|ಮೃತ್ಯುಂಜಯ ಕಪಗಲ್ಬೆಂಗಳೂರು
ಗ್ರಾಮೀಣ ಭಾಗದಲ್ಲಿ ಕರೊನಾ ನಿಯಂತ್ರಣಕ್ಕೆ ಸರ್ಕಾರ ಯಾವ ದಾರಿ ಕಂಡುಕೊಳ್ಳುತ್ತಿದೆ?
ರಾಜ್ಯದಲ್ಲಿ 1.50 ಲಕ್ಷ ಸ್ತ್ರೀ ಸ್ವ ಸಹಾಯ ಗುಂಪುಗಳಿವೆ. ಗ್ರಾ.ಪಂ. ಸದಸ್ಯರು, ಅಧಿಕಾರಿಗಳು, ಪೊಲೀಸರು ಹಾಗೂ ಸ್ವಸಹಾಯ ಗುಂಪುಗಳ ಸದಸ್ಯರನ್ನು ಒಳಗೊಂಡು ಕಾರ್ಯನಿರ್ವಹಣಾ ತಂಡ ರಚಿಸಲಾಗುವುದು. ಜನರಲ್ಲಿ ಜಾಗೃತಿ, ಕಡಿಮೆ ಸೋಂಕು ಲಕ್ಷಣವುಳ್ಳವರ ಪತ್ತೆ, ಸೋಂಕಿತರು ಮುಕ್ತವಾಗಿ ಓಡಾಡದಂತೆ ತಡೆ, ಆರೈಕೆ ಕೇಂದ್ರಕ್ಕೆ ಸೇರಿಸಲು ಮನವೊಲಿಕೆ, ಅಗತ್ಯವುಳ್ಳವರಿಗೆ ಆಸ್ಪತ್ರೆಗೆ ದಾಖಲು ಮುಂತಾದ ಚಟುವಟಿಕೆ ನಿರ್ವಹಿಸುವ ಆಶಾ ಕಾರ್ಯಕರ್ತೆಯರಿಗೆ ಈ ತಂಡಗಳು ಆಸರೆಯಾಗಲಿವೆ.
ಗ್ರಾಮೀಣ ಭಾಗದಲ್ಲಿ ಆರೋಗ್ಯ ವ್ಯವಸ್ಥೆ ಇಲ್ಲ ಎಂಬ ದೊಡ್ಡ ಆತಂಕವಿದೆ, ಇದಕ್ಕೆ ಪರಿಹಾರ ಸೂತ್ರವೇನು?
ಅತ್ಯಾಧುನಿಕ ತಂತ್ರಜ್ಞಾನ, ಡಿಜಿಟಲೀಕರಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಉದ್ದೇಶವಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜಿಲ್ಲಾ ಹಂತದವರೆಗೂ ಆಸ್ಪತ್ರೆಗಳಲ್ಲಿ ಟೆಲಿಕಲ್ಟೆನ್ಸಿ ಮತ್ತು ಟೆಲಿಮೆಡಿಸನ್ ಸೌಲಭ್ಯ ಒದಗಿಸುವ ಗುರಿ ಇದೆ. ಈ ವ್ಯವಸ್ಥೆಯಾಗದರೆ ಕೋವಿಡ್ ನಿಭಾಯಿಸಲು ತಜ್ಞ ವೈದ್ಯರ ಕೊರತೆ ನಿವಾರಣೆಯಾಗುವ ವಿಶ್ವಾಸವಿದೆ.
3ನೇ ಅಲೆ ತಡೆಗೆ ಮಾಡಿಕೊಂಡ ಸಿದ್ಧತೆಗಳೇನು?
ಜಿಲ್ಲಾ ಆಸ್ಪತ್ರೆಗಳಿಂದ ಹಿಡಿದು ಪ್ರಾಥಮಿಕ ಆರೋಗ್ಯ ಕೇಂದ್ರದವರೆಗೆ ಮೂಲ ಸವಲತ್ತುಗಳ ಆಮೂಲಾಗ್ರ ಸುಧಾರಣೆ. ಆಕ್ಸಿಜನ್ ಬೆಡ್​ಗಳ ಸಂಖ್ಯೆ ವೃದ್ಧಿ, ಐಸಿಯು, ಎಚ್​ಡಿಯು ಸೌಲಭ್ಯ ಕಲ್ಪಿಸಿ ಗುಣಮಟ್ಟ ಹೆಚ್ಚಳ.ಗುತ್ತಿಗೆ ಆಧಾರದಲ್ಲಿ ವೈದ್ಯರು, ಅರೆ ವೈದ್ಯಕೀಯ ಮತ್ತು ತಾಂತ್ರಿಕ ನೇಮಕಕ್ಕೆ ಒತ್ತು ನೀಡಲಾಗಿದೆ.
