ಬೆಂಗಳೂರು :ಕರ್ಫ್ಯೂ ಸಂದರ್ಭದಲ್ಲಿ ಬಾಗಿಲು ಮುಚ್ಚದಿರುವ ಪಬ್ ಹಾಗೂ ಮದ್ಯದಂಗಡಿಗಳ ಪರವಾನಗಿಯನ್ನೇ ಅಮಾನತು ಮಾಡಲಾಗುವುದು ಎಂದು ಅಬಕಾರಿ ಇಲಾಖೆ ಸಚಿವ ಎಚ್. ನಾಗೇಶ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಪಾಕಿಸ್ತಾನಕ್ಕೆ ಪಾಕಿ ಎಂದ ಅರ್ನಬ್: ಜನಾಂಗೀಯ ನಿಂದನೆ ಎಂದು ಬ್ರಿಟನ್​ನಿಂದ 20 ಲಕ್ಷ ದಂಡ!
ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲು ಕಮಿಷನರ್‌ಗೆ ಸೂಚಿಸಿದ್ದೇನೆ. ಬ್ರಿಟನ್‌ನಲ್ಲಿ ಕಂಡುಬಂದಿರುವ ರೂಪಾಂತರಿ ಕರೊನಾ ತಡೆಯುವ ಸಲುವಾಗಿ ಸರ್ಕಾರ ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ಕರ್ಫ್ಯೂ ವಿಧಿಸಿದೆ. ಹಾಗಾಗಿ, ಎಲ್ಲ ಮದ್ಯದಂಗಡಿ ಮಾಲೀಕರು ಕಡ್ಡಾಯವಾಗಿ ರಾತ್ರಿ 10 ಗಂಟೆಯೊಳಗೆ ಪಬ್ ಹಾಗೂ ಬಾರ್‌ಗಳನ್ನು ಬಂದ್ ಮಾಡಬೇಕು. ಇಲ್ಲದಿದ್ದರೆ, ಅಬಕಾರಿ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದರು.
ಇದನ್ನೂ ಓದಿ:ಹೋಟೆಲ್​ ರೂಂನ ಬೆಡ್​ಶೀಟ್​ನಲ್ಲಿ ಹೆಂಡತಿಯ ಮೃತದೇಹ ಸುತ್ತಿಟ್ಟು ಪರಾರಿಯಾದ ಗಂಡ! ಬಾಗಿಲು ತೆರೆದ ಸಿಬ್ಬಂದಿಗೆ ಕಾದಿತ್ತು ಶಾಕ್​!
ನಿತ್ಯ 30 ಕೋಟಿ ನಷ್ಟ:ಲಾಕ್‌ಡೌನ್ ಸಂದರ್ಭದಲ್ಲಿ ಇಲಾಖೆಗೆ ಅಂದಾಜು 2 ಸಾವಿರ ಕೋಟಿ ರೂ.ನಷ್ಟವಾಗಿತ್ತು. ಲಾಕ್‌ಡೌನ್ ತೆರವು ಬಳಿಕ ನಷ್ಟವಾಗಿರುವ ಆದಾಯದಲ್ಲಿ ಚೇತರಿಕೆ ಕಾಣುತ್ತಿತ್ತು. ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ 300 ಕೋಟಿ ರೂ.ಆದಾಯದಲ್ಲಿ ಹಿಂದೆ ಇದ್ದೇವೆ. ಆದರೆ, ಇದೀಗ ಕರ್ಯ್ೂಯಿಂದ ಪ್ರತಿ ನಿತ್ಯ ಅಂದಾಜು 30 ಕೋಟಿ ರೂ. ಇಲಾಖೆಗೆ ನಷ್ಟವಾಗುತ್ತದೆ. ಆದರೆ ಸರ್ಕಾರ ನಿಯಮವನ್ನು ಪಾಲನೆ ಮಾಡಲೇಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eighteen =
Remember me
