ಚಾಮರಾಜನಗರ:ನನಗೆ ಒಳ್ಳೆಯದಾಗಲಿ, ನನ್ನವರಿಗೆ ಒಳ್ಳೆಯದಾಗಲಿ, ನಮ್ಮವರಿಗೆ ಒಳಿತಾಗಲಿ ಎಂದು ದೇವರಲ್ಲಿ ಕೋರಿಕೆ ಸಲ್ಲಿಸುವುದುಂಟು. ಮಾತ್ರವಲ್ಲ, ಇಂಥದ್ದೇ ಕೋರಿಕೆಗಳೊಂದಿಗೆ ಹರಕೆ ಹೇಳಿಕೊಳ್ಳುವುದೂ ಇರುತ್ತದೆ. ಆದರೆ ಇಲ್ಲೊಂದು ಕಡೆ ದೇವರ ಹರಕೆ ಹುಂಡಿಯಲ್ಲಿ ವಿಕೃತ ಕೋರಿಕೆಯ ಚೀಟಿ ಸಿಕ್ಕಿದೆ.
ಚಾಮರಾಜನಗರದ ಕೊಳ್ಳೇಗಾಲದ ಶ್ರೀಲಕ್ಷ್ಮೀನಾರಾಯಣ ದೇವಾಲಯದ ಹುಂಡಿ ಎಣಿಕೆ ವೇಳೆ ವಿಚಿತ್ರವಾದ ಕೋರಿಕೆಯ ಹರಕೆ ಚೀಟಿ ಸಿಕ್ಕಿದೆ. ಭಕ್ತನೊಬ್ಬನ ವಿಕೃತ ಮನಸ್ಥಿತಿಯನ್ನು ಈ ಹರಕೆ ಚೀಟಿ ಅನಾವರಣಗೊಳಿಸಿದೆ. ಬಳ್ಳಾರಿ ಜಿಲ್ಲೆಯ ವಿಳಾಸ ಬರೆದು ಈ ಹರಕೆ ಚೀಟಿಯನ್ನು ಹುಂಡಿಗೆ ಹಾಕಲಾಗಿದೆ.
ಒಂದು ಕುಟುಂಬದವರ ಹೆಸರು ಬರೆದು, ಇವರೆಲ್ಲ ನರಳಿ ನರಳಿ ಸಾಯಬೇಕು, ನಮ್ಮ ಮನೆಯ ಬಳಿ ಇವರು ಇರದಂತೆ ಮಾಡಬೇಕು, ಒಂದು ವರ್ಷದೊಳಗೆ ಇವನು ಸಾಯಬೇಕು ಎಂಬುದಾಗಿ ಬರೆದಿರುವ ಚೀಟಿ ಈ ದೇವಸ್ಥಾನದ ಹುಂಡಿ ಹಣ ಎಣಿಕೆ ವೇಳೆ ಸಿಕ್ಕಿದೆ. ಈ ವಿಚಿತ್ರ ಹಾಗೂ ವಿಕೃತ ಹರಕೆ ಚೀಟಿಯನ್ನು ನೋಡಿ ದೇವಸ್ಥಾನದ ಸಿಬ್ಬಂದಿಯೂ ಒಮ್ಮೆ ದಿಗ್ಭ್ರಾಂತರಾಗುವಂತಾಗಿದೆ.

ಶಾಲೆಯಲ್ಲಿ ಹೃದಯಾಘಾತಕ್ಕೊಳಗಾಗಿ ಸಾವಿಗೀಡಾದ್ಲು 8ನೇ ತರಗತಿ ವಿದ್ಯಾರ್ಥಿನಿ

ಇಬ್ಬರು ವಯಸ್ಕ ಪುತ್ರಿಯರ ಜತೆ ನದಿಗೆ ಹಾರಿದ ತಾಯಿ; ಮೂವರ ಶವವೂ ಪತ್ತೆ

ಬಾಮೈದುನನ ಕೊಂದ ಬಾವ, ಪೊಲೀಸ್ ಠಾಣೆಗೆ ಬಂದು ಶರಣಾದ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 11 =
Remember me