3ನೇ ಅಲೆ ನಿಭಾಯಿಸಲು ಏನು ಬೇಕು, ತಜ್ಞರು ಸಲಹೆಗಳೇನಿವೆ?
ಆಕ್ಸಿಜನ್, ರೆಮ್ೆಸಿವಿರ್ ಔಷಧ ಕೊರತೆ ಬಹುತೇಕ ನಿವಾರಣೆಯಾಗಿದೆ. ಬೇಡಿಕೆಯಷ್ಟು ಬೆಡ್ ವ್ಯವಸ್ಥೆ ಮಾಡಬೇಕಿದೆ. ಲ್ಯಾಬ್​ಗಳ ಯಾಂತ್ರೀಕರಣ, ಟೆಸ್ಟ್ ಕಿಟ್​ಗಳು, 3 ತಿಂಗಳಿಗಾಗುವಷ್ಟು ಔಷಧ ಮತ್ತು ಮಾತ್ರೆಗಳ ಖರೀದಿ ಸೇರಿ 140 ಕೋಟಿ ರೂ. ವೆಚ್ಚದ ಪರಿಕರಗಳ ದಾಸ್ತಾನು. ಮಕ್ಕಳಿಗಾಗಿ ಪ್ರತ್ಯೇಕ ವ್ಯವಸ್ಥೆ, ಆಮ್ಲಜನಕ ನಿರ್ವಹಣೆಗಾಗಿ ಹೊಸ ನೀತಿ ರೂಪಿಸಲಾಗುತ್ತಿದೆ.
ಎರಡನೇ ಅಲೆ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಯಿತೆ?
ಸೋಂಕು ದಿಢೀರ್ ಉಲ್ಬಣಿಸಿತು. ಸೋಂಕಿನ ಕಡೆಗಣನೆ, ಕೊನೆ ಗಳಿಗೆಯಲ್ಲಿ ಆಸ್ಪತ್ರೆಗಳತ್ತ ಧಾವಿಸಿದ್ದು ಸಮಸ್ಯೆಗೆ ಮತ್ತೊಂದು ಕಾರಣ. ಮೊದಲ ಅಲೆಯಲ್ಲಿ ನಿಧಾನವಾಗಿ ವ್ಯಾಪಿಸಿದ್ದರಿಂದ ವ್ಯವಸ್ಥೆಗೆ ಕಾಲಾವಕಾಶ ಸಿಕ್ಕಿತು.

|ವಿಲಾಸ ಮೇಲಗಿರಿಬೆಂಗಳೂರು
ಮೂರನೇ ಅಲೆ ಮಕ್ಕಳೇ ಟಾರ್ಗೆಟ್ ಎಂಬ ಮಾಹಿತಿ ಇದೆ, ಹೇಗಿದೆ ತಯಾರಿ?
ತಜ್ಞರ ವರದಿ ಆಧಾರದ ಮೇಲೆ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಪೀಡಿಯಾಟ್ರಿಕ್ ಐಸಿಯು ಸ್ಥಾಪಿಸಲು ಕ್ರಮ ಕೈಗೊಂಡಿದ್ದೇವೆ. ಮಕ್ಕಳಿಗಾಗಿ ಕೋವಿಡ್ ಆರೈಕೆ ಕೇಂದ್ರ ಆರಂಭಿಸುವ ವ್ಯವಸ್ಥೆ ಈಗಾಗಲೆ ಮಾಡಲಾಗುತ್ತಿದೆ. ಡಾ.ದೇವಿಶೆಟ್ಟಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು, ಕಾಲ ಕಾಲಕ್ಕೆ ಅವರು ಕೊಡುವ ವರದಿ ಆಧರಿಸಿ 3ನೇ ಅಲೆ ನಿಗ್ರಹಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.
