ನೆಗೆ ಆಯೋಗದ ನಡವಳಿಗೆ ಭಾಗಿಯಾಗಿ ಸಹಿ ಮಾಡಿ ಒಪ್ಪಿಗೆ ನೀಡಿದ್ದಾರೆ. ಅಲ್ಲದೆ, ಆಯೋಗಕ್ಕೆ ಸಂಬಂಧಿಸಿದ ಎಲ್ಲ ವರದಿಗಳಿಗೆ ಮತ್ತು ಕಾಲಕಾಲಕ್ಕೆ ನಡೆದ ಆಯೋಗದ ಸಭೆಗಳಲ್ಲಿ ಚರ್ಚಿಸಿ ಸಹಮತ ನೀಡಿ ಸಹಿ ಹಾಕಿರುತ್ತಾರೆ. ಹೀಗಿದ್ದಾಗ, ಅಂತಿಮ ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಿಲ್ಲ ಎಂಬ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದರು. ವರದಿ ಅವೈಜ್ಞಾನಿಕವಾಗಿದೆ ಹಾಗೂ ಲೋಪದೋಷದಿಂದ ಕೂಡಿದೆ ಎಂದು ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂತರಾಜ, ಈ ಮೇಲಿನ ಸ್ಪಷ್ಟನೆ ನೀಡಿದ್ದರು.
ಅವಕಾಶ ಸಿಗಲಿಲ್ಲ:ನಾವು ಕೊಟ್ಟಿರುವ ಎಲ್ಲ ಮೂಲ ಪ್ರತಿ ಆಯೋಗದಲ್ಲಿದೆ. ಅಂತಿಮ ವರದಿಗೆ ಸಹಿ ಹಾಕಲು ಸದಸ್ಯ ಕಾರ್ಯದರ್ಶಿ ನೀಡಲಾಯಿತು. 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ವರದಿ ಸ್ವೀಕರಿಸುವಂತೆ ಮನವಿ ಮಾಡಲಾಯಿತು. ನಂತರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆಯೂ ಚಿರ್ಚಿಸಲಾಯಿತು.2019ರ ಸೆ.5ರಂದು ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ವರದಿ ಬಗ್ಗೆ ಚರ್ಚಿಸಲು ಕಾಲಾವಕಾಶ ನೀಡುವಂತೆ ಪತ್ರ ಬರೆದು ಮನವಿ ಮಾಡಲಾಯಿತು. ಆದರೆ, ನಮಗೆ ಅವಕಾಶ ದೊರೆಯಲಿಲ್ಲ ಎಂದು ಕಾಂತರಾಜ ತಿಳಿಸಿದರು.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:thirteen − 7 =
Remember me
