ಬೆಂಗಳೂರು:ಸಿಎಂ ಸಿದ್ದರಾಮಯ್ಯ ಅವರೇ, ನಾವು ಹನುಮನ ಭಕ್ತರು. ನಿಮ್ಮ ಈ ಗೊಡ್ಡು ಬೆದರಿಕೆಗಳಿಗೆ ನಾವು ಹೆದರುವುದಿಲ್ಲ, ಜಗ್ಗುವುದೂ ಇಲ್ಲ. ರಾಮ ಎಲ್ಲಿರುತ್ತಾನೋ ಅಲ್ಲಿ ಆಂಜನೇಯ ಇರುವಂತೆ, ಹಿಂದೂ ಧರ್ಮದ ಮೇಲೆ, ಹಿಂದೂಗಳ ಮೇಲೆ ಎಲ್ಲೇ ದೌರ್ಜನ್ಯ ನಡೆದರೂ ಅಲ್ಲಿ ಹಿಂದೂಗಳ ರಕ್ಷಣೆಗೆ ನಾವು ಇರುತ್ತೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್​.ಅಶೋಕ ಗುಡುಗಿದ್ದಾರೆ.ಕೇಸರಿ ಬಣ್ಣ, ಹನುಮನ ಧ್ವಜ ನಿಮಗೆ ಸಹಿಸಲು ಆಗದಿದ್ದರೆ ನಮ್ಮ ಮೇಲೆ ಲಾಠಿ ಚಾರ್ಜ್ ಮಾಡಿ, ಗೋಲಿ ಬಾರ್ ಮಾಡಿ, ಸುಳ್ಳು ಕೇಸು ಖಾಕಿ ಬಂಧಿಸಿ. ಆದರೆ ನಾವು ಹಿಂದೂಗಳ ರಕ್ಷಣೆ ಮಾಡಿಯೇ ಸಿದ್ಧ. ನಿಮ್ಮ ಹಿಂದೂ ದ್ವೇಷ ದೊಡ್ಡದೋ ನಮ್ಮ ಹನುಮ ಭಕ್ತಿ ದೊಡ್ಡದೋ ನೋಡಿಯೇ ಬಿಡೋಣ.ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಇಳಿಸಿದ ಘಟನೆ ಖಂಡಿಸಿ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ನನ್ನನ್ನು ಬಂಧಿಸಿ ಕೇಸು ದಾಖಲಿಸುವ ಮೂಲಕ ಕಾಂಗ್ರೆಸ್​ ಸರ್ಕಾರ ತನ್ನ ಹಿಂದೂ ವಿರೋಧಿ ಧೋರಣೆಯನ್ನು ಮುಂದುವರಿಸಿದೆ ಎಂದು ಅವರು ಆರೋಪಿಸಿದರು.ಹುಬ್ಬಳ್ಳಿಯಲ್ಲಿ ಅಯೋಧ್ಯಾ ರಾಮಜನ್ಮಭೂಮಿ ಚಳುವಳಿಯ ಕರಸೇವಕರ ಬಂಧನ ವಿರೋಧಿಸಿ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಸಹ ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರ ನನ್ನನ್ನು ಬಂಧಿಸಿತ್ತು. ಒಂದೇ ತಿಂಗಳಲ್ಲಿ ಎರಡೆರಡು ಬಾರಿ ವಿಪಕ್ಷ ನಾಯಕನನ್ನ ಬಂಧನ ಮಾಡಿರುವುದು ಬಹುಶಃ ರಾಜ್ಯದ ಇತಿಹಾಸದಲ್ಲೇ ಇದೆ ಮೊದಲು ಅನ್ನಿಸುತ್ತೆ. ರಾಜ್ಯದಲ್ಲಿ ಅಕ್ಷರಶಃ ತುರ್ತು ಪರಿಸ್ಥಿತಿಯ ವಾತಾವರಣವಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