ಯುವಕರು, ಮಕ್ಕಳ ರಕ್ಷಣೆಗೆ ಮುಂಜಾಗ್ರತಾ ಕ್ರಮಗಳೇನು?
ಮಕ್ಕಳು ಮತ್ತು ಯುವಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪೂರಕ ಕ್ರಮ ಕೈಗೊಳ್ಳುತ್ತಿದ್ದೇವೆ. ತಜ್ಞರ ಸಲಹೆಯಂತೆ ಪೌಷ್ಟಿಕ ಆಹಾರ, ವಿಟಮಿನ್ ಮಾತ್ರೆ ಪೂರೈಕೆಗೆ ಕ್ರಮ ಕೈಗೊಂಡಿದ್ದೇವೆ. ರೋಗ ನಿರೋಧಕ ಶಕ್ತಿ ಹೆಚ್ಚಾದರೆ ಅಪಾಯದಿಂದ ಪಾರಾಗಬಹುದು.
ಜನರಲ್ಲಿರುವ ಆತಂಕ, ಭೀತಿ ನಿವಾರಣೆಗೆ ಏನು ಮಾಡುತ್ತೀರಿ?
ನಿಜ. ಕರೊನಾ ಬಗೆಗಿನ ಭೀತಿ ನಿವಾರಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರದ ಐಟಿ ಇಲಾಖೆ ಹಾಗೂ ಖಾಸಗಿಯವರು ಸಾಕಷ್ಟು ಸಂಶೋಧನೆ ನಡೆಸುತ್ತಿದ್ದಾರೆ. ಈಗಿರುವ ಆಪ್​ಗಳನ್ನು ಬಲಪಡಿಸುವುದರ ಜತೆಗೆ ಹೊಸ ಹೊಸ ತಂತ್ರಜ್ಞಾನ ಬಳಸಿಕೊಂಡು ಜನರಿಗೆ ಮೊಬೈಲ್​ನಲ್ಲೇ ಮಾಹಿತಿ ದೊರೆಯುವಂತೆ ಮಾಡಿ, ಜಾಗೃತಿ ಮೂಡಿಸಲು ಮುಂದಾಗಿದ್ದೇವೆ.
ಸೋಂಕು ನಿಗ್ರಹಕ್ಕೆ ಜಿಲ್ಲಾಡಳಿತಗಳನ್ನು ಯಾವ ರೀತಿ ಸಜ್ಜುಗೊಳಿಸಲಾಗಿದೆ?
1ನೇ ಮತ್ತು 2ನೇ ಅಲೆಗೆ ದೊಡ್ಡ ವ್ಯತ್ಯಾಸವಿದೆ. ಒಬ್ಬರಿಂದ ಒಬ್ಬರಿಗೆ ತೀವ್ರಗತಿಯಲ್ಲಿ ಹರಡುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಆಡಳಿತ ಯಂತ್ರ ಚುರುಕುಗೊಳಿಸುತ್ತಿದ್ದೇವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಕ್ಕೆ ಆರೋಗ್ಯ ಮೂಲಸೌಕರ್ಯ ಒದಗಿಸಲು ಹೆಚ್ಚು ಆದ್ಯತೆ ನೀಡುತ್ತಿದ್ದೇವೆ.
ಬೆಡ್ ಸಂಖ್ಯೆ ಹೆಚ್ಚಿಸಲು ಅನ್ಯಮಾರ್ಗವೇನು?
ಕರೊನಾ ಸೋಂಕಿತರ ಚಿಕಿತ್ಸೆಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರಸ್ತುತ 24,000 ಹಾಸಿಗೆ ಮೀಸಲಿವೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಂತೆ 6847 ಹಾಸಿಗೆ ಸರ್ಕಾರಕ್ಕೆ ನೀಡಬೇಕಾಗಿದ್ದು, 4350 ಹಾಸಿಗೆ ಕೊಟ್ಟಿದ್ದಾರೆ. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ 9061 ಹಾಸಿಗೆಗಳಿದ್ದು, ಈ ಪೈಕಿ 8,338 ಹಾಸಿಗೆ ನಮಗೆ ಕೊಡಬೇಕು. ಮುಂದಿನ ದಿನಗಳಲ್ಲಿ ಹಾಸಿಗೆಗಳನ್ನು 35ರಿಂದ 40 ಸಾವಿರಕ್ಕೆ ಹೆಚ್ಚಿಸಲು ಸಿದ್ಧತೆ ನಡೆದಿದೆ.

