ಕಾರವಾರ:ಬಾಂಬ್ ಹಾಕುವುದಾಗಿ ಪೋಸ್ಟ್ ಕಾರ್ಡ್​​ನಲ್ಲಿ ಹುಸಿ ಬೆದರಿಕೆ ಪತ್ರವೊಂದು ಭಟ್ಕಳ ಪೊಲೀಸ್ ಠಾಣೆ ತಲುಪಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೆದರಿಕೆ ಕಾರ್ಡ್ ಬರೆದ ಆರೋಪಿ ಹೊಸಪೇಟೆಯ ಹನುಮಂತಪ್ಪ ಎಂಬಾತನನ್ನು ಚೆನ್ನೈ ಪೊಲೀಸರು ಈಗಾಗಲೇ ಬಂಧಿಸಿದ್ದು, ಆತನನ್ನು ವಶಕ್ಕೆ ಪಡೆಯಲು ಭಟ್ಕಳ ಪೊಲೀಸರು ಕಾನೂನು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
“ಚೆನ್ನೈ ಕಲೆದಾ-ನೆಕ್ಟ್ಸ್ ಟಾರ್ಗೆಟ್ ಡಿಸೆಂಬರ್ 25 ಆ್ಯಂಡ್ ಹೆಪಿ ನ್ಯೂ ಇಯರ್ 2023 ಬ್ಲಾಸ್ಟ್”ಎಂದು ಇಂಗ್ಲೀಷ್​ನಲ್ಲಿ ಬರೆದ ಪೋಸ್ಟ್ ಕಾರ್ಡ್ ಡಿಸೆಂಬರ್​ನಲ್ಲಿ ಭಟ್ಕಳ ಪೊಲೀಸ್ ಠಾಣೆಗೆ ತಲುಪಿತ್ತು. ಸೂಕ್ಷ್ಮ ವಿಷಯವಾಗಿದ್ದರಿಂದ ವಿಷಯವನ್ನು ಬಹಿರಂಗ ಮಾಡದೇ ಪೊಲೀಸರು ತನಿಖೆ ನಡೆಸಿದ್ದರು. ಪೋಸ್ಟ್ ಕಾರ್ಡ್ ಧರ್ಮಸ್ಥಳದಿಂದ ಪೋಸ್ಟ್ ಆಗಿದ್ದು, ಭಯೋತ್ಪಾದಕ ಚಟುವಟಿಕೆಗೂ ಇದಕ್ಕೂ ಯಾವುದೇ ಲಿಂಕ್ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.‌
ಕಳ್ಳನ ಕೃತ್ಯ…?ಇದೇ ರೀತಿ ಪೋಸ್ಟ್ ಕಾರ್ಡ್ ಬೆದೆಕೆಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಹೊಸಪೇಟೆಯ ಹನುಮಂತಪ್ಪನನ್ನು ಬಂಧಿಸಿದ್ದಾರೆ.
ಆರೋಪಿ ಚೆನ್ನೈನಲ್ಲಿ ಲ್ಯಾಪ್ ಟಾಪ್ ಕಳ್ಳತನ ಮಾಡಿ ಅಂಗಡಿಯೊಂದಕ್ಕೆ‌ ಅದನ್ನು ಮಾರಲು ಹೋಗಿದ್ದ. ಅಂಗಡಿ ಮಾಲೀಕ ಅನುಮಾನ ಬಂದು ಐಡಿ‌ ಕಾರ್ಡ್ ಕೊಡು ಎಂದು ಕೇಳಿದ್ದಾನೆ. ಈ ವೇಳೆ ಅಲ್ಲಿಂದ‌ ತಪ್ಪಿಸಿಕೊಂಡು ಬಂದ ಹನುಮಂತಪ್ಪ, ಅಂಗಡಿ‌ ಮಾಲೀಕನ ಮೇಲಿನ‌ ಸಿಟ್ಟಿಗೆ ಆತನ ಮೊಬೈಲ್ ನಂಬರ್ ಹಾಕಿ‌ ಹುಸಿ ಬಾಂಬ್ ಬೆದರಿಕೆ ಪತ್ರ ಹಾಕಿದ್ದ ಎಂಬುದು ತನಿಖೆಯಿಂದ‌‌ ತಿಳಿದು‌ ಬಂದಿದೆ.
ಆತನೇ ಭಟ್ಕಳಕ್ಕೂ ಬಾಂಬ್ ಬೆದರಿಕೆ ಪತ್ರ ಬರೆದಿದ್ದಾನೆ ಎಂಬ ಮಾಹಿತಿ ಇದ್ದು, ನ್ಯಾಯಾಲಯದ ಅನುಮತಿ‌‌ ಪಡೆದು ಪ್ರಕರಣ ದಾಖಲಿಸಲಾಗಿದೆ. ಚೆನ್ನೈ ನ್ಯಾಯಾಲಯದಿಂದ ಬಾಡಿ ವಾರಂಟ್ ಮೇಲೆ‌ ಆತನನ್ನು ಪಡೆಯುವ ಕಾನೂನು ಪ್ರಕ್ರಿಯೆಗಳು‌ ಚಾಲ್ತಿಯಲ್ಲಿವೆ. ಆತನ‌ ವಿಚಾರಣೆಯ ನಂತರ ಹೆಚ್ಚಿನ ಅಂಶಗಳು ಬೆಳಕಿಗೆ ಬರಲಿವೆ ಎಂದು ಭಟ್ಕಳ ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − nine =
Remember me