|ಶಿವಾನಂದ ತಗಡೂರುಬೆಂಗಳೂರು
ಕರೊನಾ ಎರಡನೇ ಅಲೆ ಎದುರಿಸುವಲ್ಲಿ ಸಾಕಷ್ಟು ಏರುಪೇರುಗಳಾದ್ದು, ಸಂಭಾವ್ಯ 3ನೇ ಅಲೆ ಬಗ್ಗೆ ಜನರಲ್ಲಿ ಆತಂಕವಿದೆ. ಇದನ್ನು ಹೇಗೆ ನಿವಾರಿಸುತ್ತೀರಿ?
-ಕೋವಿಡ್ 3ನೇ ಅಲೆ ತಡೆಗೆ ಈಗಾಗಲೆ ಸಿದ್ಧತೆ ಆರಂಭಿಸಿದ್ದು, ತಜ್ಞರು ನೀಡುವ ಸಲಹೆ, ಮಾರ್ಗದರ್ಶನದ ಅನುಸಾರ ಸಿದ್ಧತೆ ಮಾಡಿಕೊಳ್ಳಲಾಗುವುದು.
ಜಿಲ್ಲೆ, ತಾಲೂಕು ಹಂತದಲ್ಲಿ ಮಾಡಿಕೊಂಡಿರುವ ವ್ಯವಸ್ಥೆಗಳೇನು?
10 ಸಾವಿರವರೆಗೆ ಆಕ್ಸಿಜನ್ ಸಿಲಿಂಡರ್ ಖರೀದಿಗೆ ತೀರ್ವನಿಸಲಾಗಿದೆ. ರಾಜ್ಯದೆಲ್ಲೆಡೆ 3 ಸಾವಿರ ಆಕ್ಸಿಜನ್ ಕಾನ್ಸನ್​ಟ್ರೇಟರ್ ಹಂಚಲಾಗಿದೆ. ಇನ್ನೂ 7 ಸಾವಿರ ಹಂಚಿಕೆಗೆ ಸಿದ್ಧತೆ ಮಾಡಲಾಗಿದೆ. ಪ್ರತಿ ತಾಲೂಕು ಆಸ್ಪತ್ರೆಯಲ್ಲಿ 6 ವೆಂಟಿಲೇಟರ್ ಹಾಗೂ ಶೇ.50 ಹಾಸಿಗೆಗಳಿಗೆ ಆಕ್ಸಿಜನ್ ಅಳವಡಿಸಲಾಗುತ್ತಿದೆ.
ಕಳೆದ ವರ್ಷ ಲಾಕ್​ಡೌನ್ ಜಾರಿಗೊಳಿಸಿದಾಗ ಆರೋಗ್ಯ ಸವಲತ್ತು ಸುಧಾರಣೆಗೆ ಅನಿವಾರ್ಯವೆಂಬ ಸಮರ್ಥನೆ ನೀಡಲಾಗಿತ್ತು. ಹಾಗಿದ್ದ ಮೇಲೆ ನಿರೀಕ್ಷಿತ ಸುಧಾರಣೆ ಆಗಲಿಲ್ಲವೇಕೆ?
ಕಳೆದ ವರ್ಷಕ್ಕಿಂತ ಆರೋಗ್ಯ ಮೂಲಸೌಕರ್ಯದಲ್ಲಿ ಬಹಳಷ್ಟು ಸುಧಾರಣೆಯಾಗಿದೆ. ಆರೋಗ್ಯ ಇಲಾಖೆಯಡಿ ಆಸ್ಪತ್ರೆಗಳಲ್ಲಿ 2020ರ ಮಾರ್ಚ್​ನಲ್ಲಿದ್ದ ಆಕ್ಸಿಜನೇಟೆಡ್ ಹಾಸಿಗೆ 1,970 ಹಾಗೂ 2021ರ ಮೇನಲ್ಲಿರುವುದು 24,000. ಇದೇ ರೀತಿ ಐಸಿಯು ಹಾಸಿಗೆ ಸಂಖ್ಯೆ 444ರಿಂದ 1,145ಕ್ಕೆ, ವೆಂಟಿಲೇಟರ್ ಬೆಡ್ ಸಂಖ್ಯೆ 610ರಿಂದ 2,059ಕ್ಕೆ ಹೆಚ್ಚಳವಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಆಸ್ಪತ್ರೆಗಳಲ್ಲಿ ಆಕ್ಸಿಜನೇಟೆಡ್ ಬೆಡ್ 4,700ರಿಂದ 9,405ಕ್ಕೆ, ಐಸಿಯು ಬೆಡ್ 341ರಿಂದ 646ಕ್ಕೆ, ಎಚ್​ಎಫ್​ಎನ್​ಸಿ 15ರಿಂದ 570ಕ್ಕೆ ಹೆಚ್ಚಿಸಲಾಗಿದೆ.
ಮೊದಲ ಅಲೆಯಲ್ಲಿ ಮಾದರಿಯಾಗಿದ್ದ ರಾಜ್ಯ, ಎರಡನೇ ಅಲೆ ಎದುರಿಸುವಲ್ಲಿ ಮುಗ್ಗರಿಸಿದ್ದೆಲ್ಲಿ?
ರಾಜ್ಯ ಕೊರೊನಾ ನಿರ್ವಹಣೆಯಲ್ಲಿ ಹಿಂದುಳಿದಿಲ್ಲ. ನಮ್ಮ ದೇಶದಲ್ಲಿರುವಷ್ಟು ಸೋಂಕಿತ ಪ್ರಕರಣಗಳು ಅಮೆರಿಕದಲ್ಲಿ ಕಂಡುಬಂದಿದ್ದರೆ, ಅಲ್ಲಿನ ಸರ್ಕಾರ ಅದನ್ನು ನಿರ್ವಹಣೆ ಕೂಡ ಮಾಡಲಾಗುತ್ತಿರಲಿಲ್ಲ. ಯಾವುದೇ ದೇಶದಲ್ಲಿ ಬಹುತೇಕ ಜನರು ಸೋಂಕಿತರಾದರೆ ಇರುವ ವ್ಯವಸ್ಥೆಯಲ್ಲೇ ನಿರ್ವಹಣೆ ಮಾಡುವುದು ಕಷ್ಟಸಾಧ್ಯ ಎಂದು ತಜ್ಞರಾದ ಡಾ.ದೇವಿಪ್ರಸಾದ್ ಶೆಟ್ಟಿ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಲಸಿಕೆ ಮತ್ತು ಕೋವಿಡ್ ಟೆಸ್ಟ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಿಮ್ಮ ಅಭಿಪ್ರಾಯವೇನು?
18ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲು 3 ಕೋಟಿ ಡೋಸ್ ಖರೀದಿಸಲಾಗುತ್ತಿದೆ. ಅಲ್ಲದೆ ಹೆಚ್ಚುವರಿಯಾಗಿ 2 ಕೋಟಿ ಡೋಸ್ ಸರಬರಾಜು ಮಾಡಲು ಜಾಗತಿಕ ಟೆಂಡರ್ ಕರೆಯಲಾಗಿದೆ. ಲಸಿಕೆ ನಮ್ಮ ಬಳಿ ಇರುವ ಅತ್ಯಂತ ಪರಿಣಾಮಕಾರಿ ಅಸ್ತ್ರವಾಗಿದ್ದು, ಕಡಿಮೆ ಅವಧಿಯಲ್ಲಿ ಹೆಚ್ಚು ಜನರಿಗೆ ನೀಡಲು ಯೋಜನೆ ರೂಪಿಸಲಾಗುತ್ತಿದೆ.

|ಶ್ರೀಕಾಂತ್ ಶೇಷಾದ್ರಿಬೆಂಗಳೂರು
ಮೆಡಿಕಲ್ ಆಕ್ಸಿಜನ್ ಹಾಹಾಕಾರ ಎಲ್ಲೆಲ್ಲೂ ಕೇಳಿಬಂದಿದೆ. ಏನಿದೆ ಪ್ರಸ್ತುತ ಪರಿಸ್ಥಿತಿ?
ಆರಂಭದಲ್ಲಿ ರಾಜ್ಯಕ್ಕೆ 300 ಮೆಟ್ರಿಕ್ ಟನ್ ಆಕ್ಸಿಜನ್ ಹಂಚಿಕೆಯಾಗಿತ್ತು. ಬಳಿಕ ಇಲ್ಲಿನ ಸ್ಥಿತಿ ಅವಲೋಕಿಸಿ ಹಂಚಿಕೆ ಪ್ರಮಾಣ ಹೆಚ್ಚಾಗಿದೆ. ಮತ್ತೆ ಕೇಂದ್ರವನ್ನು ಒತ್ತಾಯಿಸಿದ್ದರಿಂದ 1015 ಮೆಟ್ರಿಕ್ ಟನ್​ಗೆ ತಲುಪಿದೆ. ಮುಂದೆ 1200- 1400 ಮೆಟ್ರಿಕ್​ಟನ್ ಬೇಕಾಗಬಹುದೆಂದು ಕೋರಿದ್ದೇವೆ.
3ನೇ ಅಲೆ ಎದುರಿಸಲು ಯಾವ ರೀತಿ ನೀಲಿನಕ್ಷೆ ಸಿದ್ಧಪಡಿಸಿಕೊಂಡಿದ್ದೀರಿ?
ಅತೀ ಹೆಚ್ಚಿನ ಪ್ರಕರಣ (ಪೀಕ್) ಬಂದರೆ 1700 ಮೆಟ್ರಿಕ್ ಟನ್ ಆಕ್ಸಿಜನ್ ಬೇಕಾಗುತ್ತದೆಂದು ನಿರೀಕ್ಷೆ ಇದ್ದು, ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಆಕ್ಸಿಜನ್ ಕಾನ್ಸನ್​ಟ್ರೇಟರ್ ಬಳಕೆ ಹೆಚ್ಚಾಗಿದ್ದರಿಂದ ಒತ್ತಡ ಕಡಿಮೆಯಾಗುತ್ತಿದೆ. ಸಂಘ ಸಂಸ್ಥೆಗಳು ನೆರವು ನೀಡುತ್ತಿವೆ. ಸರ್ಕಾರವೂ ಕಾನ್ಸನ್​ಟ್ರೇಟರ್ ತರಿಸಿಕೊಳ್ಳುತ್ತಿದೆ.
ರಾಜ್ಯದಲ್ಲಿ ಆಕ್ಸಿಜನ್ ಸ್ವಾವಲಂಬನೆಗೆ ಇನ್ನೆಷ್ಟು ದಿನ ಬೇಕಾಗಬಹುದು?
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 137 ತಾಲೂಕುಗಳಲ್ಲಿ ಆಕ್ಸಿಜನ್ ಜನರೇಟರ್ ಸ್ಥಾಪಿಸಲಾಗುತ್ತಿದೆ. ತಿಂಗಳೊಳಗೆ ಉತ್ಪಾದನೆ ಆರಂಭಿಸಬಹುದು. ಈ ಘಟಕಗಳು ಬಂದರೆ ಬಹುತೇಕ ಸೆಲ್ಪ್ ಸಫಿಶಿಯಂಟ್ ಆಗುತ್ತದೆ. ಕೆಲವು ಬಳಕೆಯಾಗದ ಘಟಕ ಹುಡುಕಿ, ಅದರಿಂದ ಉತ್ಪಾದನೆ ಮಾಡಿಸಲಾಗುತ್ತಿದೆ.
ಆಕ್ಸಿಜನ್ ಸರಬರಾಜಿನದ್ದೆ ಸಮಸ್ಯೆಯಾಗಿದೆಯಲ್ಲ?
ಐಎಎಸ್ ಅಧಿಕಾರಿ ಮುನಿಶ್ ಮೌದ್ಗಿಲ್, ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ನೇತೃತ್ವದ ತಂಡ 24 ತಾಸು ಕೆಲಸ ಮಾಡುತ್ತಿದೆ. ಇವರು ಪ್ರತಿದಿನ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಬೇಡಿಕೆ, ಪೂರೈಕೆ ಬಗ್ಗೆ ಕೆಲಸ ಮಾಡುತ್ತಿದ್ದಾರೆ.
ಟ್ಯಾಂಕರ್, ಸಿಲಿಂಡರ್ ಕೊರತೆ ನಿವಾರಣೆ ಹೇಗೆ?
ಕೇಂದ್ರ ಸರ್ಕಾರ ಇಷ್ಟರಲ್ಲೇ 10 ಟ್ಯಾಂಕರ್ ನೀಡುತ್ತಿದೆ. ಇದರಿಂದ ಪ್ರತಿ ಎರಡು ಜಿಲ್ಲೆಗೊಂಡು ಟ್ಯಾಂಕರ್ ಬಳಸಿಕೊಳ್ಳಲು ಸಾಧ್ಯವಿದೆ. ಕೇಂದ್ರ ಸಿಲಿಂಡರನ್ನೂ ದೊಡ್ಡ ಪ್ರಮಾಣದಲ್ಲಿ ಒದಗಿಸುತ್ತಿದೆ, ರಾಜ್ಯ ಸರ್ಕಾರ ಕೂಡ ಖರೀದಿಸುತ್ತಿದೆ.
ಆಕ್ಸಿಜನ್ ಸಮಸ್ಯೆಗೆ ಯಾರು ಹೊಣೆ?
ಏಕಾಏಕಿ ಇಷ್ಟೊಂದು ಮೆಡಿಕಲ್ ಆಕ್ಸಿಜನ್ ಬೇಕಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆಸ್ಪತ್ರೆಗಳಲ್ಲಿ ವ್ಯವಸ್ಥಿತವಾಗಿ (ಎಕನಾಮಿ) ಬಳಸಬೇಕು. ಆರಂಭದಲ್ಲೇ ಸರ್ಕಾರ ನೀಡುವ ಕ್ವಾರಂಟೈನ್ ಕಿಟ್​ನಲ್ಲಿರುವ ಔಷಧ ಬಳಸಿದರೆ ಹೆಚ್ಚಿನವರಿಗೆ ಆಕ್ಸಿಜನ್ ಬೇಕಾಗುವುದೇ ಇಲ್ಲ.


ಕರೊನಾ ಸಂಭಾವ್ಯ 3ನೇ ಅಲೆ ಎದುರಿಸಲು ನಿಮಗೆ ಕೊಟ್ಟ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಿದ್ದೀರಿ?
ತಜ್ಞರ ಸಮಿತಿ ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಕುರಿತೂ ಟ್ರಯಲ್​ಗಳು ನಡೆಯುತ್ತಿವೆ. ಮಕ್ಕಳ ಸಲುವಾಗಿಯೇ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತ್ಯೇಕ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲು ಸೂಚನೆ ನೀಡಿದ್ದೇವೆ.
ಬೆಡ್ ಬ್ಲಾಕಿಂಗ್ ಸಮಸ್ಯೆ ಬಗೆಹರಿದಿದೆ ಅನಿಸಿದೆಯೇ?
ಆಸ್ಪತ್ರೆ ಬೆಡ್ ಎಲ್ಲರಿಗೂ ಸಿಗಬೇಕು ಎನ್ನುವ ಕಾರಣಕ್ಕೆ ಇವುಗಳ ಹಂಚಿಕೆಗೆ ಕೇಂದ್ರೀಕೃತ ವ್ಯವಸ್ಥೆ ತಂದಿದ್ದೇವೆ. ಹಂಚಿಕೆಯಲ್ಲೂ ಪಾರದರ್ಶಕತೆ ತಂದಿದ್ದೇವೆ. ಬೆಂಗಳೂರಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಯಾವ ರೋಗಿಗೆ ಯಾವ ರೀತಿಯ ಹಾಸಿಗೆ ನೀಡಬೇಕು ಎಂಬುದನ್ನು ನಿರ್ಧರಿಸಲು ಚಿಕಿತ್ಸೆ ನಿರ್ಧಾರ ಕೇಂದ್ರಗಳನ್ನು ಆರಂಭಿಸಿದ್ದೇವೆ. ಇದರಿಂದ ಗೊಂದಲ ಪರಿಹಾರವಾಗುತ್ತಿದೆ.
ಎರಡನೇ ಅಲೆಯಲ್ಲಂತೂ ಬೆಡ್ ಸಮಸ್ಯೆ ದೊಡ್ಡ ಚರ್ಚಾ ವಿಷಯವಾಗಿತ್ತು. ಮೂರನೇ ಅಲೆಗೆ ಏನು ಯೋಜಿಸಿದ್ದೀರಿ?
ಮೂರನೇ ಅಲೆ ನಿರ್ವಹಣೆಗೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೂ ತಯಾರಿ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಈಗಾಗಲೆ ಸೂಚನೆ ನೀಡಿದ್ದೇನೆ. ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುವ ಹಾಸಿಗೆಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯವರು ಶೇ.50 ಹಾಗೂ ಖಾಸಗಿ ಆಸ್ಪತ್ರೆಯವರು ಶೇ.75 ಹಾಸಿಗೆಗಳನ್ನು ಸರ್ಕಾರಿ ಕೋಟಾಕ್ಕೆ ಬಿಟ್ಟುಕೊಡುವಂತೆ ಕಟ್ಟುನಿಟ್ಟಿನ ಆದೇಶ ಮಾಡಿದ್ದೇವೆ. ಖಾಸಗಿ ಆಸ್ಪತ್ರೆಗಳು ಸರ್ಕಾರಿ ಕೋಟಾದ ಚಿಕಿತ್ಸೆಗೆ ಒದಗಿಸಿರುವ ಹಾಸಿಗೆಗಳ ರಿಯಾಲಿಟಿ ಚೆಕ್ ಮಾಡುವ ಮೂಲಕ ಹೆಚ್ಚಿನ ಹಾಸಿಗೆಗಳನ್ನು ಪಡೆದಿದ್ದೇವೆ.
ಲಾಕ್​ಡೌನ್​ನಲ್ಲಿ ಆಗಬೇಕಾಗಿದ್ದ ಕೊರತೆಗಳನ್ನು ನೀಗಿಸುವ ಕೆಲಸ ಆಗಿಲ್ಲ ಎಂಬ ಆರೋಪ ಇದೆಯಲ್ಲ?
ಲಾಕ್​ಡೌನ್ ಅವಧಿಯನ್ನು ಮೂಲಸೌಕರ್ಯ ಸುಧಾರಣೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ನಿರೀಕ್ಷಿತ ಸುಧಾರಣೆ ಆಗಲಿಲ್ಲ ಎಂಬುದು ತಪ್ಪು ಕಲ್ಪನೆ.
ಖಾಸಗಿ ಆಸ್ಪತ್ರೆಗಳು ಸುಲಿಗೆ ಮಾಡುತ್ತಿವೆ ಎಂಬ ದೂರುಗಳಿವೆ?
ಖಾಸಗಿ ಆಸ್ಪತ್ರೆಯಲ್ಲಿ ಸರ್ಕಾರ ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ಹಣ ವಸೂಲಿ ಮಾಡುತ್ತಿದ್ದರೆ, ಆರೋಗ್ಯ ಮಿತ್ರ ಸಹಾಯಕ ಕೇಂದ್ರಕ್ಕೆ ಮಾಹಿತಿ ಕೊಡಬಹುದು. ಜತೆಗೆ ಇಂತಹ ದೂರುಗಳ ಇತ್ಯಾರ್ಥಕ್ಕೆ ಬೆಂಗಳೂರಿನಲ್ಲಿ ಎಂಟು ವಲಯಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಜಿಲ್ಲೆಗಳಲ್ಲಿ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಇದ್ದಾರೆ.
ರೈತರೇ ಲಾಕ್​ಡೌನ್​ ಚಿಂತೆ ಬಿಡಿ, ನಿಮ್ಮ ಬೆಳೆಗೆ ಸೂಕ್ತ ಬೆಲೆಕೊಟ್ಟು ಖರೀದಿಸುವೆ, ಈ ನಂಬರ್​ಗೆ ಕರೆ ಮಾಡಿ: ನಟ ಉಪೇಂದ್ರ

ತೌಕ್ತೆ ಚಂಡಮಾರುತಕ್ಕೆ ತತ್ತರಿಸಿದ ಗೋವಾ; ಈಗಾಗಲೇ 100ಕ್ಕೂ ಅಧಿಕ ಮನೆಗಳಿಗೆ ಹಾನಿ, 2 ಸಾವು; ಈ ಸಂಖ್ಯೆ ಹೆಚ್ಚುವ ಸಾಧ್ಯತೆ..!












ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 18 =
Remember me
